ಕಾಂಗ್ರೆಸ್ ಮುಂದೆ ಮೂರು ಸವಾಲುಗಳೊಡ್ಡಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೂರು ಸವಾಲುಗಳನ್ನು ಹಾಕಿದ್ದಾರೆ. ಅವರು ಸಂವಿಧಾನವನ್ನು ಬದಲಿಸಿ ಧರ್ಮದ ಆಧಾರದಲ್ಲಿ ಮುಸಲ್ಮಾನರಿಗೆ ರಕ್ಷಣೆ ನೀಡುವುದಿಲ್ಲ. ದೇಶವನ್ನು ಹಂಚಿಕೆ ಮಾಡುವ ಕೆಲಸವನ್ನು ಮಾಡುವುದಿಲ್ಲ ಎಂದು ಬರೆದುಕೊಡಬೇಕು.
ಕಾಂಗ್ರೆಸ್ಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮೂರು ಸವಾಲುಗಳನ್ನು ಹಾಕಿದ್ದಾರೆ. ಗುಜರಾತ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಅವರ ಚೇಲಾಗಳು ದೇಶಕ್ಕೆ ಲಿಖಿತ ರೂಪದಲ್ಲಿ ಗ್ಯಾರಂಟಿ ನೀಡಬೇಕು. ಅವರು ಸಂವಿಧಾನವನ್ನು ಬದಲಿಸಿ ಧರ್ಮದ ಆಧಾರದಲ್ಲಿ ಮುಸಲ್ಮಾನರಿಗೆ ರಕ್ಷಣೆ ನೀಡುವುದಿಲ್ಲ. ದೇಶವನ್ನು ಹಂಚಿಕೆ ಮಾಡುವ ಕೆಲಸವನ್ನು ಮಾಡುವುದಿಲ್ಲ ಎಂದು ಬರೆದುಕೊಡಬೇಕು.
ಎರಡನೆಯದಾಗಿ ಎಸ್ಸಿ, ಎಸ್ಟಿ, ಒಬಿಸಿಗೆ ಸಿಗುವ ಮೀಸಲಾತಿಯಲ್ಲಿ ಬದಲಾವಣೆ ಮಾಡಿ ಅವರ ಅಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಡಬೇಕು. ಮೂರನೆಯದಾಗಿ ಯಾವ ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಅವರ ಮೈತ್ರಿ ಸರ್ಕಾರವಿದೆ ಅಲ್ಲಿ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ, ಯಾವುದೇ ತಾರತಮ್ಯ ಮಾಡದೆ ಹಿಂಬಾಗಲಿನಿಂದ ಒಬಿಸಿ ಕೋಟಾವನ್ನು ಮುಸ್ಲಿಮರಿಗೆ ಕೊಡುವ ಕೆಲಸ ಮಾಡುವುದಿಲ್ಲ ಎಂದು ಬರೆದುಕೊಡಬೇಕೆಂದರು.
ಮೋದಿ ಬದುಕಿರುವವರೆಗೂ ಸಂವಿಧಾನದ ಹೆಸರಿನಲ್ಲಿ ಮೀಸಲಾತಿಯ ಆಟವಾಡಲು ನಾನು ಬಿಡುವುದಿಲ್ಲ. ಮೋದಿ ಬರುವ ಮೊದಲು ಎರಡು ಸಂವಿಧಾನಗಳಿದ್ದವು, ಎರಡು ಧ್ವಜಗಳಿದ್ದವು, ಈ ಸಂವಿಧಾನವನ್ನು ಹೊತ್ತು ಕುಣಿದ ಪ್ರಭುಗಳ ಕುಟುಂಬ ದೇಶದಲ್ಲಿ ಸಂವಿಧಾನ ಜಾರಿಯಾಗಲು ಬಿಡಲಿಲ್ಲ, ಕಾಕತಾಳೀಯವೆಂಬಂತೆ ಇಂದು ಭಾರತದಲ್ಲಿ ಕಾಂಗ್ರೆಸ್ ದುರ್ಬಲವಾಗುತ್ತಿದೆ. ತಮಾಷೆ ಎಂದರೆ ಇಲ್ಲಿ ಕಾಂಗ್ರೆಸ್ ಸಾಯುತ್ತಿದೆ ಮತ್ತು ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಈಗ ಪಾಕಿಸ್ತಾನದ ನಾಯಕರು ಕಾಂಗ್ರೆಸ್‌ಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದರು.
ಮತ್ತಷ್ಟು ಓದಿ: ಇಲ್ಲಿ ಕಾಂಗ್ರೆಸ್ ಸಾಯುತ್ತಿದೆ, ಅಲ್ಲಿ ಪಾಕಿಸ್ತಾನ ಅಳುತ್ತಿದೆ: ಪ್ರಧಾನಿ ಮೋದಿ
ಕಾಂಗ್ರೆಸ್ ಸರ್ಕಾರ ನಮ್ಮ ದೇಶದಲ್ಲಿದ್ದ ವರ್ಷಗಳಲ್ಲಿ ದೊಡ್ಡ ರೌಡಿಯಂತೆ ವರ್ತಿಸಿತ್ತು, ಆದರೆ ಈಗ ಭಯೋತ್ಪಾದನೆಯ ಟೈರ್ ಪಂಕ್ಚರ್ ಆಗಿದೆ. ಒಂದು ಕಾಲದಲ್ಲಿ ಭಯೋತ್ಪಾದಕರನ್ನು ರಫ್ತು ಮಾಡುತ್ತಿದ್ದ ದೇಶ ಈಗ ಹಿಟ್ಟು ಆಮದು ಮಾಡಿಕೊಳ್ಳುತ್ತಿದೆ, ಕೈಯಲ್ಲಿ ಬಾಂಬ್ ಹಿಡಿದಿದ್ದವರು ಇಂದು ಭಿಕ್ಷಾ ಪಾತ್ರೆ ಹಿಡಿದಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Thu, 2 May 24