‘ನನ್ನ ಕುಟುಂಬದ ಕುರಿತ ಸುಳ್ಳು ಸಂಗತಿಗಳಿಂದ ನೋವಾಗಿತ್ತು’; ಆತ್ಮಕತೆ ಬರೆಯಲು ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ
ತಮ್ಮ ಕುಟುಂಬದ ಸದಸ್ಯರ ಕುರಿತು ಪ್ರಚಲಿತದಲ್ಲಿದ್ದ 'ಅವಾಸ್ತವಿಕ' ಮತ್ತು ಸತ್ಯಕ್ಕೆ ದೂರವಾದ ಕತೆಗಳಿಂದ ತನಗೆ ತೀವ್ರ ನೋವಾಗಿತ್ತು. ಹೀಗಾಗಿ, ಸತ್ಯಾಂಶವನ್ನು ದಾಖಲಿಸುವ ಉದ್ದೇಶದಿಂದಲೇ ತಾನು ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಎಂಬ ಆತ್ಮಕತೆಯನ್ನು ಬರೆದಿರುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಸೋಮವಾರ ನಡೆದ ತಮ್ಮ ಆತ್ಮಕಥೆಯ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪುಸ್ತಕ ರಚನೆಯ ಹಿಂದಿನ ಭಾವನಾತ್ಮಕ ಕಾರಣಗಳು, ಭಾರತಕ್ಕೆ ಬಂದ ಆರಂಭಿಕ ದಿನಗಳ ಸವಾಲುಗಳು ಹಾಗೂ ಓದುಗರ ಪ್ರತಿಕ್ರಿಯೆಯ ಕುರಿತು ಮುಕ್ತವಾಗಿ ಮಾತನಾಡಿದರು.

ನವದೆಹಲಿ, ನವೆಂಬರ್ 16: ಹಲವು ವರ್ಷಗಳಿಂದ ತಮ್ಮ ಕುಟುಂಬದ ಬಗ್ಗೆ ಹಲವಾರು ನೋವುಂಟುಮಾಡುವ ಮತ್ತು ಸತ್ಯಕ್ಕೆ ದೂರವಾದ ಸಂಗತಿಗಳನ್ನು ಹೇಳಲಾಗಿದ್ದು, ತಮ್ಮ ಕಡೆಯ ಸತ್ಯವನ್ನು ಜನರ ಮುಂದಿಡಲು ಈ ಪುಸ್ತಕವೊಂದು ಉತ್ತಮ ಅವಕಾಶ ಎಂದು ಭಾವಿಸಿ ‘ಬಿಲಾಂಗಿಂಗ್’ ಎಂಬ ಆತ್ಮಕತೆಯನ್ನು ಬರೆಯಲು ಮುಂದಾದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆದ ತಮ್ಮ ಪುಸ್ತಕದ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ತಮ್ಮ ಜೀವನದ ಬಗ್ಗೆ ಬರೆಯುವಂತೆ ಹಲವಾರು ಸ್ನೇಹಿತರು ಪ್ರೋತ್ಸಾಹಿಸಿದರೂ ಆರಂಭದಲ್ಲಿ ತನ್ನ ಆಂತರಿಕ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದ್ದೆ ಎಂದು ಹೇಳಿದ್ದಾರೆ.
ಕುಟುಂಬದ ಬಗೆಗಿನ ಸುಳ್ಳು ಸುದ್ದಿಗಳಿಗೆ ಉತ್ತರ ನೀಡುವ ಪ್ರಯತ್ನ:
ಆತ್ಮಕತೆ ಬರೆಯುವ ತಮ್ಮ ನಿರ್ಧಾರವನ್ನು ವಿವರಿಸಿದ ಸೋನಿಯಾ ಗಾಂಧಿ, ತಮ್ಮ ಅತ್ತೆ (ಇಂದಿರಾ ಗಾಂಧಿ), ಮಗ (ರಾಹುಲ್ ಗಾಂಧಿ) ಮತ್ತು ಮಗಳು (ಪ್ರಿಯಾಂಕಾ ಗಾಂಧಿ) ಸೇರಿದಂತೆ ತಮ್ಮ ಕುಟುಂಬದ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳಲಾಗುತ್ತಿದೆ. ಅದರಲ್ಲಿ ಹೆಚ್ಚಿನವು ಸತ್ಯಕ್ಕೆ ದೂರವಾಗಿವೆ ಎಂದಿದ್ದಾರೆ. “ನನ್ನ ಕುಟುಂಬ, ನನ್ನ ಅತ್ತೆ, ನನ್ನ ಮಗ, ನನ್ನ ಮಗಳ ಬಗ್ಗೆ ಬಹಳಷ್ಟು ಸುಳ್ಳು ಸುದ್ದಿಗಳನ್ನು ಮಾತನಾಡಲಾಗುತ್ತಿದೆ, ನೋವುಂಟುಮಾಡುವ ಮಾತುಗಳನ್ನು ಆಡಲಾಗುತ್ತಿದೆ. ಹೀಗಾಗಿ, ನನ್ನ ಕತೆಯನ್ನು, ನಮ್ಮ ಕುಟುಂಬದ ವಾಸ್ತವತೆಯನ್ನು ಹೇಳಲು ಇದೂ ಒಂದು ಮಾರ್ಗವಾಗಬಹುದು ಎಂದು ನಾನು ಭಾವಿಸಿದೆ” ಎಂದು ಅವರು ಹೇಳಿದ್ದಾರೆ.
“Some parts were very difficult. My memories of my younger days came easily, and I recalled many details I had not thought about in years.”
CPP Chairperson Smt. @SoniaGandhi ji reflects on the personal and emotional journey of writing her memoir, Belonging: A Journey of Love. https://t.co/f3zrWX2IsC
— Congress (@INCIndia) November 16, 2026
ಇದನ್ನೂ ಓದಿ: ಪ್ರಧಾನಿಯಾಗಲು ಒಪ್ಪಿದ್ದ ಸೋನಿಯಾ ಗಾಂಧಿ ಮನೆಯಲ್ಲಿ ಆ ರಾತ್ರಿ ಏನಾಯ್ತು?
ತಮ್ಮ ಆತ್ಮಕತೆಗೆ ‘ಬಿಲಾಂಗಿಂಗ್’ ಎಂಬ ಶೀರ್ಷಿಕೆಯನ್ನು ಏಕೆ ಆಯ್ಕೆ ಮಾಡಿಕೊಂಡೆ ಎಂಬುದನ್ನೂ ವಿವರಿಸಿದ ಸೋನಿಯಾ ಗಾಂಧಿ, ಆರಂಭದಲ್ಲಿ ತಮಗೆ ಅಪರಿಚಿತವಾಗಿದ್ದ ದೇಶ ಮತ್ತು ಸಂಸ್ಕೃತಿಯಲ್ಲಿ ತನ್ನ ಜಾಗವನ್ನು ಪಡೆಯಲು ತಾನು ಪಟ್ಟ ಶ್ರಮವನ್ನು ಈ ಪದವು ನಿಖರವಾಗಿ ಸೆರೆಹಿಡಿಯುತ್ತದೆ ಎಂದಿದ್ದಾರೆ. “ಪುಸ್ತಕದಲ್ಲಿ ‘ಬಿಲಾಂಗಿಂಗ್’ ಎಂಬ ಪದ ಪದೇ ಪದೇ ಬರುತ್ತದೆ. ನನ್ನ ವಿಷಯದಲ್ಲಿ, ಈ ನೆಲಕ್ಕೆ ಸೇರಿಕೊಳ್ಳಲು ನಾನು ಎಷ್ಟು ಕಷ್ಟಪಟ್ಟು ಪ್ರಯತ್ನಿಸಿದೆ ಎಂಬುದನ್ನು ಇದು ಸೂಚಿಸುತ್ತದೆ” ಎಂದು ಅವರು ಹೇಳಿದ್ದಾರೆ.
#WATCH | Delhi: CPP Chairperson Sonia Gandhi, along with her children, Lok Sabha LoP Rahul Gandhi and Congress MP Priyanka, launches her memoir, ‘Belonging: A Journey of Love’.
(Source: Congress) https://t.co/r5tLPI9xCK
— ANI (@ANI) November 16, 2026
ಇಟಲಿಯಿಂದ ಭಾರತಕ್ಕೆ ಬಂದ ‘ಹೊರಗಿನವಳಾಗಿ’ ತಮ್ಮ ಅನುಭವವನ್ನು ಸ್ಮರಿಸಿದ ಸೋನಿಯಾ ಗಾಂಧಿ, ತಪ್ಪುಗಳನ್ನು ಮಾಡದಂತೆ ಹೊಂದಿಕೊಳ್ಳುವ ಒತ್ತಡದೊಂದಿಗೆ, ಎಲ್ಲರೂ ಸದಾ ತಮ್ಮನ್ನು ಗಮನಿಸುತ್ತಿದ್ದಾರೆ ಮತ್ತು ಅಳೆಯುತ್ತಿದ್ದಾರೆ ಎಂಬ ಭಾವನೆ ತಮಗೆ ಆಗಾಗ ಕಾಡುತ್ತಿತ್ತು ಎಂದಿದ್ದಾರೆ.
ತಾವು ಇಟಲಿಯಿಂದ ಬಂದ ಕಾರಣ ವಿಭಿನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣಕ್ಕೆ ಹೊಂದಿಕೊಳ್ಳುವುದು ತಮಗೆ ಸ್ವಲ್ಪ ಹೆಚ್ಚು ಸವಾಲಿನದ್ದಾಗಿರಬಹುದು ಎಂದು ಒಪ್ಪಿಕೊಂಡ ಸೋನಿಯಾ ಗಾಂಧಿ, ವಿದೇಶದಿಂದ ಭಾರತಕ್ಕೆ ಬಂದ ಆರಂಭಿಕ ದಿನಗಳಲ್ಲಿ ತಾವು ‘ಹೊರಗಿನವಳು’ ಎಂಬ ಭಾವನೆ ಕಾಡುತ್ತಿತ್ತು ಮತ್ತು ಎಲ್ಲರೂ ತಮ್ಮನ್ನೇ ಗಮನಿಸುತ್ತಿದ್ದಾರೆ ಎನಿಸುತ್ತಿತ್ತು ಎಂದು ಸ್ಮರಿಸಿದರು. ಭಾರತದ ಸಮಾಜಕ್ಕೆ ಹೊಂದಿಕೊಳ್ಳಲು ಮತ್ತು ಇಲ್ಲಿನವರೊಂದಿಗೆ ಒಂದಾಗಲು ತಾವು ಸಾಕಷ್ಟು ಪ್ರಯತ್ನ ನಡೆಸಿದ್ದಾಗಿ ತಿಳಿಸಿದ ಅವರು, ದೇಶದ ಹೊರಗಿನಿಂದ ಬರುವ ಮಹಿಳೆಗೆ ಇಲ್ಲಿನ ಪರಿಸರದಲ್ಲಿ ಸ್ವೀಕಾರ ಪಡೆಯುವುದು ಸುಲಭವಲ್ಲ ಎಂದರು. ಆದರೂ, ಇಲ್ಲಿನ ಜನರು ನೀಡಿದ ಅಪಾರ ಪ್ರೀತಿ ಭಾರತವನ್ನೇ ತಮ್ಮ ಸ್ವಂತ ಮನೆಯನ್ನಾಗಿಸಿತು ಎಂದು ಹೇಳಿದರು.
#WATCH | Delhi: Tamil Nadu CM C. Joseph Vijay, Congress MP Priyanka Gandhi Vadra, Jharkhand CM Hemant Soren and other leaders at the launch event of CPP chairperson Sonia Gandhi’s memoir, ‘Belonging: A Journey of Love’ https://t.co/cG1YdHrgnx
— ANI (@ANI) November 16, 2026
ಇದೇವೇಳೆ ತಮ್ಮ ಪತಿ ರಾಜೀವ್ ಗಾಂಧಿ ಜೊತೆಗಿನ ದಿನಗಳನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ “ನಾವಿಬ್ಬರೂ ಪ್ರತಿದಿನ ನಮ್ಮ ಜೀವನದಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಬರೆಯುತ್ತಿದ್ದೆವು. ರಾಜಕಾರಣದ ಕಾರಣಕ್ಕೆ ನಾವು ಬೇರೆ ಬೇರೆ ಊರಲ್ಲಿದ್ದರೂ ಈ ಅಭ್ಯಾಸ ಬಿಟ್ಟಿರಲಿಲ್ಲ” ಎಂದಿದ್ದಾರೆ.
“It was magical.
We used to write to each other every day about what was happening in our lives after he went back to India and I went back to Italy.”
CPP Chairperson Smt. @SoniaGandhi ji on her love story with Shri Rajiv Gandhi
📍 Delhi https://t.co/ZAx3MFMuEb
— Congress (@INCIndia) November 16, 2026
ಇದನ್ನೂ ಓದಿ: ಆಪರೇಷನ್ ಬ್ಲೂ ಸ್ಟಾರ್ ಫೋಟೋ ನೋಡಿ ಕಣ್ಣೀರಿಟ್ಟಿದ್ದ ಇಂದಿರಾ ಗಾಂಧಿ; ಸೋನಿಯಾ ಗಾಂಧಿ ಆತ್ಮಕತೆಗೆ ಅಕಾಲಿ ದಳ ಆಕ್ಷೇಪ
ಟೀಕೆಗಳ ಕುರಿತು ಸೋನಿಯಾ ಗಾಂಧಿ ಪ್ರತಿಕ್ರಿಯೆ:
ತಮ್ಮ ಆತ್ಮಕತೆಯ ಸುತ್ತಲಿನ ಟೀಕೆಗಳನ್ನೂ ಉಲ್ಲೇಖಿಸಿದ ಅವರು, ಕೆಲವು ಟೀಕೆಗಳು ಅಹಿತಕರವಾಗಿದ್ದರೆ, ಇನ್ನು ಕೆಲವು ಪ್ರಾಮಾಣಿಕವಾಗಿವೆ ಮತ್ತು ವಿಮರ್ಶಕರು ನಿಜವಾಗಿಯೂ ಏನು ಭಾವಿಸುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತವೆ ಎಂದರು. “ಕೆಲವು ಟೀಕೆಗಳು ಸ್ವಲ್ಪ ಕಟುವಾಗಿವೆ. ಇನ್ನು ಕೆಲವು ಹೆಚ್ಚು ಪ್ರಾಮಾಣಿಕವಾಗಿವೆ. ಅವರು ಏನು ಯೋಚಿಸುತ್ತಾರೆ, ಏನು ಹೇಳಬೇಕಿತ್ತು ಮತ್ತು ಏನು ಹೇಳಬಾರದಿತ್ತು ಎಂಬುದನ್ನು ನಿಖರವಾಗಿ ಹೇಳಿದ್ದಾರೆ” ಎಂದು ತಿಳಿಸಿದ ಸೋನಿಯಾ ಗಾಂಧಿ, ಟೀಕೆಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.
I am deeply touched by the love and affection people have shown. It is truly overwhelming.
I am also deeply moved by the affection expressed in the comments, even by those who have criticised. It is necessary, too.
: CPP Chairperson Smt. @SoniaGandhi ji on her memoir, 𝑩𝒆𝒍𝒐𝒏𝒈𝒊𝒏𝒈: 𝑨 𝑱𝒐𝒖𝒓𝒏𝒆𝒚 𝒐𝒇 𝑳𝒐𝒗𝒆
📍 Delhi
— Congress (@INCIndia) November 16, 2026
ನವದೆಹಲಿಯಲ್ಲಿ ಅದ್ದೂರಿಯಾಗಿ ನಡೆದ ಈ ಕೃತಿ ಬಿಡುಗಡೆ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ತಮಿಳುನಾಡು ಸಿಎಂ ಜೋಸೆಫ್ ವಿಜಯ್, ಕೇರಳ ಸಿಎಂ ಸತೀಶ್ ಸೇರಿದಂತೆ ದೇಶದ ನಾನಾ ಕ್ಷೇತ್ರಗಳ ಪ್ರಮುಖ ಗಣ್ಯರು, ಸಾಹಿತಿಗಳು ಮತ್ತು ಹಿರಿಯ ರಾಜಕೀಯ ನಾಯಕರು ಉಪಸ್ಥಿತರಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
