ಫರೀದಾಬಾದ್ (ಹರಿಯಾಣ): ಸಾವು ಎಷ್ಟು ಅನಿಶ್ಚಿತ (uncertain) ಮತ್ತು ಕ್ರೂರ ಅನ್ನೋದನ್ನು ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಅರ್ಥಮಾಡಿಕೊಳ್ಳಬಹುದು. ವಿಡಿಯೋದಲ್ಲಿ ಕಾಣುವ ವ್ಯಕ್ತಿಯದು ಖಂಡಿತ ಸಾಯುವ ಅದರಲ್ಲೂ ಹೃದಯಾಘಾತದ (heart attack) ಮೂಲಕ ಕುಸಿದು ಸಾವನ್ನಪ್ಪುವ ವಯಸ್ಸಲ್ಲ. ಔಷಧಿ ಕೊಳ್ಳಲೆಂದು ಮೆಡಿಕಲ್ ಶಾಪ್ (medical shop) ವೊಂದಕ್ಕೆ ಬರುವ ಅವನು ಎದೆ ನೀವಿಕೊಳ್ಳುತ್ತಲೇ ಮಾತ್ರೆ ಕೇಳುತ್ತಾನೆ. ಅವನ ಪಕ್ಕದಲ್ಲಿ ಒಬ್ಬ ಅಜ್ಜಿ ಮಾತ್ರೆ ಖರೀದಿಸಿ ಆರಾಮಾಗಿ ನಡೆದು ಹೋಗುತ್ತಾಳೆ. ಆದರೆ ಇವನ ಮುಖದಲ್ಲಿ ಗಾಬರಿ, ಅತಂಕ ಕಾಣಬಹುದು. ಎದೆನೋವು ಅವನಿಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಎದೆ ಸವರಿಕೊಳ್ಳವುದನ್ನು ಮುಂದುವರಿಸುತ್ತಾನೆ. ಅಂಗಡಿಯವನು ಮೆಡಿಸಿನ್ ನೀಡಿದ ಬಳಿಕ ಅವನು ಜೇಬಿಂದ ಹಣ ತೆಗೆದು ಕೊಡುತ್ತಾನೆ. ಅಷ್ಟರಲ್ಲಿ ಎದೆನೋವು ಜಾಸ್ತಿಯಾಗಿ ಅಂಗಡಿಯ ಕೌಂಟರ್ ಪಕ್ಕದಲ್ಲೇ ಕುಸಿಯುತ್ತಾನೆ, ಅಂಗಡಿಯವ ಅವನ ಕೈಹಿಡಿಯುವ ಪ್ರಯತ್ನ ಮಾಡುವುದು ವಿಡಿಯೋದಲ್ಲಿ ಕಾಣುತ್ತದೆ. ಸುಮಾರು 3 ನಿಮಿಷಗಳ ಇಡೀ ದೃಶ್ಯಾವಳಿ ಅಂಗಡಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಕುಸಿದುಬಿದ್ದ ವ್ಯಕ್ತಿ ಅಲ್ಲೇ ಕೊನೆಯುಸಿರೆಳೆದಿದ್ದಾನೆ.
Man got heart attack while taking ORS at Medical store, died on the spot in Faridabad, Haryana. ?#Faridabad #Haryana #HeartAttack #Health #BreakingNews #ViraqlVideo #India #IndiaNews pic.twitter.com/80y2bkVzy0
— Free Press Journal (@fpjindia) January 6, 2023
ಅಂದಹಾಗೆ, ಹರಿಯಾಣದ ಫರೀದಾಬಾದ್ ನಗರದಲ್ಲಿರುವ ಮೆಡಿಕಲ್ ಶಾಪೊಂದರ ಮುಂದೆ ಶುಕ್ರವಾರದಂದು ಈ ದುರಂತ ನಡೆದಿದೆ.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವ್ಯಕ್ತಿಯ ಹೆಸರು ಸಂಜಯ್ ಮತ್ತು ಅವನ ವಯಸ್ಸು ಕೇವಲ 23-ವರ್ಷ! ಸಂಜಯ್ ಉತ್ತರ ಪ್ರದೇಶದ ಇಟಾದ ನಿವಾಸಿ. ಮೆಡಿಕಲ್ ಶಾಪ್ ನಲ್ಲಿದ್ದ ವ್ಯಕ್ತಿ ನೀಡಿರುವ ಹೇಳಿಕೆಯ ಪ್ರಕಾರ ಅವನು ಓ ಅರ್ ಎಸ್ ಕೇಳಿದನಂತೆ. ಅಜ್ಜಿಗೆ ಔಷಧಿ ನೀಡಿದ ನಂತರ ಅಂಗಡಿಯವ ಸಂಜಯ್ ಗೆ ಓಅರ್ ಎಸ್ ಕೊಡುತ್ತಾನೆ. ಆದರೆ ಅಷ್ಟರಲ್ಲಿ ಸಂಜಯ್ ಕುಸಿಯಲಾರಂಭಿಸುತ್ತಾನೆ. ಹಾಗೆ ಕುಸಿದವನು ಮೇಲೇಳಲೇ ಇಲ್ಲ ಅಂತ ಅಂಗಡಿಯವ ಪೊಲೀಸರಿಗೆ ತಿಳಿಸಿದ್ದಾನೆ.
ಶುಕ್ರವಾರದಂದು ವ್ಯಕ್ತಿಯೊಬ್ಬ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಆ ಸನ್ನಿವೇಶ ಜಿಮ್ ನಲ್ಲಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ಯುವಕರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿರುವುದು ಕಳವಳಕಾರಿ ಅಂಶವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ