AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್ ಸಿಎಂ ಆಗುವ ಮುನ್ನ ನರೇಂದ್ರ ಮೋದಿ ಹೇಗಿದ್ದರು? ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪತ್ರಕರ್ತರೊಬ್ಬರು ಕಣ್ಣಾರೆ ಕಂಡಿದ್ದು ಇದು

How was Narendra Modi before becoming Gujarat CM: ಸೆಮಿಕಂಡಕ್ಟರ್ ಚಿಪ್, ಎಐ, ಯುಪಿಐ, ಡಿಜಿಟಲ್ ಇಂಡಿಯಾ ಇತ್ಯಾದಿ ತಂತ್ರಜ್ಞಾನಗಳ ವ್ಯಾಮೋಹಿಯಾದ ನರೇಂದ್ರ ಮೋದಿ ಅವರು ಹಿಂದೆ ಹೇಗಿದ್ದರು? ಬಿಸಿಸಿಐ ಉಪಾಧ್ಯಕ್ಷರೂ, ಕಾಂಗ್ರೆಸ್ ಮುಖಂಡರೂ ಮತ್ತು ಮಾಜಿ ಪತ್ರಕರ್ತರೂ ಆದ ರಾಜೀವ್ ಶುಕ್ಲ ಹಳೆಯ ಘಟನೆಗಳನ್ನು ಮೆಲುಕುಹಾಕಿದ್ದಾರೆ. 1995ರಿಂದ 2001ರವರೆಗೆ ಬಿಜೆಪಿ ಕಾರ್ಯದರ್ಶಿಯಾಗಿದ್ದ ದಿನಗಳಲ್ಲಿ ಮೋದಿ ಅವರನ್ನು ಕಂಡಿದ್ದಾಗ ಅವರ ವ್ಯಕ್ತಿತ್ವ ಹೇಗಿತ್ತು ಎಂದು ಶುಕ್ಲಾ ನೆನಪಿಸಿಕೊಂಡಿದ್ದಾರೆ.

ಗುಜರಾತ್ ಸಿಎಂ ಆಗುವ ಮುನ್ನ ನರೇಂದ್ರ ಮೋದಿ ಹೇಗಿದ್ದರು? ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪತ್ರಕರ್ತರೊಬ್ಬರು ಕಣ್ಣಾರೆ ಕಂಡಿದ್ದು ಇದು
ನರೇಂದ್ರ ಮೋದಿ ಅವರ ಹಳೆಯ ದಿನಗಳ ಒಂದು ಫೋಟೋ (ಸಾಂದರ್ಭಿಕ)
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 25, 2026 | 5:28 PM

Share

ನವದೆಹಲಿ, ಜನವರಿ 25: ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಸ ತಂತ್ರಜ್ಞಾನಗಳ ಬಳಕೆಗೆ ಆಸಕ್ತಿ ಹೊಂದಿರುವಂತಹ ವ್ಯಕ್ತಿ. ಮೋದಿ ಅವರು ಪ್ರಧಾನಿಯಾಗುವುದಕ್ಕೆ ಮುಂದೆ ದಶಕಕ್ಕೂ ಹೆಚ್ಚು ಕಾಲ ಗುಜರಾತ್​ನ ಮುಖ್ಯಮಂತ್ರಿ ಆಗಿದ್ದವರು. ಸಿಎಂ ಆಗಿದ್ದಾಗಲೂ ಅವರು ಟೆಕ್ ಸವ್ವಿ ಎಂದೆನಿಸಿದ್ದರು. ಆದರೆ, ಮುಖ್ಯಮಂತ್ರಿ ಆಗುವ ಮುನ್ನ ನರೇಂದ್ರ ಮೋದಿ ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನೆಗಳೊಳಗೆ ಬಿಟ್ಟರೆ ಬೇರೆಲ್ಲೂ ಪರಿಚಿತರಿದ್ದವರಲ್ಲ. ಹೆಚ್ಚೂಕಡಿಮೆ ಸಾಮಾನ್ಯ ಕಾರ್ಯಕರ್ತನಂತೆಯೇ ಲೋ ಪ್ರೊಫೈಲ್​ನಲ್ಲಿ ಇದ್ದವರು. ಆದರೂ ಕೂಡ ಮೋದಿ ಅವರ ವೈಯಕ್ತಿಕ ಟೆಕ್ ಅಭಿರುಚಿ ಈಗಿನಂತೆ ಹಿಂದೆಯೂ ಇತ್ತು. ಹಿರಿಯ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲ 2001ಕ್ಕೆ ಮುಂಚಿನ ಮೋದಿಯನ್ನು ಸ್ಮರಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿನಗಳಲ್ಲಿ ಕಂಪ್ಯೂಟರ್ ಇಟ್ಟುಕೊಳ್ಳುತ್ತಿದ್ದುದನ್ನು ತಾನು ಕಂಡಿದ್ದೇನೆ ಎಂದು ಆಗ ಪತ್ರಕರ್ತರಾಗಿದ್ದ ರಾಜೀವ್ ಶುಕ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಆ್ಯಪಲ್​ನಂತಹ ಮೊಬೈಲ್ ಕಂಪನಿ ಸದ್ಯದಲ್ಲೇ ಶುರುವಾಗುತ್ತಾ? ಡಾವೊಸ್​ನಲ್ಲಿ ಸುಳಿವು ಕೊಟ್ಟ ಸಚಿವರು

ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ತಾನು ಮೊದಲ ಬಾರಿಗೆ ಮೋದಿ ಅವರನ್ನು ನೋಡಿದೆ. ಪತ್ರಕರ್ತನಾಗಿದ್ದ ತಾನು ‘ರುಬ್ರು’ ಎನ್ನುವ ಕಾರ್ಯಕ್ರಮದ ಸಲುವಾಗಿ ಮೋದಿ ಅವರನ್ನು ಸಂದರ್ಶಿಸಿದ್ದಾಗಿ ಶುಕ್ಲಾ ಮಾಹಿತಿ ಹಂಚಿಕೊಂಡಿದ್ದಾರೆ.

‘ರುಬ್ರು ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಮೋದಿ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದುದು ಅದೇ ಮೊದಲಿರಬೇಕು. ನಾವು ಜೇಟ್ಲಿ ನಿವಾಸದಲ್ಲಿ ಸಂಧಿಸುತ್ತಿದ್ದೆವು. ಸಂದರ್ಶನದ ವೇಳೆ ಅವರು ತಮ್ಮೊಂದಿಗೆ ಒಂದು ಸಣ್ಣ ಕಂಪ್ಯೂಟರ್ ಕೂಡ ತಂದಿದ್ದನ್ನು ಕಂಡಿದ್ದೆ. ಮೋದಿ ಆ ಸಂದರ್ಭದಲ್ಲೂ ದೊಡ್ಡ ವ್ಯಕ್ತಿತ್ವದವರಂತೆ ಭಾಸವಾಗುತ್ತಿತ್ತು’ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ ಅವರು ಎಎನ್​ಐಗೆ ಮಾಹಿತಿ ನೀಡಿದ್ದಾರೆ.

ಮೋದಿ ಸಿಎಂ ಆಗ್ತಾರೆ ಅಂತ ಅನಿಸಿತ್ತಾ?

ಅಂದು ಮೋದಿ ಕಂಡಿದ್ದಾಗ, ಈ ವ್ಯಕ್ತಿ ಮುಂದೆ ಸಿಎಂ ಮತ್ತು ಪಿಎಂ ಆಗಬಹುದು ಎನ್ನುವ ಕಲ್ಪನೆ ಮನಸ್ಸಿಗೆ ಬಂದಿತ್ತಾ ಎನ್ನುವ ಪ್ರಶ್ನೆಗೆ ರಾಜೀವ್ ಶುಕ್ಲ ಅವರು ಇಲ್ಲ ಎಂದಿದ್ದಾರೆ. ‘ಅವರಿಗೆ ಚುನಾವಣಾ ರಾಜಕೀಯ ಪ್ರವೇಶಿಸುವ ಭಾವನೆ ಇರಲಿಲ್ಲ. ಸಂಘಟನಾತ್ಮಕ ಕೆಲಸ ಬಯಸುತ್ತಿದ್ದರು. ಅವರು ಸಂಘಟನಾತ್ಮಕ ವ್ಯಕ್ತಿ. ಪಕ್ಷದ ಸಂಘಟನೆ ಬೆಳೆಸುವುದು, ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲಲು ಆಸಕ್ತರಾಗಿದ್ದರು’ ಎಂದು ಬಿಸಿಸಿಐನ ಉಪಾಧ್ಯಕ್ಷರೂ ಆದ ಶುಕ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ

ನರೇಂದ್ರ ಮೋದಿ ಅವರು 2001ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗುವುದಕ್ಕೂಮುನ್ನ 1995ರಿಂದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಹರ್ಯಾಣ ಮತ್ತು ಹಿಮಾಚಲಪ್ರದೇಶದಲ್ಲಿ ಪಕ್ಷದ ಸಂಘಟನೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2001ರಲ್ಲಿ ನರೇಂದ್ರ ಮೋದಿ ಅವರಿಗೆ ಗುಜರಾತ್ ಮುಖ್ಯಮಂತ್ರಿ ಜವಾಬ್ದಾರಿ ಕೊಟ್ಟರು. ಅದಾಗಿನಿಂದ ಮೋದಿ ಹಿಂದಿರುಗಿ ನೋಡಿದ್ದೇ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ