Breaking ನಾನು ಮಾಡುತ್ತಿದ್ದ ಕೆಲಸ ಮುಂದುವರಿಸುವೆ: ಜೈಲಿನಿಂದ ಬಿಡುಗಡೆಯಾದ ನಂತರ ಮೊಹಮ್ಮದ್ ಜುಬೇರ್ ಮಾತು

ತಿಹಾರ್ ಜೈಲಿನಿಂದ ಹೊರಬಂದ ಒಂದು ದಿನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜುಬೇರ್ ಗೌರವಾನ್ವಿತ ಸುಪ್ರೀಂ ಕೋರ್ಟ್ ನನಗೆ ಯಾವುದೇ ನಿರ್ಬಂಧ  ವಿಧಿಸಿಲ್ಲ. ನಾನು ಇಲ್ಲಿಯವರೆಗೆ ಮಾಡುತ್ತಿದ್ದ ಕೆಲಸಗಳನ್ನು ಮುಂದುವರಿಸುವೆ ಎಂದು ಹೇಳಿದ್ದಾರೆ

Breaking ನಾನು ಮಾಡುತ್ತಿದ್ದ ಕೆಲಸ ಮುಂದುವರಿಸುವೆ: ಜೈಲಿನಿಂದ ಬಿಡುಗಡೆಯಾದ ನಂತರ ಮೊಹಮ್ಮದ್ ಜುಬೇರ್ ಮಾತು
ಮೊಹಮ್ಮದ್ ಜುಬೇರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 22, 2022 | 7:20 PM

ನಾನು ಈ ಹಿಂದೆ ಏನು ಮಾಡುತ್ತಿದ್ದೆನೋ ಅದೇ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ (Mohammed Zubair)  ಹೇಳಿದ್ದಾರೆ. ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್​ಗೆ  ಸುಪ್ರೀಂಕೋರ್ಟ್ (Supreme Court) ಬುಧವಾರ ಜಾಮೀನು ನೀಡಿದ್ದುಅದೇ ದಿನ ರಾತ್ರಿ ಅವರು ಬಂಧಮುಕ್ತರಾಗಿದ್ದಾರೆ. ತಿಹಾರ್ ಜೈಲಿನಿಂದ ಹೊರಬಂದ ಒಂದು ದಿನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜುಬೇರ್ ಗೌರವಾನ್ವಿತ ಸುಪ್ರೀಂಕೋರ್ಟ್ ನನಗೆ ಯಾವುದೇ ನಿರ್ಬಂಧ  ವಿಧಿಸಿಲ್ಲ. ನಾನು ಇಲ್ಲಿಯವರೆಗೆ ಮಾಡುತ್ತಿದ್ದ ಕೆಲಸಗಳನ್ನು ಮುಂದುವರಿಸುವೆ ಎಂದು ಹೇಳಿದ್ದಾರೆ. ಯಾವುದೇ ತನಿಖಾ ತಂಡ ಈ ಬಗ್ಗೆ ಕೇಳಲಿಲ್ಲ, ನಾನು ಬಿಡುಗಡೆ ಆದ ನಂತರವೇ ಈ ಆರೋಪದ ಬಗ್ಗೆ ಕೇಳಿದ್ದು ಎಂದಿದ್ದಾರೆ.   ಬುಧವಾರ ಜಾಮೀನು ನೀಡಿದ ಸುಪ್ರೀಂಕೋರ್ಟ್ ಬಂಧನದ ಅಧಿಕಾರವನ್ನು ಮಿತವಾಗಿ ಅನುಸರಿಸಬೇಕು ಎಂಬುದು ಕಾನೂನಿನ ತತ್ವವಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಅವರನ್ನು  ಸುದೀರ್ಘವಾಗಿ ಬಂಧನದಲ್ಲಿಡಬೇಕಾದುದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದೆ.

ಈ ಬಗ್ಗೆ ಒಟ್ಟಾರೆ ತನಿಖೆ ಅಗತ್ಯವಿದೆ ಎಂದು ಹೇಳಿದ ನ್ಯಾಯಾಲಯ 6 ಎಫ್ಐಆರ್​ಗಳನ್ನು ಒಟ್ಟುಗೂಡಿಸಿದ್ದು ಎಲ್ಲ ಪ್ರಕರಣಗಳನ್ನು ಉತ್ತರ ಪ್ರದೇಶದಿಂದ ದೆಹಲಿಗೆ ವರ್ಗಾಯಿಸಿದೆ. ಪ್ರಕರಣಗಳನ್ನು ದೆಹಲಿ ಹೈಕೋರ್ಟ್ಗೆ ವರ್ಗಾಯಿಸಬೇಕು ಎಂದು ಜುಬೇರ್ ಮನವಿ ಮಾಡಿದ್ದರು. ಎಫ್ಐಆರ್​ಗಳನ್ನು ದೆಹಲಿಗೆ ವರ್ಗಾಯಿಸುವ ಆದೇಶವು ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳಿಗೆ ಅನ್ವಯ ಆಗಲಿದೆ. ಇನ್ಮುಂದೆ ಜುಬೇರ್ ವಿರುದ್ದ ದಾಖಲಾಗುವ ದೂರಿಗೂ ಇದು ಅನ್ವಯಿಸುತ್ತದೆ. ಜುಬೇರ್​​ನ್ನು ಬಂಧಮುಕ್ತಗೊಳಿಸುವಂತೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಎಎಸ್ ಬೋಪಣ್ಣ ಅವರ ನ್ಯಾಯಪೀಠ ಆದೇಶಿಸಿದೆ.

ಸೀತಾಪುರ್, ಲಖೀಂಪುರ್ ಖೇರಿ, ಮುಜಾಫರ್ ನಗರ್ , ಗಾಜಿಯಾಬಾದ್ ನಲ್ಲಿ ತಲಾ ಒಂದು ಮತ್ತು ಹಾಥರಸ್ ನಲ್ಲಿ ಎರಡು ಪ್ರಕರಣಗಳು ಜುಬೇರ್ ವಿರುದ್ಧ ದಾಖಲಾಗಿದೆ. ಸುದ್ದಿನಿರೂಪಕರ ಬಗ್ಗೆ ಅಣಕವಾಡಿದ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಮತ್ತು ದೇವರ ಬಗ್ಗೆ ಪ್ರಚೋದನಾತ್ಮಕ ವಿಷಯ ಟ್ವೀಟ್ ಮಾಡಿದ ಆರೋಪ ಜುಬೇರ್ ಮೇಲಿದೆ. ಟ್ವೀಟ್ ನಿಂದಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದ ಮೇಲೆ ಜೂನ್ 27ರಂದು ಜುಬೇರ್ ಅವರನ್ನು ದೆಹಲಿ ಪೊಲೀಸರು  ಬಂಧಿಸಿದ್ದರು.

Published On - 6:50 pm, Fri, 22 July 22

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್