AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

Urban Challenge Fund can help cities become economic growth engine: ಕೇಂದ್ರ ಸಂಪುಟವು ಒಂದು ಲಕ್ಷ ಕೋಟಿ ರೂ ಮೊತ್ತದ ಅರ್ಬನ್ ಚಾಲೆಂಜ್ ಫಂಡ್ ಬಿಡುಗಡೆಗೆ ಅನುಮೋದನೆ ಕೊಟ್ಟಿದೆ. ಮುಂದಿನ ಐದು ವರ್ಷಕ್ಕೆ ಈ ಫಂಡ್ ಬಳಕೆಯಾಗಲಿದ್ದು, ಇದು ಒಟ್ಟಾರೆ ನಾಲ್ಕು ಲಕ್ಷ ಕೋಟಿ ರೂ ಹೂಡಿಕೆಗೆ ಎಡೆ ಮಾಡಿಕೊಡಲಿದೆ. ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರಗಳಲ್ಲಿ ಆರ್ಥಿಕವಾಗಿ ಲಾಭವಾಗುವಂತಹ ಅಭಿವೃದ್ಧಿ ಯೋಜನೆಗಳಿಗೆ ಉತ್ತೇಜನ ನೀಡಲು ಈ ಫಂಡ್ ಬಳಕೆಯಾಗಲಿದೆ.

ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್
ನಗರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 15, 2026 | 1:10 PM

Share

ನವದೆಹಲಿ, ಫೆಬ್ರುವರಿ 15: ನಗರಗಳನ್ನು ಆರ್ಥಿಕ ಅಭಿವೃದ್ಧಿ ಎಂಜಿನ್ ಆಗಿ ಮಾರ್ಪಡಿಸಲು ಕೇಂದ್ರ ಸಂಪುಟವು ಅರ್ಬನ್ ಚಾಲೆಂಜ್ ಫಂಡ್ (Urban Challenge Fund) ಅನ್ನು ಆರಂಭಿಸಿದೆ. ಇದಕ್ಕಾಗಿ ಒಂದು ಲಕ್ಷ ಕೋಟಿ ರೂ ಮೀಸಲಿರಿಸಿದೆ. ಮುಂದಿನ ಐದು ವರ್ಷಕ್ಕೆ ಈ ಫಂಡ್ ಬಳಕೆಯಾಗಲಿದ್ದು, ದೇಶದ ವಿವಿಧ ನಗರಗಳಲ್ಲಿ ಒಟ್ಟಾರೆ ನಾಲ್ಕು ಲಕ್ಷ ಕೋಟಿ ರೂ ಹೂಡಿಕೆ ಆಗಲಿದೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಫಂಡಿಂಗ್ ಸಾಂಪ್ರದಾಯಿಕ ಅನುದಾನ ಆಧಾರಿತವಾಗಿರುವುದಿಲ್ಲ. ಮಾರುಕಟ್ಟೆ ಮತ್ತು ಸುಧಾರಣೆ ಆಧಾರಿತವಾದ ನಗರ ಅಭಿವೃದ್ಧಿ ಮಾದರಿಯನ್ನು ಅನುಸರಿಸಲಾಗುತ್ತದೆ.

ನಗರಗಳಲ್ಲಿನ ಯೋಜನೆಗಳು ಸರ್ಕಾರಿ ಅನುದಾನಗಳ ಮೇಲೆ ಅವಲಂಬಿತವಾಗಿರುವುದನ್ನು, ಮತ್ತು ಅನುಷ್ಠಾನದಲ್ಲಿ ಶಿಸ್ತಿನ ಕೊರತೆ ಇರುವುದನ್ನು ತಪ್ಪಿಸಲು ಈ ಹೊಸ ಮಾದರಿ ಕಂಡುಕೊಳ್ಳಲಾಗಿದೆ. ಸುಧಾರಣೆ, ಸ್ವಾವಲಂಬನೆಯನ್ನು ಉತ್ತೇಜಿಸಲಾಗುತ್ತದೆ. ನಗರ ಮೂಲಸೌಕರ್ಯ ಯೋಜನೆಗಳಲ್ಲಿ ಖಾಸಗಿ ಹೂಡಿಕೆಗೂ ಉತ್ತೇಜಿಸಲಾಗುತ್ತದೆ.

ಇದನ್ನೂ ಓದಿ: ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಕೇಂದ್ರದಿಂದ ಶೇ. 25 ಫಂಡಿಂಗ್; ಉಳಿದವು?

ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳು ಅರ್ಬನ್ ಚಾಲೆಂಜ್ ಫಂಡ್ ಪಡೆಯಲು ಅರ್ಹವಾಗಿರುತ್ತವೆ.

ಆಯ್ಕೆಯಾಗುವ ಯೋಜನೆಗಳಿಗೆ ಶೇ. 25ರಷ್ಟು ಫಂಡಿಂಗ್ ಅನ್ನು ಕೇಂದ್ರ ಒದಗಿಸುತ್ತದೆ. ಮುನಿಸಿಪಾಲ್ ಬಾಂಡ್, ಬ್ಯಾಂಕ್ ಸಾಲ, ಪಬ್ಲಿಕ್-ಪ್ರೈವೇಟ್ ಪಾಲುದಾರಿಕೆಗಳ ಮೂಲಕ ಕನಿಷ್ಠ ಶೇ. 50ರಷ್ಟು ಫಂಡಿಂಗ್ ಅನ್ನು ನಗರಗಳು ಸೃಷ್ಟಿಸಿಕೊಳ್ಳಬೇಕು. ಇನ್ನುಳಿದ ಹಣವನ್ನು ರಾಜ್ಯಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಇತರರ ಮೂಲಕ ಪಡೆಯಬೇಕು.

ಪ್ರಾಜೆಕ್ಟ್​ಗಳಿಗೆ ಸುಮ್ಮನೆ ಫಂಡಿಂಗ್ ಸಿಕ್ಕೋದಿಲ್ಲ

ಪ್ರಾಜೆಕ್ಟ್​ಗಳಿಗೆ ಸುಮ್ಮನೆ ಫಂಡಿಂಗ್ ಸಿಕ್ಕೋದಿಲ್ಲ. ಯೋಜನೆಯಿಂದ ಆರ್ಥಿಕ ಪರಿಣಾಮ, ಸುಸ್ಥಿರತೆ, ಹವಾಮಾನ ಭದ್ರತೆ, ಸುಧಾರಣಾ ಕ್ರಮಗಳ ಅನುಷ್ಠಾನ, ದೀರ್ಘಾವಧಿ ಹಣಕಾಸು ಸ್ವಾವಲಂಬನೆ ಹೇಗೆ ಸಾಧಿಸಲಾಗುತ್ತದೆ ಎಂಬುದನ್ನು ಮನವರಿಕೆ ಮಾಡುವ ಪ್ರಾಜೆಕ್ಟ್​ಗಳಿಗೆ ಫಂಡಿಂಗ್ ಸಿಗುತ್ತದೆ. ಅದರಲ್ಲೂ ಪ್ರಾಜೆಕ್ಟ್​ನ ಬೆಳವಣಿಗೆ ಹೇಗೆ ಆಗುತ್ತಿದೆ ಎಂದು ನೋಡಿಕೊಂಡು ಹಂತ ಹಂತವಾಗಿ ಫಂಡಿಂಗ್ ಕೊಡಲಾಗುತ್ತದೆ. ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ವಿಫಲವಾಗುವ ನಗರಗಳಿಗೆ ಮತ್ತಷ್ಟು ಫಂಡಿಂಗ್ ಸಿಕ್ಕೋದಿಲ್ಲ.

ಇದನ್ನೂ ಓದಿ: ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

ನಗರ ಸ್ಥಳೀಯ ಸಂಸ್ಥೆಗಳಿಗೆ ಯಾರು ಕೊಡುತ್ತಾರೆ ಸಾಲ?

ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚಾಗಿ ಸರ್ಕಾರಿ ಅನುದಾನ ಪಡೆದು ಜೀವಂತವಾಗಿರುವಂತಹವು. ಇವುಗಳಿಗೆ ಕ್ರೆಡಿಟ್ ಹಿಸ್ಟರಿ ಇಲ್ಲದಿರುವುದರಿಂದ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುವುದು ಕಷ್ಟ. ಅದಕ್ಕಾಗಿ ಕೇಂದ್ರ ಸಂಪುಟವು 5,000 ರೂಗಳ ಕ್ರೆಡಿಟ್ ರೀಪೇಮೆಂಟ್ ಗ್ಯಾರಂಟಿ ಸ್ಕೀಮ್ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ