ಸಮಾಜವಾದಿ ಪಕ್ಷದ ನಿಕಟವರ್ತಿ ಉತ್ತರಪ್ರದೇಶದ ರಿಯಲ್ ಎಸ್ಟೇಟ್ ಪ್ರವರ್ತಕರ ಆಸ್ತಿ ಮೇಲೆ ಐಟಿ ದಾಳಿ
ಆಗ್ರಾದಲ್ಲಿ ಶೂಗಳ ವ್ಯಾಪಾರದಲ್ಲಿ ವ್ಯವಹರಿಸುವ ಕಂಪನಿಗಳ ಆವರಣದಲ್ಲೂ ಶೋಧ ನಡೆಸಲಾಗುತ್ತಿದೆ ಎಂದು ಆದಾಯ ತೆರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೌಧರಿ ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ನಿಕಟವರ್ತಿ ಎಂದು ಹೇಳಲಾಗಿದೆ.
ಲಖನೌ: ಆದಾಯ ತೆರಿಗೆ (IT) ಇಲಾಖೆಯು ರಿಯಲ್ ಎಸ್ಟೇಟ್ ಕಂಪನಿ ಎಸಿಇ ಗ್ರೂಪ್ (ACE Group) ಮತ್ತು ಅದರ ಪ್ರವರ್ತಕ ಅಜಯ್ ಚೌಧರಿ(Ajay Chaudhary) ಅವರಿಗೆ ಸೇರಿದ ದೆಹಲಿ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಇತರ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆಗ್ರಾದಲ್ಲಿ ಶೂಗಳ ವ್ಯಾಪಾರದಲ್ಲಿ ವ್ಯವಹರಿಸುವ ಕಂಪನಿಗಳ ಆವರಣದಲ್ಲೂ ಶೋಧ ನಡೆಸಲಾಗುತ್ತಿದೆ ಎಂದು ಆದಾಯ ತೆರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೌಧರಿ ಸಮಾಜವಾದಿ ಪಕ್ಷಕ್ಕೆ (Samajwadi Party) ನಿಕಟವರ್ತಿ ಎಂದು ಹೇಳಲಾಗಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ, ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ಅಧಿಕಾರಿಗಳು ಹಲವಾರು ಉದ್ಯಮಿಗಳ ಮನೆ ,ಕಚೇರಿ ಮೇಲೆ ನಡೆಸಿದ ಶೋಧಗಳು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಎಸ್‌ಪಿ ನಡುವೆ ರಾಜಕೀಯ ದೋಷಾರೋಪಣೆಗೆ ಕಾರಣವಾಗಿವೆ.ಅಜಯ್ ಚೌಧರಿ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ನಂಬಲಾಗಿದೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ.
Income Tax Department is conducting searches at the properties of real estate company ACE Group & its promoter Ajay Chaudhary in Delhi, Noida, Greater Noida, & Agra. Chaudhary is said to be close to a political leader of Uttar Pradesh: Sources
— ANI (@ANI) January 4, 2022
ಐಟಿ ಅಧಿಕಾರಿಗಳು ಎಸಿಇ ಗ್ರೂಪ್‌ನ ಕಾರ್ಪೊರೇಟ್ ಕಚೇರಿ, ಕೆಲವು ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿರುವ ಕಂಪನಿಯ ಕಚೇರಿಯ ಮೇಲೂ ದಾಳಿ ನಡೆಯುತ್ತಿದೆ. ಐಟಿ ಅಧಿಕಾರಿಗಳ ಪ್ರಕಾರ, ಕಂಪನಿ ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ತನಿಖೆಯ ಭಾಗವಾಗಿ ದಾಳಿ ನಡೆಸಲಾಗುತ್ತಿದೆ. ನೋಯ್ಡಾ, ಗ್ರೇಟರ್ ನೋಯ್ಡಾದಲ್ಲಿರುವ ಗುಂಪಿನ ಕಚೇರಿಗಳು ಮತ್ತು ಇತರ ಸ್ಥಳಗಳು ಮತ್ತು ಆಗ್ರಾದಲ್ಲಿನ ಕೆಲವು ಸಂಬಂಧಿತ ವ್ಯಕ್ತಿಗಳನ್ನು ಹುಡುಕಾಟದ ಭಾಗವಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ. ಐಟಿ ತಂಡವು ಬಿಲ್ಡರ್‌ನ ಹಾರ್ಡ್ ಡಿಸ್ಕ್ ಮತ್ತು ಡಿಜಿಟಲ್ ಉಪಕರಣಗಳನ್ನು ಪರಿಶೀಲಿಸುತ್ತಿದೆ. ಅವರು ಕಂಪನಿಯ ಬ್ಯಾಲೆನ್ಸ್ ಶೀಟ್ ಅನ್ನು ಸಹ ಪರಿಶೀಲಿಸುತ್ತಿದ್ದಾರೆ.
ಇವರು ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದ ಇತರ ಕೆಲವು ಸ್ಥಳಗಳಲ್ಲಿ ವಾಣಿಜ್ಯ ಮತ್ತು ವಸತಿ ಯೋಜನೆಗಳನ್ನು ಹೊಂದಿದೆ. ಏತನ್ಮಧ್ಯೆ, ಆಗ್ರಾದ ನುವಾ ಗ್ರೂಪ್‌ನ ಪ್ರವರ್ತಕ ಹರ್‌ಸಿಮ್ರಾನ್ ಸಿಂಗ್ ಅಲಾಗ್‌ಗೆ ಸಂಬಂಧಿಸಿದ ಆಸ್ತಿಗಳ ಮೇಲೂ ಐಟಿ ದಾಳಿಗಳು ನಡೆಯುತ್ತಿವೆ.
ಕಳೆದ ತಿಂಗಳು ಜಿಎಸ್‌ಟಿ ಅಧಿಕಾರಿಗಳು ಕಾನ್ಪುರ ಮತ್ತು ಕನೌಜ್‌ನಲ್ಲಿರುವ ಸುಗಂಧ ದ್ರವ್ಯ ವ್ಯಾಪಾರಿ ಪೀಯೂಶ್ ಜೈನ್ ಅವರ ಆವರಣದಲ್ಲಿ ಶೋಧ ನಡೆಸಿದ್ದರು. ಕನೌಜ್ನ ಓಡೋಕೆಮ್ ಇಂಡಸ್ಟ್ರೀಸ್ – ಸುಗಂಧ ದ್ರವ್ಯಗಳ ಸಂಯುಕ್ತಗಳ ತಯಾರಕರು ಮತ್ತು ಅದರ ಮಾಲೀಕ ಪೀಯೂಶ್ ಜೈನ್ ನಿವಾಸದಲ್ಲಿ ನಡೆಸಿದ ಶೋಧದಲ್ಲಿ ಒಟ್ಟು 197.49 ಕೋಟಿ ರೂಪಾಯಿ ನಗದು, 23 ಕೆಜಿ ಚಿನ್ನ ಮತ್ತು ಹೆಚ್ಚಿನ ಮೌಲ್ಯದ ಕೆಲವು ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಆದಾಯ ತೆರಿಗೆ ಇಲಾಖೆಯು ಸಮಾಜವಾದಿ ಪಕ್ಷದ ಆಪ್ತ ಪುಷ್ಪರಾಜ್ ಜೈನ್ ಅಲಿಯಾಸ್ ‘ಪಂಪಿ’ ಮತ್ತು ಇನ್ನೊಬ್ಬ ಸುಗಂಧ ದ್ರವ್ಯ ಉದ್ಯಮಿ ಫೌಜಾನ್ ಮಲಿಕ್ ಜೊತೆ ಅವರ ಆವರಣವನ್ನು ಸಹ ಶೋಧಿಸಿತ್ತು.
ಇದನ್ನೂ ಓದಿ: Akhilesh Yadav: ಪುಷ್ಪರಾಜ್ ಜೈನ್ ಮೇಲಿನ ಐಟಿ ದಾಳಿ ಹಿಂದೆ ಬಿಜೆಪಿ ಕೈವಾಡ; ಅಖಿಲೇಶ್ ಯಾದವ್ ಆರೋಪ
Published On - 4:22 pm, Tue, 4 January 22