ಗಂಡು ಮಗು ಬೇಕೆಂಬ ಹಠಕ್ಕೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನೇ ಕೊಂದು ಈಜುಕೊಳಕ್ಕೆ ಎಸೆದ ಕಟುಕ ತಂದೆ

ತೆಲಂಗಾಣದಲ್ಲಿ ಗಂಡು ಮಗುವಿನ ಅಂಧಾಭಿಮಾನಕ್ಕೆ ಗಂಡನೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಮೃತದೇಹಗಳನ್ನು ಈಜುಕೊಳಕ್ಕೆ ಎಸೆಯಲಾಗಿತ್ತು. ಪದೇ ಪದೇ ಗಂಡು ಮಗು ಇಲ್ಲವೆಂದು ಪತ್ನಿಗೆ ದೌರ್ಜನ್ಯ ಎಸಗುತ್ತಿದ್ದ ಆರೋಪಿಯ ವಿಕೃತ ಮನಸ್ಥಿತಿ ತನಿಖೆಯಿಂದ ಬಯಲಾಗಿದೆ. ಪತಿ ಅಜರುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಗಂಡು ಮಗು ಬೇಕೆಂಬ ಹಠಕ್ಕೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನೇ ಕೊಂದು ಈಜುಕೊಳಕ್ಕೆ ಎಸೆದ ಕಟುಕ ತಂದೆ
ಗಂಡನ ಗಂಡು ಮಗು ಹಂಬಲ ಬಲಿಯಾದ ಮುಗ್ದ ಜೀವಗಳು

Updated on: Apr 04, 2026 | 1:43 PM

ಹೈದರಾಬಾದ್, ಏ.4: ಗಂಡು ಮಗು ಬೇಕೆಂಬ ಅಂಧಾಭಿಮಾನ ಮತ್ತು ವಿಕೃತ ಮನಸ್ಥಿತಿಗೆ ಅಮಾಯಕ ಹೆಣ್ಣು ಜೀವಗಳು ಬಲಿಯಾಗಿರುವ ಘೋರ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ತನ್ನ ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಿ, ನಂತರ ಅದನ್ನು ಅಪಘಾತ ಎಂದು ಬಿಂಬಿಸಲು ಮೃತದೇಹಗಳನ್ನು ಈಜುಕೊಳಕ್ಕೆ ಎಸೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ತನ್ನ ಪತ್ನಿಯೊಂದಿಗೆ ಗಂಡು ಮಗುವಿನ ವಿಚಾರಕ್ಕಾಗಿ ಪದೇ ಪದೇ ಜಗಳವಾಡುತ್ತಿದ್ದನು. ಇಬ್ಬರು ಹೆಣ್ಣು ಮಕ್ಕಳಿದ್ದರೂ ಸಹ, ಗಂಡು ಮಗು ಇಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದನು. ಈ ವಿಕೃತ ಹಂಬಲವು ಅಂತಿಮವಾಗಿ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.

ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಂದ ನಂತರ, ಆರೋಪಿಯು ಯಾರೂ ಇಲ್ಲದ ಸಮಯದಲ್ಲಿ ಮೃತದೇಹಗಳನ್ನು ಹತ್ತಿರದ ಈಜುಕೊಳಕ್ಕೆ ಎಸೆದಿದ್ದನು. ಆರಂಭದಲ್ಲಿ ಅವರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ಮತ್ತು ಪೊಲೀಸರ ತನಿಖೆಯಿಂದ ಇದು ಆಕಸ್ಮಿಕ ಸಾವಲ್ಲ, ಬದಲಿಗೆ ವ್ಯವಸ್ಥಿತವಾಗಿ ನಡೆದ ಕೊಲೆ ಎಂಬುದು ಸಾಬೀತಾಗಿದೆ.

ಇದನ್ನೂ ಓದಿ: ವಿಕೃತ ಕಾಮಿಯ ಅಟ್ಟಹಾಸ: ‘ನನಗೆ ಎಚ್‌ಐವಿ ಇದೆ’ ಎಂದಿದ್ದಕ್ಕೆ ಮಹಿಳೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿದ ಪಾಪಿ!

ಇನ್ನು ಫರ್ಹತ್ ಅವರ ಪತಿ ಅಜರುದ್ದೀನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಅವರ ಪತ್ನಿ ಮತ್ತು ಪುತ್ರಿಯರುಕೊಳಕ್ಕೆ ಜಾರಿಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಪೊಲೀಸರಿಗೆ ಬಂದ ಅನುಮಾನದಿಂದ ಹಾಗೂ ಪತಿ ಅಜರುದ್ದೀನ್ ನೀಡಿರುವ ಹೇಳಿಕೆಯೂ ಈ ಪ್ರಕರಣಕ್ಕೆ ಹೊಂದಾಣಿಕೆ ಆಗುತ್ತಿಲ್ಲ ಎಂದು ತನಿಖೆ ನಡೆಸಿದಾಗ, ಇದು ಕೊಲೆ ಎಂದು ಸಾಬೀತಾಗಿದೆ. ಇನ್ನು ಫರ್ಹತ್​​ ತಂದೆ ನೀಡಿದ ದೂರು ಕೂಡ ಇದಕ್ಕೆ ಮತ್ತಷ್ಟು ಬಲವನ್ನು ನೀಡಿತ್ತು. ಕಳೆದ ಕೆಲವು ದಿನಗಳಿಂದ ತಮ್ಮ ಮಗಳು ಮತ್ತು ಅಳಿಯನ ನಡುವೆ ಮಕ್ಕಳ ಬಗ್ಗೆ ಮತ್ತು ಫರ್ಹತ್ ಗರ್ಭಧಾರಣೆಯ ಬಗ್ಗೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಆರೋಪಿಸಿ ಫರ್ಹತ್ ಅವರ ತಂದೆ ಅಲಿ ಪೊಲೀಸರಿಗೆ ದೂರು ನೀಡಿದ್ದರು. ಅಜರುದ್ದೀನ್ ಅವರಿಗೆ ಮತ್ತೊಂದು ಹೆಣ್ಣು ಮಗು ಬೇಡವಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳುವಂತೆ ಫರ್ಹತ್​​ಗೆ ಒತ್ತಾಯಿಸುತ್ತಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us