ಚಂಡೀಗಢ: ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ (Arvind Kejriwal) ದೆಹಲಿಯಲ್ಲಿ ಪಂಜಾಬ್ ಅಧಿಕಾರಿಗಳ ಸಭೆ ನಡೆಸಿದ ನಂತರ ಪ್ರತಿಪಕ್ಷಗಳ “ರಿಮೋಟ್ ಕಂಟ್ರೋಲ್” (Remote control) ಆರೋಪವನ್ನು ನಿಭಾಯಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann), ಅಧಿಕಾರಿಗಳನ್ನು “ತರಬೇತಿ ಉದ್ದೇಶಗಳಿಗಾಗಿ” ಕಳುಹಿಸುವ ನಿರ್ಧಾರ ಅದಾಗಿತ್ತು ಎಂದಿದ್ದಾರೆ. “ಅಗತ್ಯವಿದ್ದರೆ, ತರಬೇತಿ ಉದ್ದೇಶಗಳಿಗಾಗಿ, ನಾನು ನನ್ನ ಅಧಿಕಾರಿಗಳನ್ನು ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಮತ್ತು ಇಸ್ರೇಲ್‌ಗೂ ಕಳುಹಿಸುತ್ತೇನೆ, ಅದಕ್ಕೆ ಯಾರಾದರೂ ಯಾಕೆ ಆಕ್ಷೇಪ ವ್ಯಕ್ತಪಡಿಸಬೇಕು ಎಂದು ಭಗವಂತ್ ಮಾನ್ ಸುದ್ದಿಗಾರರಿಗೆ ತಿಳಿಸಿದರು. “ಅವರು (ದೆಹಲಿ ಸರ್ಕಾರ) ಶಿಕ್ಷಣ, ಅಧಿಕಾರ, ಆರೋಗ್ಯದಲ್ಲಿ ಪರಿಣಿತರು, ನಾನು ಅಧಿಕಾರಿಗಳನ್ನು ಏಕೆ ಕಳುಹಿಸಬಾರದು?” ಎಂದು ಮಾನ್ ಪ್ರಶ್ನಿಸಿದ್ದಾರೆ. ಈ ವಾರದ ಆರಂಭದಲ್ಲಿ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪಂಜಾಬ್ ಅಧಿಕಾರಿಗಳನ್ನು ಭೇಟಿ ಮಾಡಿದ್ದು ಮಾನ್ ಸಭೆಯಲ್ಲಿ ಇರಲಿಲ್ಲ. ಎಎಪಿ ಮುಖ್ಯಸ್ಥರು “ರಿಮೋಟ್ ಕಂಟ್ರೋಲ್” ಅಧಿಕಾರ ನಡೆಸುತ್ತಿದ್ದಾರೆ ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿತ್ತು. “ಯಾರು ಆಕ್ಷೇಪಿಸಿದ್ದಾರೆ ಎಂದು ಮಾನ್ ವರದಿಗಾರರಲ್ಲಿ ಕೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸಭೆಯನ್ನು ಟೀಕಿಸಿ ಟ್ವೀಟ್ ಮಾಡದ್ದು “ಕೆಟ್ಟದ್ದೇ ಸಂಭವಿಸಿದೆ” ಎಂದು ಹೇಳಿದ್ದರು. “ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಂದರೆ ಎಲ್ಲರೂ ಅಂತಾಗುತ್ತಾ?” ಎಂದು ಮಾನ್ ಮಾಧ್ಯಮದವರಲ್ಲಿ ಕೇಳಿದ್ದಾರೆ.
ತಮ್ಮ ಪಕ್ಷದ ಮುಖ್ಯಸ್ಥರು ತಮ್ಮನ್ನು ಬದಿಗೆ ಸರಿಸಿದ್ದಾರೆ ಎಂಬ ಆರೋಪ ನಿರಾಕರಿಸಿದ ಮಾನ್ “ವಿರೋಧ ಯಾರು? ವಿರೋಧ ಎಲ್ಲಿದೆ? ಟೀಕೆಗಾಗಿ ಟೀಕೆ ಮಾಡಬೇಡಿ. ನಾನು ಅಧಿಕಾರಿಗಳನ್ನು ದೆಹಲಿಗೆ ತರಬೇತಿಗೆ ಕಳುಹಿಸಿದ್ದೇನೆ. ಅವರು ಒಳ್ಳೆಯದನ್ನು ಕಲಿಯಲು ಎಲ್ಲಿ ಬೇಕಾದರೂ ಹೋಗಬಹುದು. ನಾನು ಅದಕ್ಕೆ ಅವಕಾಶ ನೀಡಿದ್ದೇನೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ ಅವರು ಮಾನ್ ಅವರ ವಿವರಣೆಯನ್ನು ನಿರಾಕರಿಸಿದ್ದು ಕೇಜ್ರಿವಾಲ್ ಅವರು ಆದೇಶಿಸಿದ “ತಡವಾದ ತೇಪೆ ಹಚ್ಚುವ ಕೆಲಸ” ಎಂದು ಕರೆದರು. ಸೋಮವಾರ ನಡೆದ ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸ್‌ಪಿಸಿಎಲ್) ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಪಂಜಾಬ್‌ನ ಮುಖ್ಯ ಕಾರ್ಯದರ್ಶಿ ಮತ್ತು ಪವರ್ ಕಾರ್ಯದರ್ಶಿ ಕೂಡ ಉಪಸ್ಥಿತರಿದ್ದರು.
ಈ ಸಭೆಯನ್ನು ಪ್ರತಿಪಕ್ಷಗಳಾದ ಕಾಂಗ್ರೆಸ್, ಅಕಾಲಿದಳ ಮತ್ತು ಅಮರಿಂದರ್ ಸಿಂಗ್ ಟೀಕಿಸಿದರು.
ಕೆಟ್ಟದಾಗುತ್ತೆ ಎಂಬ ಆತಂಕವಿತ್ತು, ಕೆಟ್ಟದ್ದು ಸಂಭವಿಸಿತು. ಅರವಿಂದ ಕೇಜ್ರಿವಾಲ್ ಅವರು ಪಂಜಾಬ್‌ನ ಅಧಿಕಾರವನ್ನು ವಹಿಸಿಕೊಂಡಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಭಗವಂತ್ ಮಾನ್ ರಬ್ಬರ್ ಸ್ಟಾಂಪ್ ಎಂಬುದು ಮೊದಲೇ ತೀರ್ಮಾನವಾಗಿತ್ತು, ಈಗ ಕೇಜ್ರಿವಾಲ್ ದೆಹಲಿಯಲ್ಲಿ ಪಂಜಾಬ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸುವ ಮೂಲಕ ಅದು ಸರಿ ಎಂದು ಸಾಬೀತುಪಡಿಸಿದ್ದಾರೆ ಎಂದು ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದರು.
“ಸಿಎಂ ಭಗವಂತ್ ಮಾನ್ ಅವರ ಅನುಪಸ್ಥಿತಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಐಎಎಸ್ ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದಾರೆ. ಇದು ಡಿ-ಫ್ಯಾಕ್ಟೋ ಸಿಎಂ ಮತ್ತು ದೆಹಲಿ ರಿಮೋಟ್ ಕಂಟ್ರೋಲ್ ಅನ್ನು ಬಹಿರಂಗಪಡಿಸುತ್ತದೆ. ಫೆಡರಲಿಸಂನ ಸ್ಪಷ್ಟ ಉಲ್ಲಂಘನೆ, ಪಂಜಾಬಿ ಹೆಮ್ಮೆಗೆ ಅವಮಾನ. ಇಬ್ಬರೂ ಸ್ಪಷ್ಟಪಡಿಸಬೇಕು,” ಎಂದು ಪಂಜಾಬ್ ಮಾಜಿ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಕ್ರಮ ಮರಳುಗಾರಿಕೆ ಪ್ರಕರಣ: ಇಡಿಯಿಂದ ಪಂಜಾಬ್ ಮಾಜಿ ಸಿಎಂ ಚನ್ನಿ ವಿಚಾರಣೆ
ಇದನ್ನೂ ಓದಿ: ಪಂಜಾಬ್: ರಾಜ್ಯ ಅಧಿಕಾರಿಗಳ ಜೊತೆ ಕೇಜ್ರಿವಾಲ್ ಭೇಟಿ; ಎಎಪಿ ವಿರುದ್ಧ ವಿರೋಧ ಪಕ್ಷಗಳ ಟೀಕಾ ಪ್ರಹಾರ