AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯ್ನುಡಿಯಲ್ಲೇ ಪ್ರಾರ್ಥನೆ; ತಮಿಳುನಾಡಿನ 47 ದೇವಾಲಯಗಳಲ್ಲಿ ತಮಿಳಿನಲ್ಲಿ ಪ್ರಾರ್ಥಿಸಲು ಅವಕಾಶ

Tamil Nadu: ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಸರ್ಕಾರವು "ಅಣ್ಣೈ ತಮಿಳಿಲ್ ಅರ್ಚನೈ" ಅಂದರೆ ಮಾತೃಭಾಷೆ ತಮಿಳಿನಲ್ಲಿ ಪ್ರಾರ್ಥನೆಗಳನ್ನು ಪರಿಚಯಿಸಿದೆ.

ತಾಯ್ನುಡಿಯಲ್ಲೇ ಪ್ರಾರ್ಥನೆ;  ತಮಿಳುನಾಡಿನ 47 ದೇವಾಲಯಗಳಲ್ಲಿ ತಮಿಳಿನಲ್ಲಿ ಪ್ರಾರ್ಥಿಸಲು ಅವಕಾಶ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Aug 05, 2021 | 9:50 PM

Share

ಚೆನ್ನೈ: ತಮಿಳುನಾಡಿನ 47 ದೇವಸ್ಥಾನಗಳಲ್ಲಿ, ಭಕ್ತರು ಶುಕ್ರವಾರದಿಂದ ತಮಿಳಿನಲ್ಲಿ ಪ್ರಾರ್ಥನೆ ಮಾಡುವ ಅವಕಾಶವಿದೆ. ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಸರ್ಕಾರವು “ಅಣ್ಣೈ ತಮಿಳಿಲ್ ಅರ್ಚನೈ” ಅಂದರೆ ಮಾತೃಭಾಷೆ ತಮಿಳಿನಲ್ಲಿ ಪ್ರಾರ್ಥನೆಗಳನ್ನು ಪರಿಚಯಿಸಿದೆ.ದೇವಾಲಯದ ಅರ್ಚಕರಿಗೆ ತಮಿಳು ಪ್ರಾರ್ಥನೆಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಒಂದು ರಿಫ್ರೆಶರ್ ಕೋರ್ಸ್ ನೀಡಲಾಗಿದೆ. ಆಯ್ಕೆಯನ್ನು ಬಳಸಲು ಇಚ್ಛಿಸುವ ಭಕ್ತರಿಗೆ ಸಹಾಯ ಮಾಡಲು ಅವರ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ದೇವಸ್ಥಾನಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಚೆನ್ನೈನ ಕಪಾಲೀಶ್ವರರ್ ದೇವಸ್ಥಾನದಲ್ಲಿ ಈ ಪ್ರಾರ್ಥನಾ ಕ್ರಮಕ್ಕೆ ಚಾಲನೆ ನೀಡಿದ ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿಗಳ ಸಚಿವ ಪಿಕೆ ಶೇಖರ್ ಬಾಬು, “ಈ ಕಲ್ಪನೆ 1974 ರಲ್ಲಿ ಹುಟ್ಟಿತ್ತು. ಈ ಹಿಂದೆ ಅದು ಇಲ್ಲಿತ್ತು ಈಗ ನಾವು ಇದನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಲಹೆಯಂತೆ ಜಾರಿಗೊಳಿಸಿದ್ದೇವೆ. ಇದು ಎಲ್ಲಾ ವಿಭಾಗಗಳನ್ನು ತೃಪ್ತಿಪಡಿಸುತ್ತದೆ ಮತ್ತು ಯಾವುದೇ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ ಎಂದಿದ್ದಾರೆ. ಸಂಸ್ಕೃತದಲ್ಲಿ ಪ್ರಾರ್ಥನೆ ಮಾಡಲು ಈಗಿರುವ ಆಯ್ಕೆ ಅದೇ ರೀತಿ ಮುಂದುವರಿಯುತ್ತದೆ.

ಚೆನ್ನೈನಲ್ಲಿ ಸಾಮಾಜಿಕ ಕಾರ್ಯಕರ್ತೆ ಮೈಲಾಪುರ ದೇವಸ್ಥಾನದಲ್ಲಿ ಪ್ರಾರ್ಥಿಸುವ ಸೌಮ್ಯ ಶಂಕರ್ ಅವರು ಈ ಆಯ್ಕೆಯನ್ನು ತೆಗೆದುಕೊಳ್ಳುವುದಾಗಿ ಹೇಳಿದರು. “ನಾವು ಅರ್ಚಕರ ಪ್ರಾರ್ಥನೆಯನ್ನು ಅರ್ಥಮಾಡಿಕೊಂಡಾಗ ಅದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಸಂಸ್ಕೃತದಲ್ಲಿ ಪಠಣ ಮಾಡುವಾಗ, ಎಲ್ಲರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದರು.

ಇದು ನಂಬಿಕೆ ಮತ್ತು ಭಾಷೆಯ ವಿಷಯವಲ್ಲ. ಇದು ಮೌಲ್ಯಹೊಂದಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಉದ್ಯಮಿ ಗೀತಾ ಮುಹಿಲನ್ ಹೇಳಿದ್ದಾರೆ.

ತಮಿಳುನಾಡು ಸರ್ಕಾರವು ಅರ್ಚಕರಿಗೆ ತರಬೇತಿ ನೀಡಿದ ನಂತರ ತಮಿಳು ಭಾಷೆಯ ಆಯ್ಕೆಯನ್ನು ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ವಿಸ್ತರಿಸುವ ಆಶಯ ಹೊಂದಿದೆ. ರಾಜಕೀಯವಾಗಿ ಡಿಎಂಕೆ ರಾಜ್ಯದಲ್ಲಿ ಹಿಂದಿ ಮತ್ತು ಸಂಸ್ಕೃತ ಹೇರಿಕೆಯನ್ನು ವಿರೋಧಿಸುತ್ತಿದೆ.

ಇದನ್ನೂ ಓದಿ:  Tamil Nadu: ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಗೆದ್ದ ಖುಷಿಗೆ ದೇಗುಲದ ಮುಂದೆ ಪ್ರಾಣತ್ಯಾಗ ಮಾಡಿದ ಅಭಿಮಾನಿ!

ಇದನ್ನೂ ಓದಿ:  ಕೊವಿಡ್ ಲಸಿಕೆ ಪಡೆಯದೇ ಇದ್ದರೆ ಸೆಲ್ ಫೋನ್ ಬ್ಲಾಕ್, ಕೆಲಸಕ್ಕೂ ಕುತ್ತು: ಕಠಿಣ ಕ್ರಮ ಕೈಗೊಂಡ ಪಾಕಿಸ್ತಾನ