PM Narendra Modi: ಆಧಾರ್​ ಕಾರ್ಡ್​ನಿಂದ 2 ವರ್ಷದ ಬಳಿಕ ಹೆತ್ತವರನ್ನು ಸೇರಿದ ಯುವತಿಯ ಕತೆ ಹಂಚಿಕೊಂಡ ಮೋದಿ; ವಿಡಿಯೋ ಇಲ್ಲಿದೆ

ರೈಲ್ವೆ ಸ್ಟೇಷನ್​ನಲ್ಲಿ ಮನೆಯವರಿಂದ ಬೇರ್ಪಟ್ಟಿದ್ದ ಯುವತಿಯೊಬ್ಬಳು ಆಧಾರ್​ ಕಾರ್ಡ್​ನಿಂದಾಗಿ 2 ವರ್ಷಗಳ ಬಳಿಕ ಮತ್ತೆ ಹೆತ್ತವರನ್ನು ಸೇರಿಕೊಂಡಿದ್ದಾಳೆ. ಈ ಕತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.

PM Narendra Modi: ಆಧಾರ್​ ಕಾರ್ಡ್​ನಿಂದ 2 ವರ್ಷದ ಬಳಿಕ ಹೆತ್ತವರನ್ನು ಸೇರಿದ ಯುವತಿಯ ಕತೆ ಹಂಚಿಕೊಂಡ ಮೋದಿ; ವಿಡಿಯೋ ಇಲ್ಲಿದೆ
ಯುವತಿಯ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ
Image Credit source: india tv news
TV9kannada Web Team

| Edited By: Sushma Chakre

Jul 05, 2022 | 2:12 PM

ನವದೆಹಲಿ: ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ‘ಡಿಜಿಟಲ್ ಇಂಡಿಯಾ ವೀಕ್ 2022’ (Digital India Week 2022) ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಎರಡು ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾದ ಯುವತಿಯ ಭಾವನಾತ್ಮಕ ಕಥೆಯನ್ನು ಹಂಚಿಕೊಂಡಿದ್ದಾರೆ. ಮೋದಿಯೊಂದಿಗೆ ಆ ಯುವತಿ ತನ್ನ ಕತೆಯನ್ನು ಹೇಳಿಕೊಂಡಿರುವ ವಿಡಿಯೋ (Viral Video) ಇದೀಗ ವೈರಲ್ ಆಗಿದೆ.

ಆ ಯುವತಿ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಾಗ ರೈಲ್ವೆ ನಿಲ್ದಾಣದಲ್ಲಿ ತನ್ನ ಕುಟುಂಬದಿಂದ ದೂರವಾಗಿದ್ದರು. ಮನೆಯವರಿಂದ ಬೇರ್ಪಟ್ಟಿದ್ದ ಆಕೆಯನ್ನು ಸೀತಾಪುರದ ಅನಾಥಾಶ್ರಮಕ್ಕೆ ಕಳುಹಿಸಲು ಅಪರಿಚಿತರೊಬ್ಬರು ಕರೆದುಕೊಂಡು ಹೋಗಿದ್ದರು. ಅದಾಗಿ 2 ವರ್ಷಗಳ ಬಳಿಕ ಆಕೆ ತನ್ನ ಹೆತ್ತವರನ್ನು ಸೇರಿಕೊಂಡಿದ್ದಾಳೆ.

“ನಾನು ಎರಡು ವರ್ಷಗಳ ಕಾಲ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದೆ. ನಾನು 12ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾದಾಗ ಇತರ ಹಲವಾರು ಹುಡುಗಿಯರು ತಮ್ಮ ಸಂಬಂಧಿಕರ ಮನೆಗಳಿಗೆ ಹಿಂತಿರುಗಿದರು. ಆದರೆ, ನನಗೆ ಯಾವುದೇ ಮನೆಯೂ ಇಲ್ಲದ ಕಾರಣ ಅನಾಥಾಶ್ರಮದವರು ನನ್ನನ್ನು ಅವರ ಲಕ್ನೋ ಶಾಖೆಗೆ ಸ್ಥಳಾಂತರಿಸಿದರು” ಎಂದು ಯುವತಿ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಹಿಂದೂಗಳಿಗೆ ಸೀಮಿತವಾಗದೆ ಎಲ್ಲಾ ವಂಚಿತ, ದೀನದಲಿತ ಸಮುದಾಯಗಳನ್ನು ತಲುಪುವಂತೆ ಮೋದಿ ಕರೆ

ಅಧಿಕಾರಿಗಳು ಆಧಾರ್ ಕಾರ್ಡ್ ನೀಡಲು ಬಂದಿದ್ದಾಗ ಇಲ್ಲಿಗೆ ಬಂದಿದ್ದರು. ಆಗ ತನಿಖೆ ನಡೆಸಿದಾಗ ಅನಾಥಾಶ್ರಮದ ಅಧಿಕಾರಿಗಳಿಗೆ ಆ ಬಾಲಕಿಗೆ ಈಗಾಗಲೇ ಆಧಾರ್ ಕಾರ್ಡ್ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಾಥಾಶ್ರಮದ ಅಧಿಕಾರಿಗಳು ಆಕೆಯ ಆಧಾರ್ ಕಾರ್ಡ್‌ನಲ್ಲಿದ್ದ ವಿವರಗಳನ್ನು ಬಳಸಿಕೊಂಡು ಆ ಯುವತಿಯ ಕುಟುಂಬವನ್ನು ಹುಡುಕಲು ಸಹಾಯ ಮಾಡಿದರು.

ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಂಚಿಕೊಂಡ ಹಲವು ಘಟನೆಗಳಲ್ಲಿ ಇದೂ ಒಂದು. ಡಿಜಿಟಲ್ ಇಂಡಿಯಾದ ಮತ್ತೊಂದು ಘಟನೆಯನ್ನು ಹಂಚಿಕೊಂಡ ಪ್ರಧಾನಿ ಮೋದಿ, “ಈಗ ಬೀದಿ ವ್ಯಾಪಾರಿ ಕೂಡ ಮಾಲ್‌ನ ಶೋರೂಮ್ ಬಳಸುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಭಿಕ್ಷುಕನೊಬ್ಬ ಡಿಜಿಟಲ್ ಪಾವತಿ ಕ್ಯೂಆರ್ ಕೋಡ್ ಬಳಸುತ್ತಿರುವ ವೀಡಿಯೊವನ್ನು ನಾನು ನೋಡಿದ್ದೇನೆ” ಎಂದು ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada