ಮೋದಿ ತಲೆಗೆ ಗುಂಡು ಹಾರಿಸಬೇಕು: ಆರ್​ಜೆಡಿ ನಾಯಕನ ವಿವಾದಾತ್ಮಕ ಹೇಳಿಕೆ

|

Updated on: Mar 20, 2024 | 10:58 AM

ಪ್ರಧಾನಿ ಮೋದಿ ತಲೆಗೆ ಗುಂಡು ಹಾರಿಸಿದರೆ ತಪ್ಪೇನು ಎಂದು ಆರ್​ಜೆಡಿ ನಾಯಕ ಅವಧೇಶ್​ ಸಿಂಗ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇಂಡಿಯಾ ಬ್ಲಾಕ್​ ಸಭೆಯಲ್ಲಿ ಪ್ರಧಾನಿ ಮೋದಿಗೆ ಗುಂಡು ಹಾರಿಸುವ ಕುರಿತು ಅವರು ಮಾತಣಾಡಿದ್ದು, ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಮೋದಿ ತಲೆಗೆ ಗುಂಡು ಹಾರಿಸಬೇಕು: ಆರ್​ಜೆಡಿ ನಾಯಕನ ವಿವಾದಾತ್ಮಕ ಹೇಳಿಕೆ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi) ವಿರುದ್ಧ ಆರ್​ಜೆಡಿ ನಾಯಕ ಅವಧೇಶ್​ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ತಲೆಗೆ ಗುಂಡು ಹಾರಿಸುವ ಬಗ್ಗೆ ಅವರು ಮಾತನಾಡಿದ್ದಾರೆ. ಮೋದಿ ತಲೆಗೆ ಗುಂಡು ಹಾರಿಸಿದರೆ ತಪ್ಪೇನು ಎಂದು ಪ್ರಶ್ನಿಸಿರುವ ವಿಡಿಯೋದ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಜೆಪಿಯು ಈ ಐದು ಸೆಕೆಂಡುಗಳ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದು, ಜಾರ್ಖಂಡ್​ ಡಿಜಿಪಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದೆ.

‘‘ತಮ್ಮ ಸೋಲು ಹತ್ತಿರವಾಗುತ್ತಿರುವುದನ್ನು ನೋಡಿ, ಎಲ್ಲಾ ಪಕ್ಷಗಳು ಮತ್ತು ಅವರ ನಾಯಕರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ’’ ಎಂದು ಬಾಬುಲಾಲ್​ ಮರಾಂಡಿ ಬರೆದಿದ್ದಾರೆ.

ಇಂಡಿಯಾ ಮೈತ್ರಿಕೂಟದ ಯಾವುದೇ ಪಿತೂರಿ ಪ್ರಧಾನಿ ಮೋದಿಯವರ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಅವರ 140ಕೋಟಿ ಜನರ ಕುಟುಂಬವು ಅವರ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದ್ದಾರೆ. ಈ 5 ಸೆಕೆಂಡ್ ವೀಡಿಯೋದಲ್ಲಿ ಸಭೆ ನಡೆಯುತ್ತಿರುವುದನ್ನು ಕಾಣಬಹುದು, ಇದು ಇಂಡಿಯಾ ಬ್ಲಾಕ್ ನಾಯಕರ ಸಭೆ ಎಂದು ಬಿಜೆಪಿ ಹೇಳಿದೆ.

ಅವಧೇಶ್​ ವಿಡಿಯೋ ತುಣುಕು

ಅದೊಂದೇ ವಾಕ್ಯ ವಿಡಿಯೋದಲ್ಲಿದೆ ಅದನ್ನು ಹೊರತುಪಡಿಸಿ ಅವರ ಮಾತಿನ ಹಿಂದಿನ ಅಥವಾ ಮುಂದಿನ ವಾಕ್ಯವನ್ನು ಹಂಚಿಕೊಳ್ಳಲಾಗಿಲ್ಲ.

ಮತ್ತಷ್ಟು ಓದಿ: ಡಿಎಂಕೆ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಮತ್ತು ಕುಟುಂಬ ಆಡಳಿತ: ತಮಿಳುನಾಡಿನಲ್ಲಿ ಪ್ರಧಾನಿ ಮೋದಿ

ಏತನ್ಮಧ್ಯೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೋಮವಾರ ಚುನಾವಣಾ ನಿರ್ಣಾಯಕ ರಾಜ್ಯವಾದ ಬಿಹಾರದಲ್ಲಿ ಐದು ಪಕ್ಷಗಳ ಒಕ್ಕೂಟದ ಸೀಟು ಹಂಚಿಕೆ ವ್ಯವಸ್ಥೆಯನ್ನು ಘೋಷಿಸಿತು, ಅದರ 40 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) 2019 ರಂತೆಯೇ 17 ಸ್ಥಾನಗಳಲ್ಲಿ ಹೋರಾಡುತ್ತದೆ ಮತ್ತು ಅದರ ಪ್ರಮುಖ ಮಿತ್ರ ಪಕ್ಷವಾದ ಜನತಾ ದಳ (ಯುನೈಟೆಡ್) 16 ರಲ್ಲಿ ಹೋರಾಡುತ್ತದೆ, 2019 ಕ್ಕಿಂತ ಒಂದು ಕಡಿಮೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ