ಹೈದರಾಬಾದ್: ನನ್ನ ಮೇಲೆ 139 ಜನರು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬಳು ಕಳೆದ ಕೆಲವು ದಿನಗಳ ಹಿಂದೆ ತಾನು ಮಾಡಿದ್ದ ಆರೋಪವು ಹಸಿ ಸುಳ್ಳು ಎಂದು ತಪ್ಪೊಪ್ಪಿಕೊಂಡಿರುವ ವಿಚಿತ್ರ ಘಟನೆ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ.
25 ವರ್ಷದ ಮಹಿಳೆ ಅತ್ಯಾಚಾರದ ಆರೋಪ ಮಾಡುವಂತೆ ನನ್ನ ಮೇಲೆ ಒತ್ತಡ ಹೇರಲಾಯಿತು. ಹಾಗಾಗಿ, ನಾನು ಆ ರೀತಿಯ ಹೇಳಿಕೆ ನೀಡಿದ್ದೆ ಎಂದು ತಿಳಿಸಿದ್ದಾರೆ. ನನಗೆ ಈ ರೀತಿಯ ಹುಸಿ ಆರೋಪ ಮಾಡಲು ರಾಜಶ್ರೀಕರ ರೆಡ್ಡಿ ಅಲಿಯಾಸ್ ಡಾಲರ್ ಭಾಯ್ ಎಂಬಾತ ಬೆದರಿಕೆ ಒಡ್ಡಿದ್ದ ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನನ್ನ ಮೇಲೆ ಅವರೆಲ್ಲಾ ಅತ್ಯಾಚಾರ ಎಸಗದಿದ್ದರೂ ಅದರಲ್ಲಿ ಕೆಲವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆ ಮಹಿಳೆಯ ತನ್ನ ಹೇಳಿಕೆಯನ್ನು ಬದಲಿಸಿದ್ದಾಳೆ.
Published On - 6:55 pm, Tue, 1 September 20