ಮಹಾರಾಷ್ಟ್ರದಿಂದ ಗುಜರಾತಿಗಳನ್ನು ಹೊರಹಾಕಿದರೆ ನಿಮ್ಮಲ್ಲಿ ಹಣವೇ ಉಳಿಯುವುದಿಲ್ಲ; ರಾಜ್ಯಪಾಲರ ಭಾಷಣಕ್ಕೆ ಸಂಜಯ್ ರಾವತ್ ಆಕ್ರೋಶ
Maharashtra Crisis: ದಶಕಗಳಿಂದ ನಡೆಯುತ್ತಿರುವ ಮರಾಠಿ-ಗುಜರಾತಿ ಘರ್ಷಣೆಗೆ ಕಿಚ್ಚು ಹಚ್ಚಿರುವ ಸಂಜಯ್ ರಾವತ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಂಬೈ: ಒಂದುವೇಳೆ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ ಹೊರಗೆ ಕಳುಹಿಸಿದರೆ ಮಹಾರಾಷ್ಟ್ರದಲ್ಲಿ ಹಣವೇ ಇರುವುದಿಲ್ಲ. ಆಗ ಮುಂಬೈಯನ್ನು ಭಾರತದ ಆರ್ಥಿಕ ರಾಜಧಾನಿ ಎಂದು ಕರೆಯಲು ಸಾಧ್ಯವಾಗುವುದಿಲ್ಲ ಎಂದು ಮಹಾರಾಷ್ಟ್ರದ ರಾಜ್ಯಪಾಲ ಬಿ.ಎಸ್ ಕೊಶ್ಯಾರಿ (BS Koshyari) ಹೇಳಿದ್ದರು. ರಾಜ್ಯಪಾಲರ ಈ ಭಾಷಣವನ್ನು ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಖಂಡಿಸಿದ್ದಾರೆ.
ದಶಕಗಳಿಂದ ನಡೆಯುತ್ತಿರುವ ಮರಾಠಿ-ಗುಜರಾತಿ ಘರ್ಷಣೆಗೆ ಕಿಚ್ಚು ಹಚ್ಚಿರುವ ಸಂಜಯ್ ರಾವತ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯಪಾಲ ಕೊಶ್ಯಾರಿ ಅವರ ಈ ವಿಡಿಯೋವನ್ನು ಸಂಜಯ್ ರಾವತ್ ಹಂಚಿಕೊಂಡಿದ್ದಾರೆ. ರಾಜ್ಯಪಾಲರು ಮರಾಠಿಗರ ಸ್ವಾಭಿಮಾನದ ಮೇಲೆ ಹೇಗೆ ಹೊಡೆತ ಕೊಟ್ಟಿದ್ದಾರೆ ಎಂಬುದನ್ನು ನೀವೇ ನೋಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಬೆಂಬಲಿತ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರೇ, ದಯವಿಟ್ಟು ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಿ. ಇದು ಮರಾಠಿ ಶ್ರಮಜೀವಿಗಳಿಗೆ ಮಾಡಿದ ಅವಮಾನ ಎಂದು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Maharashtra Politics: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಕ್ಕೆ ಚುನಾವಣಾ ಆಯೋಗ ನೊಟೀಸ್
ಸಂಜಯ್ ರಾವತ್ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಜ್ಯಪಾಲ ಬಿಎಸ್ ಕೊಶ್ಯಾರಿ ಅವರು ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ ಅದರಲ್ಲೂ ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಹೊರಗೆ ಹಾಕಿದರೆ, ನಿಮ್ಮ ಬಳಿ ಹಣವೇ ಉಳಿಯುವುದಿಲ್ಲ ಎಂದು ನಾನು ಹಲವು ಬಾರಿ ಜನರಿಗೆ ಹೇಳಿದ್ದೇನೆ ಎಂದು ಹೇಳುವುದನ್ನು ನೋಡಬಹುದು.
महाराष्ट्रात भाजपा पुरस्कृत मुख्यमंत्री होताच मराठी माणूस आणि शिवरायांचा अपमान सुरू झाला..स्वाभिमान अभिमान यावर बाहेर पडलेला गट हे ऐकूनही गप्प बसणार असेल तर शिवसेनेचे नाव घेऊ नका..मुख्यमंत्री शिंदे..राज्यपालांचा साधा निषेध तरी करा.मराठी कष्टकरी जनतेचा हा अपमान आहे.. ऐका .. ऐका… pic.twitter.com/dOvC2B0CFu
— Sanjay Raut (@rautsanjay61) July 30, 2022
ಮುಂಬೈನ ಅಂಧೇರಿಯಲ್ಲಿ ಶುಕ್ರವಾರ ಮಾತನಾಡಿದ ರಾಜ್ಯಪಾಲರು, ಮಾರ್ವಾಡಿ ಗುಜರಾತಿ ಸಮುದಾಯವನ್ನು ಶ್ಲಾಘಿಸಿದ್ದಾರೆ. ಅವರು ಹೋದಲ್ಲೆಲ್ಲಾ ಆಸ್ಪತ್ರೆಗಳು, ಶಾಲೆಗಳು ಇತ್ಯಾದಿಗಳನ್ನು ರಚಿಸುವ ಮೂಲಕ ಆ ಸ್ಥಳದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಮಹಾರಾಷ್ಟ್ರದ ರಾಜ್ಯಪಾಲರು ಮರಾಠಿ ಜನರಿಗೆ ಮಾಡಿದ ಅವಮಾನ ಭಯಾನಕವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Maharashtra Rain: ಮಹಾರಾಷ್ಟ್ರದಲ್ಲಿ ನಿಲ್ಲದ ಮಳೆ; ಪುಣೆ ಸೇರಿ ಹಲವೆಡೆ ರೆಡ್ ಅಲರ್ಟ್, ಜುಲೈ 16ರವರೆಗೆ ಶಾಲೆಗಳಿಗೆ ರಜೆ
ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಮರಾಠಿಗರಿಗೆ ಎಚ್ಚರಿಕೆಯ ಕರೆಯನ್ನು ನೀಡಿದ ಸಂಜಯ್ ರಾವತ್, ಮಹಾರಾಷ್ಟ್ರ ಮತ್ತು ಮರಾಠಿ ಜನರು ಭಿಕ್ಷುಕರು ಎಂದು ರಾಜ್ಯಪಾಲರು ಪರೋಕ್ಷವಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಶಿಂಧೆಯವರೇ, ನೀವು ಇದನ್ನು ನೋಡಿದ್ದೀರಾ? ನಿಮ್ಮ ಮಹಾರಾಷ್ಟ್ರವೇ ಬೇರೆ. ನಿಮಗೆ ಸ್ವಾಭಿಮಾನವಿದ್ದರೆ ರಾಜ್ಯಪಾಲರ ರಾಜೀನಾಮೆ ಪಡೆಯಿರಿ ಎಂದು ಸಂಜಯ್ ರಾವತ್ ಸವಾಲು ಹಾಕಿದ್ದಾರೆ.