US Chinook Helicopters: ಯುದ್ಧ ಭೂಮಿಯ ದೈತ್ಯ ಚಿನೂಕ್ ಹೆಲಿಕಾಪ್ಟರ್‌ಗಳ ಹಾರಾಟ ಸ್ಥಗಿತಗೊಳಿಸಿದ ಅಮೆರಿಕಾ, ಭಾರತದ ವಾಯು ಸೇನೆಗೆ ಆತಂಕ ಶುರು?
ಸರಣಿ ದುರಂತ ಹಿನ್ನೆಲೆ ಅಮೆರಿಕ ಸೇನೆಯಲ್ಲಿ 1960ರಿಂದಲೂ ಕಾರ್ಯ ನಿರ್ವಹಿಸುತ್ತಿರುವ ಚಿನೂಕ್ ಹೆಲಿಕಾಪ್ಟರ್ ಗಳ ಹಾರಾಟವನ್ನು ನಿಲ್ಲಿಸಲು ಅಮೆರಿಕಾ ತೀರ್ಮಾನಿಸಿದೆ. ಚಿನೂಕ್ ಹೆಲಿಕಾಪ್ಟರ್ ಯುದ್ಧ ಭೂಮಿಯ ದೈತ್ಯ ಎಂದು ಹೆಸರು ಪಡೆದಿವೆ.
ವಾಷಿಂಗ್‌ಟನ್: ಸಾಲು ಸಾಲು ಇಂಜಿನ್ ಬೆಂಕಿಯ ದುರಂತಗಳು ಸಂಭವಿಸಿದ ಹಿನ್ನೆಲೆ 1960ರ ದಶಕದಿಂದಲೂ ಯುದ್ಧಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿನೂಕ್ ಹೆಲಿಕಾಪ್ಟರ್‌ಗಳ(Chinook Chopper) ಹಾರಾಟವನ್ನು ಸಂಪೂರ್ಣವಾಗಿ ಅಮೆರಿಕ ಸೇನೆ(US Army) ಸ್ಥಗಿತಗೊಳಿಸಿದೆ. ಇನ್ನು ಮುಂದೆ ಚಿನೂಕ್ ಬಳಸದೇ ಇರಲು ನಿರ್ಧರಿಸಿದೆ ಎಂದು ಮಾಧ್ಯಮ ವರದಿಯೊಂದು ಮಂಗಳವಾರ ತಿಳಿಸಿದೆ. ಈ ಬಗ್ಗೆ ಸುದ್ದಿ ವರದಿ ಮಾಡಿದ ವಾಲ್ ಸ್ಟ್ರೀಟ್ ಜರ್ನಲ್, ಇಂತಹ ತೀವ್ರವಾದ ಹೆಜ್ಜೆಯನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಆದ್ರೆ ಇದರಿಂದ ಈಗ ಭಾರತದ ವಾಯುಸೇನೆಗೆ(Indian Air Force) ಗೊಂದಲ ಸೃಷ್ಟಿಯಾಗಿದೆ.
ಅಮೆರಿಕ ಸೇನೆಯಲ್ಲಿ 1960ರಿಂದಲೂ ಕಾರ್ಯ ನಿರ್ವಹಿಸುತ್ತಿರುವ ಚಿನೂಕ್ ಹೆಲಿಕಾಪ್ಟರ್ ಗಳು ಯುದ್ಧ ಭೂಮಿಯ ದೈತ್ಯ ಎಂದು ಹೆಸರು ಪಡೆದಿವೆ. ಆದ್ರೆ ಇತ್ತೀಚೆಗೆ ಈ ಚಿನೂಕ್ ಹೆಲಿಕಾಪ್ಟರ್ ಗಳಲ್ಲಿ ಸರಣಿ ಅಗ್ನಿ ದುರಂತ ಸಂಭವಿಸ್ತಿದೆ. ಹೀಗಾಗಿ ಅಮೆರಿಕ ಸೇನೆ ಈ ಚಿನೂಕ್ ಹೆಲಿಕಾಪ್ಟರ್ ಗಳನ್ನ ಬಳಸದಂತೆ ಆದೇಶಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಆದ್ರೆ ಭಾರತವು ಸುಮಾರು 15, CH-47 ಚಿನೂಕ್ ಹೆಲಿಕಾಪ್ಟರ್‌ಗಳನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಿಂದ, ಲಡಾಖ್ ಮತ್ತು ಸಿಯಾಚಿನ್ ನಂತಹ ಸ್ಥಳಗಳಲ್ಲಿ ನಿಯೋಜಿಸಲಾದ ಭಾರತೀಯ ಪಡೆಗಳಿಗೆ ಸಹಾಯ ಮಾಡಲು, ಸೇನಾ ಸಲಕರಣೆಗಳನ್ನ, ಯೋಧರನ್ನ, ಅತ್ಯಂತ ಭಾರವಾದ ವಸ್ತುಗಳನ್ನ ಏರ್‌ಲಿಫ್ಟ್ ಮಾಡುವ ಕಾರ್ಯಾಚರಣೆಗಳಿಗಾಗಿ ಈ ಹೆಲಿಕಾಪ್ಟರ್‌ಗಳು ಮಿಲಿಟರಿ ಸಾಧನಗಳಾಗಿ ಹೆಚ್ಚು ಸಹಾಯಕವಾಗಿವೆ.
ಭಾರತವು ಫೆಬ್ರವರಿ 2019 ರಲ್ಲಿ ಚಿನೂಕ್ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಅನ್ನು ಭಾರತೀಯ ವಾಯು ಸೇನೆ ಪಡೆದಿತ್ತು. 2020 ರಲ್ಲಿ ಭಾರತೀಯ ವಾಯುಪಡೆಗೆ 15 ಚಿನೂಕ್ ಹೆಲಿಕಾಪ್ಟರ್‌ಗಳ ವಿತರಣೆಯನ್ನು ಮಾಡಲಾಗಿತ್ತು. ಆದ್ರೆ ಈಗ ಚಿನೂಕ್ ಹೆಲಿಕಾಪ್ಟರ್ ಗಳ ಕಾರ್ಯಾಚರಣೆಯನ್ನ ಅಮೆರಿಕಾ ಸೇನೆ ಸ್ಥಗಿತಗೊಳಿಸಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಸೇನೆ ಅಧಿಕಾರಿಯೊಬ್ಬರು, ಸದ್ಯ ಸಂಭವಿಸಿರುವ ಅಗ್ನಿ ಅನಾಹುತಗಳು ಸಣ್ಣ ಪ್ರಮಾಣದ್ದಾಗಿವೆ. ಹೆಲಿಕಾಪ್ಟರ್‌ಗಳಲ್ಲಿ ಕಡಿಮೆ ಸಂಖ್ಯೆಯ ಎಂಜಿನ್ ಬೆಂಕಿಯ ಬಗ್ಗೆ US ಸೈನ್ಯಕ್ಕೆ ತಿಳಿದಿತ್ತು ಮತ್ತು ಘಟನೆಗಳು ಯಾವುದೇ ಗಾಯಗಳು ಅಥವಾ ಸಾವುಗಳಿಗೆ ಕಾರಣವಾಗಲಿಲ್ಲ. ಮುಂಜಾಗ್ರತಾ ಕ್ರಮವಾಗಿ ನಾವು ಚಿನೂಕ್ ಹೆಲಿಕಾಪ್ಟರ್ ಗಳ ಸೇವೆಯನ್ನ ಬಂದ್ ಮಾಡಿದ್ದೇವೆ. ಸದ್ಯ 70 ಹೆಲಿಕಾಪ್ಟರ್ ಗಳಲ್ಲಿ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಚಿನೂಕ್ ಹೆಲಿಕಾಪ್ಟರ್ ಗಳ ಸೇವೆ ಸ್ಥಗಿತವಾಗಿರೋದು ಅಮೆರಿಕ ಸೇನೆಗೆ ಮತ್ತೊಂದು ಸವಾಲಾಗಬಹುದು. ಯಾಕಂದ್ರೆ ಅಮೆರಿಕ ಸೇನೆಯಲ್ಲಿ 400ಕ್ಕೂ ಹೆಚ್ಚು ಚಿನೂಕ್ ಹೆಲಿಕಾಪ್ಟರ್ ಗಳು ಇವೆ. ಸೇನೆ ಹೆಚ್ಚಾಗಿ ಇದೇ ಹೆಲಿಕಾಪ್ಟರ್ ಗಳ ಮೇಲೆ ಅವಲಂಬನೆ ಆಗಿದ್ವು. ಹೀಗಾಗಿ ಇದು ಈಗ ಭಾರತಕ್ಕೂ ಸಮಸ್ಯೆ ಆಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.
Published On - 8:58 am, Wed, 31 August 22