ಹೈದರಾಬಾದ್: ಅಯ್ಯಮ್ಮೋ! ಹಗಲು ದರೋಡೆ ಅಂದರೆ ಇದೇನಾ? ಇವರೆಂತಹಾ ಕಳ್ಳರಪ್ಪಾ!

| Updated By: ಸಾಧು ಶ್ರೀನಾಥ್​

Updated on: Aug 31, 2022 | 12:43 PM

ಕಳ್ಳರು ರೊಚ್ಚಿಗೆದ್ದಿದ್ದಾರೆ. ಹಾಡಹಗಲು ವೇಳೆಯಲ್ಲಿಯೇ ಮನೆಗಳಿಗೆ ಕನ್ನ ಹಾಕಲಾಗುತ್ತಿದೆ. ತಂತ್ರಜ್ಞಾನ ಬಹುಪಯೋಗಿಯಾಗಿ ಪೊಲೀಸರ ಕೈಹಿಡಿಯುತ್ತಿದ್ದರೂ, ಅದರಿಂದ ತಪ್ಪಿಸಿಕೊಳ್ಳಲು ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ ಐನಾತಿ ಕಳ್ಳರು.

ಹೈದರಾಬಾದ್: ಅಯ್ಯಮ್ಮೋ! ಹಗಲು ದರೋಡೆ ಅಂದರೆ ಇದೇನಾ? ಇವರೆಂತಹಾ ಕಳ್ಳರಪ್ಪಾ!
ಹೈದರಾಬಾದ್: ಅಯ್ಯಮ್ಮೋ! ಹಗಲು ದರೋಡೆ ಅಂದರೆ ಇದೇನಾ? ಇವರೆಂತಹಾ ಕಳ್ಳರಪ್ಪಾ!
Follow us on

Telangana: ತೆಲಂಗಾಣ: ದಿನದಿಂದ ದಿನಕ್ಕೆ ಕಳ್ಳರು ಸ್ಮಾರ್ಟ್​ ಆಗುತ್ತಿದ್ದಾರೆ, ಮತ್ತಷ್ಟು ಚುರುಕಾಗುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ.. ಅವರವರದ್ದೇ ಆದ ದಾರಿಗಳನ್ನು ಕಂಡುಕೊಂಡು, ತಾವು ಐನಾತಿ ಕಳ್ಳರೇ ಸರಿ ಎಂಬವುದನ್ನು ಸಾಬೀತುಪಡಿಸುತ್ತಿದ್ದಾರೆ. ತಂತ್ರಜ್ಞಾನದ ಸಮ್ಮುಖದಲ್ಲಿ ರಾತ್ರಿಗಳು ಮೊದಲಿನಂತಿಲ್ಲ… ಹಾಗಂತ ಹಗಲು ಎಚ್ಚೆತ್ತುಕೊಳ್ಳುವುದಕ್ಕೆ ಅವಕಾಶವಿದೆಯಾ ಎಂದು ನೋಡಿದರೆ ಡೇ ಟೈಮ್​ ಕೂಡ ಚೋರ ವಿದ್ಯೆ ಢಾಳಾಗಿ ಕಂಡುಬರುತ್ತಿದೆ. ಹೈದರಾಬಾದ್‌ನ ಉಪನಗರದಲ್ಲಿ ಇತ್ತೀಚೆಗೆ ಆಘಾತಕಾರಿ ಕಳ್ಳತನವೊಂದು ಬೆಳಕಿಗೆ ಬಂದಿದೆ. ಕಳ್ಳತನ ಮಾಡಿದ ರೀತಿ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ವಿವರಕ್ಕೆ ಹೋಗುವುದಾರೆ… ಮೊಯಿನಾಬಾದಿನ ಕಂಜರ್ಲಾ ಸುವರ್ಣ ಎಂಬ ಮಹಿಳೆ… ನಿನ್ನೆ ಮಂಗಳವಾರ ಸಂಜೆ 4 ಗಂಟೆಗೆ (ಆಗಸ್ಟ್ 30)… ತರಕಾರಿ ತರಲು ಹೊರಹೋಗಿದ್ದರು.

ಮಾರುಕಟ್ಟೆಗೆ ಹೋಗುವ ಮುನ್ನ ಸುವರ್ಣ ಮನೆಯ ಮುಖ್ಯ ಗೇಟಿಗೆ ಬೀಗ ಹಾಕಿದ್ದಾರೆ. ಹಾಗಿರುವಾಗ ಕಳ್ಳರು ಒಳನುಗ್ಗುವ ಸಾಧ್ಯತೆ ಹೇಗೆ? ಆದರೆ ಐನಾತಿ ಕಳ್ಳರು.. ಮನೆಯ ಇಟ್ಟಿಗೆ ಗೋಡೆಗೆ ಕನ್ನ ಹಾಕಿ, ರಾಜಾರೋಷವಾಗಿ ಒಳ ಪ್ರವೇಶಿಸಿದ್ದಾರೆ. ಬೀರುವಿನಲ್ಲಿದ್ದ ಅಷ್ಟೈಶ್ವರ್ಯವನ್ನೂ ಧ್ವಂಸ ಮಾಡಿದ್ದಾರೆ. ಒಳಗಿದ್ದ ಲಾಕರ್ ನಲ್ಲಿದ್ದ 6 ಲಕ್ಷ ರೂ. ದೋಚಿದ್ದಾರೆ. ಮನೆಗೆ ವಾಪಸು ಬಂದ ಸುವರ್ಣಗೆ ಗೋಡೆಯ ಬಿದ್ದಿರುವುದು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳ್ಳತನವಾಗಿರುವುದು ಖಚಿತಪಡಿಸಿಕೊಂಡ ಪೊಲೀಸರು ಬೆರಳಚ್ಚು ತಜ್ಞರ ತಂಡವನ್ನು ಕರೆಯಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕಳ್ಳರು ಸಿಗ್ತಾರಾ ಕಾದುನೋಡಬೇಕಿದೆ.

To read more in Telugu Click here