ಹೈದರಾಬಾದ್: ಪ್ರಿಯ ಹೈದರಾಬಾದ್ ನಿವಾಸಿಗಳೇ, ನಿಮ್ಮ ಬಳಿ ಟ್ರಾಫಿಕ್ ಚಲನ್ (traffic challans) ಬಾಕಿ ಇದೆಯೇ? ಹೌದು ಎಂದಾದರೆ, ನಿಮಗೊಂದು ಗುಡ್ ನ್ಯೂಸ್ ಇದೆ. ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡದ ಟ್ರಾಫಿಕ್ ಪೊಲೀಸರು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ನಲ್ಲಿ ನೋಂದಾಯಿಸಲಾದ ವಾಹನಗಳ ಮೇಲೆ ಟ್ರಾಫಿಕ್ ದಂಡ (Traffic Fine) ಪಾವತಿಯ ಮೇಲೆ ಭಾರೀ ರಿಯಾಯಿತಿ ನೀಡಲು ನಿರ್ಧರಿಸಿದ್ದಾರೆ. ಚಲನ್ ಮನ್ನಾವನ್ನು ಮಾನವೀಯ ಸೂಚಕ ಎಂದು ಕರೆದಿರುವ ಪೊಲೀಸರು, ಕಳೆದ ಎರಡು ವರ್ಷಗಳಲ್ಲಿ COVID ಸಾಂಕ್ರಾಮಿಕ ರೋಗದಿಂದಾಗಿ ಸಾರ್ವಜನಿಕರು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಲೈವ್‌ಮಿಂಟ್ ವರದಿ ಮಾಡಿದ್ದು, ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡ ಕಮಿಷನರೇಟ್‌ಗಳ ಮಿತಿಯಲ್ಲಿ 600 ಕೋಟಿ ರೂ.ಗಳ 1.6 ಕೋಟಿಗೂ ಹೆಚ್ಚು ಚಲನ್‌ಗಳು ಬಾಕಿ ಉಳಿದಿವೆ. ಅವುಗಳಲ್ಲಿ 60% ಕೇಸುಗಳು ಸಂಚಾರ ಉಲ್ಲಂಘನೆಗಾಗಿ ದ್ವಿಚಕ್ರ ವಾಹನಗಳ ವಿರುದ್ಧ ಇವೆ ಎಂದು ವರದಿಯಾಗಿದೆ. 85% ಬಾಕಿ ಇರುವ ಎಲ್ಲಾ ಚಲನ್‌ಗಳು ದ್ವಿಚಕ್ರ ವಾಹನ ಮಾಲೀಕರು ಅಥವಾ ಆಟೋ ಮಾಲೀಕರು ಮುಖ್ಯವಾಗಿ ಸಮಾಜದ ಮಧ್ಯಮ / ಕೆಳ ಮಧ್ಯಮ / ಬಡ ವರ್ಗಗಳಿಂದ ಬಂದವರಾಗಿದ್ದಾರೆ.
ಚಲನ್ ರಿಯಾಯಿತಿ ಯೋಜನೆಯಡಿ ದ್ವಿಚಕ್ರ ವಾಹನ ಮಾಲೀಕರು ಶೇ. 25, ಕಾರು ಮಾಲೀಕರು ಶೇ. 50ರಷ್ಟು ಮತ್ತು ಆರ್‌ಟಿಸಿ ಬಸ್ ಮಾಲೀಕರು ಶೇ. 30ರಷ್ಟು ಬಾಕಿ ಪಾವತಿಸಿದರೆ, ತೆಲಂಗಾಣ ಪೊಲೀಸರು ಉಳಿದ ಮೊತ್ತವನ್ನು ಮನ್ನಾ ಮಾಡುತ್ತಾರೆ. ಸಂಚಾರದ ವೇಳೆ ಚಲನ್ ಪಾವತಿಸುವಂತೆ ಸಂಚಾರಿ ಪೊಲೀಸ್ ಇಲಾಖೆ ವಾಹನ ಸವಾರರಿಗೆ ಸಲಹೆ ನೀಡುತ್ತಿದೆ. ಒಂದು ತಿಂಗಳ ಕಾಲ ನಡೆಯುವ ಈ ಕಾರ್ಯಾಚರಣೆಯಲ್ಲಿ ಟ್ರಾಫಿಕ್ ಪೊಲೀಸರು ಎಷ್ಟು ಬಾಕಿಯನ್ನು ತೆರವುಗೊಳಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.
ದ್ವಿಚಕ್ರ ವಾಹನದ ವಿರುದ್ಧ ಚಲನ್‌ಗಳಿಗೆ 25% ಮೊತ್ತವನ್ನು ಪಾವತಿಸಿದರೆ, ಉಳಿದ 75% ಅನ್ನು ಮನ್ನಾ ಮಾಡಲಾಗುತ್ತದೆ. ತಳ್ಳುಗಾಡಿಗಳು ಮತ್ತು ಸಣ್ಣಪುಟ್ಟ ಮಾರಾಟಗಾರರು 20% ಚಲನ್ ಪಾವತಿಸಿದರೆ 80% ಮನ್ನಾ ಮಾಡಲಾಗುತ್ತದೆ. RTC ಚಾಲಕರು 30% ಪಾವತಿಸಿದರೆ 70% ಮನ್ನಾ ಮಾಡಲಾಗುತ್ತದೆ. ಕಾರು, ಲಘು ಮೋಟಾರು ವಾಹನಗಳು, ಜೀಪುಗಳು ಮತ್ತು ಭಾರೀ ವಾಹನಗಳ ಮಾಲೀಕರು ಶೇ.50ರಷ್ಟು ಪಾವತಿಸಿದರೆ ಉಳಿದ ಮೊತ್ತವನ್ನು ಮನ್ನಾ ಮಾಡಲಾಗುತ್ತದೆ. “ ಇದನ್ನೂ ಓದಿ: ಟ್ರಾಫಿಕ್ ಪೊಲೀಸರ ವಿರುದ್ಧ ಭ್ರಷ್ಟಾಚಾರ ದೂರು ಹಿನ್ನೆಲೆ; ಬಾಡಿ ಕ್ಯಾಮರಾ ಧರಿಸುವಂತೆ ಸೂಚನೆ