‘ಚುನಾವಣೆಯಲ್ಲಿ ಗೆದ್ದರೆ ಕೃಷಿ ಸಾಲ ಮನ್ನಾ, ಕೊವಿಡ್​ 19 ಸಂತ್ರಸ್ತರಿಗೆ 25 ಸಾವಿರ ರೂ.ಪರಿಹಾರ’-ಪ್ರಿಯಾಂಕಾ ಗಾಂಧಿ ವಾದ್ರಾ ಭರವಸೆ

| Updated By: Lakshmi Hegde

Updated on: Oct 23, 2021 | 3:57 PM

ಇಂದು ಕಾಂಗ್ರೆಸ್​​ನ ಪ್ರತಿಜ್ಞಾ ಯಾತ್ರೆಗಳಿಗೆ ಬಾರಾಬಂಕಿಯಲ್ಲಿ ಚಾಲನೆ ನೀಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಹಲವು ಭರವಸೆಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ. ಅಂದಹಾಗೆ ಇಂದಿನಿಂದ ನವೆಂಬರ್​ 1ರವರೆಗೆ ಒಟ್ಟು ಮೂರು ಪ್ರತಿಜ್ಞಾ ಯಾತ್ರೆಗಳು ನಡೆಯಲಿವೆ.

‘ಚುನಾವಣೆಯಲ್ಲಿ ಗೆದ್ದರೆ ಕೃಷಿ ಸಾಲ ಮನ್ನಾ, ಕೊವಿಡ್​ 19 ಸಂತ್ರಸ್ತರಿಗೆ 25 ಸಾವಿರ ರೂ.ಪರಿಹಾರ’-ಪ್ರಿಯಾಂಕಾ ಗಾಂಧಿ ವಾದ್ರಾ ಭರವಸೆ
ಪ್ರಿಯಾಂಕಾ ಗಾಂಧಿ ವಾದ್ರಾ
Follow us on

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಇದೀಗ ಉತ್ತರಪ್ರದೇಶ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಮುಂಬರುವ ಚುನಾವಣೆ (Uttar Pradesh Assembly Election) ದೃಷ್ಟಿಯಿಂದ ಅಲ್ಲಿನ ಜನರಿಗೆ ಮಹತ್ವದ ಭರವಸೆಗಳನ್ನು ನೀಡುತ್ತಿದ್ದಾರೆ. ಈ ಬಾರಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಶೇ.40ರಷ್ಟು ಟಿಕೆಟ್​​ನ್ನು ಮಹಿಳೆಯರಿಗೆ ನೀಡುವುದಾಗಿ ಘೋಷಿಸಿರುವ ಪ್ರಿಯಾಂಕಾ ಗಾಂಧಿ, ಒಂದೊಮ್ಮೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೆ, ಪದವಿ ಪೂರ್ಣಗೊಳಿಸಿದ ಹುಡುಗಿಯರಿಗೆ ಸ್ಕೂಟಿ ಮತ್ತು 12ನೇ ಕ್ಲಾಸ್​ ಪಾಸ್​ ಆದ ಹುಡುಗಿಯರಿಗೆ ಸ್ಮಾರ್ಟ್ ಫೋನ್​ ಕೊಡುವ ಭರವಸೆಯನ್ನೂ ಈಗಾಗಲೇ ಕೊಟ್ಟಿದ್ದಾರೆ.

ಹಾಗೇ ಇಂದು ಕಾಂಗ್ರೆಸ್​​ನ ಪ್ರತಿಜ್ಞಾ ಯಾತ್ರೆಗಳಿಗೆ ಬಾರಾಬಂಕಿಯಲ್ಲಿ ಚಾಲನೆ ನೀಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಇನ್ನಷ್ಟು ಭರವಸೆಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ. ಅಂದಹಾಗೆ ಇಂದಿನಿಂದ ಒಟ್ಟು ಮೂರು ಪ್ರತಿಜ್ಞಾ ಯಾತ್ರೆಗಳು ನಡೆಯಲಿದ್ದು, ಒಂದು ಯಾತ್ರೆ ಬಾರಾಬಂಕಿಯಿಂದ ಬುಂದೇಲ್​ಖಂಡ, ಇನ್ನೊಂದು ಯಾತ್ರೆ ಸಹರಾನ್‌ಪುರದಿಂದ ಮಥುರಾಕ್ಕೆ ಮತ್ತು ಇನ್ನೊಂದು ವಾರಾಣಸಿಯಿಂದ ರಾಯಬರೇಲಿಗೆ ತೆರಳಲಿದೆ. ನವೆಂಬರ್​ 1ರವರೆಗೆ ಈ ಯಾತ್ರೆ ನಡೆಯಲಿದೆ.

ಇಂದು ಬಾರಾಬಂಕಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡಲಾಗುವುದು, 20 ಲಕ್ಷ ಸರ್ಕಾರಿ ಕೆಲಸ ಸೃಷ್ಟಿಸಲಾಗುವುದು ಮತ್ತು ಕೊವಿಡ್​ 19 ಸಾಂಕ್ರಾಮಿಕ ಕಾಲದ ವಿದ್ಯುತ್​ ಬಿಲ್​ ಮನ್ನಾ ಮಾಡುತ್ತೇವೆ ಎಂದಿದ್ದಾರೆ. ಹಾಗೇ ಕೊವಿಡ್​ 19 ಸೋಂಕಿನಿಂದ ಸಂತ್ರಸ್ತರಾದವರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ. ಛತ್ತೀಸ್​ಗಡ್​​ನಲ್ಲಿರುವಂತೆ ನಾವೂ ಕೂಡ ಉತ್ತರಪ್ರದೇಶದಲ್ಲಿ ಗೋಧಿ, ಭತ್ತದ ಬೆಲೆಯನ್ನು 2500 ರೂ.ನಿಗದಿಪಡಿಸುತ್ತೇವೆ. ಪ್ರತಿ ಕ್ವಿಂಟಾಲ್​​ ಕಬ್ಬಿಗೆ ಬೆಂಬಲ ಬೆಲೆ 400 ರೂ.ನೀಡುತ್ತೇವೆ ಎಂದು ಹೇಳಿದ್ದಾರೆ.

ಹಾಗೇ, ಇಂದು ಕೂಡ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ಹಿಂಸಾಚಾರ ಉಲ್ಲೇಖಿಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಸಚಿವರೊಬ್ಬರ ಪುತ್ರನೊಬ್ಬ ರೈತರನ್ನು ಕೊಲ್ಲುತ್ತಾರೆ ಎಂದಾದರೆ, ಈ ಸರ್ಕಾರ ರೈತರಿಗೆ ಎಷ್ಟರಮಟ್ಟಿಗೆ ಮಹತ್ವ ನೀಡುತ್ತದೆ ಎಂಬುದು ಗೊತ್ತಾಗುತ್ತದೆ. ಆರೋಪಿಯನ್ನು ಬಂಧಿಸಲೂ ಕೂಡ ಉತ್ತರಪ್ರದೇಶ ಸರ್ಕಾರ ತುಂಬ ವಿಳಂಬ ಮಾಡಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನನ್ನ ಪರವಾಗಿ ಜಮೀರ್ ಬ್ಯಾಟಿಂಗ್ ಮಾಡುವ ಅಗತ್ಯವಿಲ್ಲ; ಜೆಡಿಎಸ್ ಎಂಎಲ್​ಸಿ ಬಿಎಂ ಫಾರೂಕ್

Radhe Shyam: ‘ನನಗೆ ಎಲ್ಲಾ ಗೊತ್ತು, ಆದರೆ ಅದನ್ನ ಯಾರಿಗೂ ಹೇಳೋದಿಲ್ಲ’ ಎಂ‌ದ ಪ್ರಭಾಸ್; ಏಕಂತೆ?