ನಮ್ಮ ಮಗು ಸತ್ತಾಗ ಬರ್ಲಿಲ್ಲ, ಪಾತಕಿಗಳ ಸಾವಿಗೆ ಬಂದಿರಾ? ದಿಶಾ ಕುಟುಂಬ ಕೆಂಡಾಮಂಡಲ
ಹೈದರಾಬಾದ್: NHRC ಸಮಿತಿ ಹೈದರಾಬಾದ್ ಭೇಟಿಗೆ ದಿಶಾ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿಶಾ ಪ್ರಕರಣದಲ್ಲಿ ಘೋರ ಅನ್ಯಾಯವಾದಾಗ ಸಮಿತಿ ಭೇಟಿ ನೀಡಲಿಲ್ಲ? ಕ್ರೂರ ಮೃಗಗಳಂತಹ ಕ್ರಿಮಿನಲ್ಗಳು ಸತ್ತರೆ ಅದು ಹೇಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದಿಶಾ ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಮೋಸ, ವಂಚನೆ, ಪಾಪ ಪುಣ್ಯ ಗೊತ್ತಿಲ್ಲದ ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಆಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿಲ್ಲ, ತನಿಖೆ ಮಾಡಲಿಲ್ಲ. ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ, ಹತ್ಯೆ ಮಾಡಿದಾಗ ಮಾನವ […]
ಹೈದರಾಬಾದ್: NHRC ಸಮಿತಿ ಹೈದರಾಬಾದ್ ಭೇಟಿಗೆ ದಿಶಾ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿಶಾ ಪ್ರಕರಣದಲ್ಲಿ ಘೋರ ಅನ್ಯಾಯವಾದಾಗ ಸಮಿತಿ ಭೇಟಿ ನೀಡಲಿಲ್ಲ? ಕ್ರೂರ ಮೃಗಗಳಂತಹ ಕ್ರಿಮಿನಲ್ಗಳು ಸತ್ತರೆ ಅದು ಹೇಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದಿಶಾ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.
ಮೋಸ, ವಂಚನೆ, ಪಾಪ ಪುಣ್ಯ ಗೊತ್ತಿಲ್ಲದ ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಆಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿಲ್ಲ, ತನಿಖೆ ಮಾಡಲಿಲ್ಲ. ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ, ಹತ್ಯೆ ಮಾಡಿದಾಗ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿಲ್ಲವೇ? ಎಂದು ದಿಶಾ ತಂದೆ-ತಾಯಿ ಕೆಂಡಾಮಂಡಲವಾಗಿದ್ದಾರೆ.
ಹಾಜಿಪುರ, ವರಂಗಲ್, ಆಸೀಫಾಬಾದ್ಗಳಲ್ಲಿ ಚಿಕ್ಕಮಕ್ಕಳು, ಯುವತಿಯರು ಅತ್ಯಾಚಾರಕ್ಕೀಡಾಗಿ ಕೊಲೆಯಾದಾಗ ಆಯೋಗ ಏಕೆ ಬಾಯಿ ತೆರೆಯಲಿಲ್ಲ. ಈಗ ನಡೆದಿರೋ ಎನ್ಕೌಂಟರ್ ನಾಗರಿಕ ಸಮಾಜ ಕೋರಿಕೊಂಡಂತಹುದು ಎಂದು ಎನ್‌ಹೆಚ್‌ಆರ್‌ಸಿ ಪರಿಶೀಲನೆಗೆ ದಿಶಾ ಕುಟುಂಬ ವಿರೋಧ ವ್ಯಕ್ತಪಡಿಸಿದೆ.
ವಿರೋಧದ ನಡುವೆಯೂ ಭೇಟಿ: ಈ ಮಧ್ಯೆ ವಿರೋಧದ ನಡುವೆಯೂ ಮಹಬೂಬ್‌ನಗರದಲ್ಲಿರುವ ಆಸ್ಪತ್ರೆಗೆ NHRC ತಂಡ ಭೇಟಿ ನೀಡಿದೆ. 7 ಅಧಿಕಾರಿಗಳ ತಂಡ ಆಸ್ಪತ್ರೆಯಲ್ಲಿರುವ ಆರೋಪಿಗಳ ಮೃತದೇಹಗಳನ್ನ ಪರಿಶೀಲನೆ ನಡೆಸಿದ್ದಾರೆ. ಬಳಿಕ ಘಟನೆ ನಡೆದ ಪ್ರದೇಶಗಳ ಭೇಟಿಗೆ ತೆರಳಲು NHRC ತಂಡ ನಿರ್ಧರಿಸಿದೆ.
Published On - 11:27 am, Sat, 7 December 19