Hyderabad: ಶಾಲಾ ಆಟದ ಮೈದಾನದಲ್ಲಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಪ್ರಾಂಶುಪಾಲರ ಸಾಕು ನಾಯಿ

|

Updated on: Jun 23, 2023 | 12:43 PM

ಶಾಲಾ ಆಟದ ಮೈದಾನದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿರುವ ವೇಳೆ ಪ್ರಾಂಶುಪಾಲರ ಸಾಕು ನಾಯಿ ದಾಳಿ(Dog Attack) ನಡೆಸಿದ್ದು, ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯವಾಗಿದೆ.

Hyderabad: ಶಾಲಾ ಆಟದ ಮೈದಾನದಲ್ಲಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಪ್ರಾಂಶುಪಾಲರ ಸಾಕು ನಾಯಿ
ನಾಯಿ(ಸಾಂದರ್ಭಿಕ ಚಿತ್ರ)
Image Credit source: Hancock Injury Attorneys
Follow us on

ಶಾಲಾ ಆಟದ ಮೈದಾನದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿರುವ ವೇಳೆ ಪ್ರಾಂಶುಪಾಲರ ಸಾಕು ನಾಯಿ ದಾಳಿ(Dog Attack) ನಡೆಸಿದ್ದು, ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯವಾಗಿದೆ. ಹೈದರಾಬಾದ್​ನ ಸನತ್​ ನಗರದಲ್ಲಿರುವ ಸೇಂಟ್ ಥೆರೆಸಾ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಆಟದ ಮೈದಾನದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿರುವಾಗ ಘಟನೆ ಸಂಭವಿಸಿದೆ.

ಗಾಯಗೊಂಡು ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಾಂಶುಪಾಲರು ನಾಯಿಯನ್ನು ಶಾಲೆಗೆ ಕರೆತಂದಿರುವುದಕ್ಕೆ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: Stray Dog Attack: 8 ವರ್ಷದ ಬಾಲಕಿಯ ಮೇಲೆ 3 ಬೀದಿ ನಾಯಿಗಳ ದಾಳಿ

ಪೊಲೀಸರು ಪ್ರಾಂಶುಪಾಲರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರೆಸಿದ್ದಾರೆ. ಇದೇ ಫೆಬ್ರವರಿಯಲ್ಲಿ ಅಂಬರ್​ ಪೇಟೆಯಲ್ಲಿ ನಾಯಿಗಳು 5 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದವು, ಈಗಲೂ ನಾಯಿಗಳ ದಾಳಿ ಮುಂದುವರೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:40 pm, Fri, 23 June 23