ಖರ್ಗೆ ನಮಗೆ 400 ಸೀಟು ಪಡೆಯುವಂತೆ ಆಶೀರ್ವದಿಸಿದ್ದಾರೆ, ಕಾಂಗ್ರೆಸ್​ 40 ದಾಟಿಲಿ ಎಂಬುದು ನನ್ನ ಪ್ರಾರ್ಥನೆ: ಮೋದಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ನಮ್ಮನ್ನು ಆಶೀರ್ವದಿಸಿದ್ದಾರೆ. ಕಾಂಗ್ರೆಸ್​ ಈ ಬಾರಿ 40 ಸ್ಥಾನಗಳನ್ನು ಪಡೆಯಲಿ ಎಂಬುದು ನಮ್ಮ ಪ್ರಾರ್ಥನೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ದಾಟುವುದಿಲ್ಲ ಎಂದರು.

ಖರ್ಗೆ ನಮಗೆ 400 ಸೀಟು ಪಡೆಯುವಂತೆ ಆಶೀರ್ವದಿಸಿದ್ದಾರೆ, ಕಾಂಗ್ರೆಸ್​ 40 ದಾಟಿಲಿ ಎಂಬುದು ನನ್ನ ಪ್ರಾರ್ಥನೆ: ಮೋದಿ
ಮೋದಿ
Follow us
ನಯನಾ ರಾಜೀವ್
|

Updated on: Feb 07, 2024 | 3:00 PM

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ನಮ್ಮನ್ನು ಆಶೀರ್ವದಿಸಿದ್ದಾರೆ. ಕಾಂಗ್ರೆಸ್​ ಈ ಬಾರಿ 40 ಸ್ಥಾನಗಳನ್ನು ಪಡೆಯಲಿ ಎಂಬುದು ನಮ್ಮ ಪ್ರಾರ್ಥನೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ದಾಟುವುದಿಲ್ಲ ಎಂದರು.

‘‘ನೀವು ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ದೇಶದ ಜನರು ಈ ಧ್ವನಿಯನ್ನು ಬಲಪಡಿಸಿದ್ದಾರೆ. ನಾನು ಕೂಡ ಈ ಬಾರಿ ಸಿದ್ಧರಾಗಿ ಬಂದಿದ್ದೇನೆ’’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಖರ್ಗೆ ಅವರು ರಾಜ್ಯಸಭೆಯಲ್ಲಿ “ದೀರ್ಘಕಾಲ ಮಾತನಾಡಿದ್ದಾರೆ ಮತ್ತು ದೀರ್ಘಕಾಲದವರೆಗೆ ಮಾತನಾಡಲು ಅವರಿಗೆ ಹೇಗೆ ಅವಕಾಶ ಸಿಕ್ಕಿತು ಎಂದು ನಾನು ಯೋಚಿಸುತ್ತಿದ್ದೆ”.

ನಂತರ ಇಬ್ಬರು ವಿಶೇಷ ಕಮಾಂಡರ್‌ಗಳು ಅಲ್ಲಿಲ್ಲ ಎಂದು ನಾನು ಅರಿತುಕೊಂಡೆ, ಆದ್ದರಿಂದ ಅವರು ಅದರ ಲಾಭವನ್ನು ಪಡೆದರು ಮತ್ತು ಖರ್ಗೆ ಯವರೆ ‘ಐಸಾ ಮೌಕಾ ಫಿರ್ ಕಹಾ ಮಿಲೇಗಾ’ ಹಾಡನ್ನು ಕೇಳಿರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಮೋದಿ ಹೇಳಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಗೊಂದಲದಲ್ಲಿಯೇ ಇತ್ತು, ಕಾಂಗ್ರೆಸ್ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ, ಕಾಂಗ್ರೆಸ್ ಪತ್ರಿಕೆಗಳಿಗೆ ಬೀಗ ಹಾಕಲು ಯತ್ನಿಸಿತು. ಕಾಂಗ್ರೆಸ್‌ನ ಚಿಂತನೆ ಹಳೆಯದಾಗಿದೆ, ಅದರ ಕೆಲಸವೂ ಕೂಡ ಎಂದರು.

ಮತ್ತಷ್ಟು ಓದಿ: ಕಮಾಂಡೋಗಳಿಲ್ಲದೆ ಸದನದಲ್ಲಿ ಖರ್ಗೆ ಸ್ವತಂತ್ರ ಹಕ್ಕಿಯಾಗಿದ್ದಾರೆಂದು ಕಾಲೆಳೆದ ಮೋದಿ

ಕಾಂಗ್ರೆಸ್ ಶತ್ರುಗಳಿಗೆ ಭೂಮಿ ನೀಡಿದೆ, ಕಾಂಗ್ರೆಸ್ ಆಡಳಿತದಲ್ಲಿ ಒಬಿಸಿಗೆ ಮೀಸಲಾತಿ ಸಿಗಲಿಲ್ಲ, ಕಾಂಗ್ರೆಸ್ ಕಾಯಿಲೆ ಬಿದ್ದಿದೆ, ಸ್ವಂತ ನೀತಿ ಇಲ್ಲದವರು ಮೋದಿಯವರ ಗ್ಯಾರಂಟಿ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಬ್ರಿಟಿಷರಿಂದ ಪ್ರಭಾವಿತವಾಗಿದೆ. ಇದರಿಂದಾಗಿಯೇ ಬ್ರಿಟಿಷರು ಮಾಡಿದ ಕಾನೂನುಗಳು ಕಾರ್ಯರೂಪಕ್ಕೆ ಬಂದವು, ದಶಕಗಳ ನಂತರವೂ ಕೆಂಪು ದೀಪ ಸಂಸ್ಕೃತಿ ಮುಂದುವರೆಯಿತು ಎಂದರು.

ಕಾಂಗ್ರೆಸ್‌ಗೆ ನೀತಿಯೂ ಇಲ್ಲ, ನಾಯಕನೂ ಇಲ್ಲ.ಕಾಂಗ್ರೆಸ್ ಭಾರತೀಯ ಸಂಸ್ಕೃತಿಯನ್ನು ಗೌಣವಾಗಿ ನೋಡಿದೆ. ಇಂದು ಕಾಂಗ್ರೆಸ್‌ಗೆ ಸ್ವಾವಲಂಬಿ ಭಾರತ ಎಂಬ ಮಾತನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶವು ಎಲ್ಲವನ್ನೂ ಅರ್ಥಮಾಡಿಕೊಂಡಿದೆ ಮತ್ತು ಅದರ ಪರಿಣಾಮವನ್ನು ಕಾಂಗ್ರೆಸ್ ಅನುಭವಿಸುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ