Shocking News: ಚಾಕೋಲೆಟ್ ಕೊಡಿಸುವುದಾಗಿ ಎತ್ತಿಕೊಂಡು ಹೋಗಿ ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; 22 ವರ್ಷದ ಯುವಕನ ಬಂಧನ
ರವಿ ರೈ ಮಗುವಿನ ತಮ್ಮ ಮನೆಗೆ ಬಂದು ಮಗುವಿಗೆ ಚಾಕೋಲೇಟ್ ಕೊಡಿಸುತ್ತೇನೆ ಎಂದು ಆಕೆಯನ್ನು ಎತ್ತಿಕೊಂಡು ಹೋಗಿದ್ದ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ಖುಷಿನಗರ (Kushinagar) ಜಿಲ್ಲೆಯಲ್ಲಿ 22 ವರ್ಷದ ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆಯ ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ (Rape) ಎಸಗಿರುವ ಅಮಾನವೀಯ ಘಟನೆ ನಡೆದಿದೆ. ಈ ಆರೋಪದ ಮೇಲೆ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಖುಷಿನಗರ ಜಿಲ್ಲೆಯ ವಿಷ್ಣುಪುರ ಪ್ರದೇಶದ ನಿವಾಸಿ ರವಿ ರೈ ಎಂಬ ಯುವಕ ಪಕ್ಕದ ಮನೆಯ ಮಗುವಿನೊಂದಿಗೆ ಆಗಾಗ ಆಟವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರವಿ ರೈ ಮಗುವಿನ ತಮ್ಮ ಮನೆಗೆ ಬಂದು ಮಗುವಿಗೆ ಚಾಕೋಲೇಟ್ ಕೊಡಿಸುತ್ತೇನೆ ಎಂದು ಆಕೆಯನ್ನು ಎತ್ತಿಕೊಂಡು ಹೋಗಿದ್ದ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ. ಆದರೆ, 2 ಗಂಟೆ ಕಳೆದರೂ ಮಗುವನ್ನು ಕರೆದುಕೊಂಡು ವಾಪಸ್ ಬಾರದೆ ಇದ್ದಾಗ ಮಗುವಿನ ಕುಟುಂಬಸ್ಥರು ಆತನ ಮನೆಗೆ ತೆರಳಿ ಮಗಳ ಬಗ್ಗೆ ವಿಚಾರಿಸಿದ್ದಾರೆ. ಅಲ್ಲಿ ಮಗು ಕಾಣಿಸದಿದ್ದಾಗ ಗಾಬರಿಯಾಗಿದ್ದಾರೆ.
ಇದನ್ನೂ ಓದಿ: Big News: ಅತ್ಯಾಚಾರದಿಂದ 7 ತಿಂಗಳ ಗರ್ಭಿಣಿಯಾದ ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಲು ಕೇರಳ ಹೈಕೋರ್ಟ್ ಅನುಮತಿ
ನಂತರ ಮಗುವಿನ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರ ವಿಚಾರಣೆಯ ವೇಳೆ ಆರೋಪಿ ಯುವಕ ತನ್ನ ಜಮೀನಿನಲ್ಲಿದ್ದ ಆ ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಾಲಕಿಯ ಕುಟುಂಬದ ಸದಸ್ಯರ ಲಿಖಿತ ದೂರಿನ ಮೇರೆಗೆ ಪೊಲೀಸರು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪುರುಷನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.