ರಾಜೀನಾಮೆ ನೀಡಲ್ಲ, ಹೇಳಿಕೆ ನೀಡಿದರೆ ಸುನಾಮಿ ಉಂಟಾಗುತ್ತದೆ: ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸರಣ್ ಸಿಂಗ್
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸಿಂಗ್ ಅವರನ್ನು ಕರೆಸಿದ್ದು ಉದ್ವಿಗ್ನತೆಯನ್ನು ಉಲ್ಬಣಗೊಳಿಸಬಹುದು ಎಂಬ ಆತಂಕದಿಂದ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.
ದೆಹಲಿ: ಆಪಾದಿತ ಲೈಂಗಿಕ ಕಿರುಕುಳದ (MeToo allegations) ವಿರುದ್ಧ ಪ್ರತಿಭಟಿಸುವ ಕುಸ್ತಿಪಟುಗಳು ತಮ್ಮ ರಾಜೀನಾಮೆಯ ಬೇಡಿಕೆಯ ಮೇಲೆ ದೃಢವಾಗಿ ಉಳಿದುಕೊಂಡಿರುವಂತೆಯೇ, ಕುಸ್ತಿ ಸಂಸ್ಥೆಯ ಮುಖ್ಯಸ್ಥ ಬ್ರಿಜ್ ಭೂಷಣ್ ಸರಣ್ ಸಿಂಗ್ (Brij Bhushan Sharan Singh) ನಾನು ಹೇಳಿಕೆ ನೀಡಿದರೆ ಸುನಾಮಿ ಉಂಟಾಗುತ್ತದೆ. ನಾನು ಯಾರ ಸಹಾಯಾರ್ಥವಾಗಿ ಇಲ್ಲಿಲ್ಲ. ನಾನು ಚುನಾಯಿತ ಪ್ರತಿನಿಧಿ ಎಂದಿದ್ದಾರೆ. ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವಾರು ಪ್ರಸಿದ್ಧ ಭಾರತೀಯ ಕುಸ್ತಿಪಟುಗಳು ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು,ಭಾರತ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥರು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಸಿಂಗ್ ವಿರುದ್ಧ ಕುಸ್ತಿಪಟುಗಳು #MeToo ಆರೋಪ ಹೊರಿಸಿದ್ದು, ತಮಗೆ ಜೀವ ಭಯವಿದೆ ಎಂದಿದ್ದಾರೆ. ಮೀಟೂ ಆರೋಪ ಹೊಂದಿರುವ ಸಿಂಗ್ ಅವರನ್ನು ಕುಸ್ತಿ ಸಂಸ್ಥೆಯ ಮುಖ್ಯಸ್ಥ ಸ್ಥಾನದಿಂದ ತಕ್ಷಣವೇ ವಜಾಗೊಳಿಸಬೇಕೆಂದು ಕುಸ್ತಿಪಟುಗಳು ಒತ್ತಾಯಿಸುತ್ತಿದ್ದಾರೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನಾನು ಪ್ರಧಾನಿ ಕಾರ್ಯಾಲಯ ಮತ್ತು ಗೃಹ ಸಚಿವರೊಂದಿಗೆ ಮಾತನಾಡಿಲ್ಲ” ಎಂದು ಸಿಂಗ್ ಹೇಳಿದ್ದಾರೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸಿಂಗ್ ಅವರನ್ನು ಕರೆಸಿದ್ದು ಉದ್ವಿಗ್ನತೆಯನ್ನು ಉಲ್ಬಣಗೊಳಿಸಬಹುದು ಎಂಬ ಆತಂಕದಿಂದ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಅನುರಾಗ್ ಠಾಕೂರ್ ಅವರು ನಿನ್ನೆ ರಾತ್ರಿ 2 ಗಂಟೆಯವರೆಗೆ ಪ್ರತಿಭಟನಾ ನಿರತ ಕ್ರೀಡಾಪಟುಗಳೊಂದಿಗೆ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು.
ಇದನ್ನೂ ಓದಿ:ಬಿಹಾರದಲ್ಲಿ ಜಾತಿ ಸಮೀಕ್ಷೆ ವಿರೋಧಿಸಿ ಸಲ್ಲಿಸಿದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಇಂದು, ಕುಸ್ತಿಪಟುಗಳು ಭಾರತೀಯ ಒಲಿಂಪಿಕ್ ಸಂಸ್ಥೆಯ ಮುಖ್ಯಸ್ಥೆ ಪಿಟಿ ಉಷಾ ಅವರಿಗೆ ಪತ್ರ ಬರೆದು, ಸಿಂಗ್ ಅವರು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಟೋಕಿಯೊದಲ್ಲಿ ಒಲಿಂಪಿಕ್ ಪದಕವನ್ನು ತಪ್ಪಿಸಿದ ನಂತರ WFI ಮುಖ್ಯಸ್ಥರಿಂದ ವಿನೇಶ್ ಫೋಗಟ್ ಮಾನಸಿಕವಾಗಿ ಕಿರುಕುಳ ಮತ್ತು ಚಿತ್ರಹಿಂಸೆಗೆ ಒಳಗಾಗಿದ್ದರು. ಅವರು ಆತ್ಮಹತ್ಯೆ ಬಗ್ಗೆಯೂ ಯೋಚಿಸಿದ್ದರು. ನಮಗೆ ಜೀವಭಯವಿದೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ. ಬುಧವಾರ, ಕೇಂದ್ರವು ಡಬ್ಲ್ಯುಎಫ್‌ಐ ಆರೋಪಗಳಿಗೆ ಮೂರು ದಿನಗಳಲ್ಲಿ ಪ್ರತಿಕ್ರಿಯಿಸದಿದ್ದರೆ, ಕ್ರೀಡಾ ಸಚಿವಾಲಯವು “ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, 2011 ರ ನಿಬಂಧನೆಗಳ ಪ್ರಕಾರ ಫೆಡರೇಶನ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದುವರಿಯುತ್ತದೆ” ಎಂದು ಸ್ಪಷ್ಟಪಡಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:38 pm, Fri, 20 January 23