ನಾಳೆ ಭಾರತೀಯರ ದೇಶಭಕ್ತಿಯನ್ನು ಬಡಿದೆಬ್ಬಿಸಿದ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ

ದೆಹಲಿಯಲ್ಲಿ ಶುಕ್ರವಾರ ನಡೆಯುವ ಕಾರ್ಯಕ್ರಮವು ವರ್ಷಪೂರ್ತಿ ನಡೆಯುವ ರಾಷ್ಟ್ರೀಯ ಗೀತೆಯ ಸ್ಮರಣಾರ್ಥದ ಉದ್ಘಾಟನೆಯನ್ನು ಸೂಚಿಸುತ್ತದೆ. ಕಳೆದ ತಿಂಗಳು ಪ್ರಧಾನಿ ಮೋದಿ ಅವರು 1896ರ ನವೆಂಬರ್ 7ರಂದು ಬಂಕಿಮ್ ಚಂದ್ರ ಚಟರ್ಜಿ ರಚಿಸಿದ 'ವಂದೇ ಮಾತರಂ' ನ 150ನೇ ವರ್ಷವನ್ನು ಆಚರಿಸಲು ತಮ್ಮ ಸಲಹೆಗಳನ್ನು ಹಂಚಿಕೊಳ್ಳಲು ನಾಗರಿಕರಿಗೆ ಕರೆ ನೀಡಿದ್ದರು. "ವಂದೇ ಮಾತರಂ"ನ 150ನೇ ವಾರ್ಷಿಕೋತ್ಸವದ ಮುನ್ನಾದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ನಮ್ಮ ರಾಷ್ಟ್ರದಾದ್ಯಂತ ದೇಶಭಕ್ತಿಯ ಚೈತನ್ಯವನ್ನು ಹೊತ್ತಿಸಿದ ಹಾಡನ್ನು ಶ್ಲಾಘಿಸಿದ್ದಾರೆ.

ನಾಳೆ ಭಾರತೀಯರ ದೇಶಭಕ್ತಿಯನ್ನು ಬಡಿದೆಬ್ಬಿಸಿದ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ
Vande Mataram

Updated on: Nov 06, 2025 | 10:43 PM

ನವದೆಹಲಿ, ನವೆಂಬರ್ 6: ಭಾರತ ದೇಶವು ತನ್ನ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ನ (Vande Mataram) 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಹಲವು ಪೀಳಿಗೆಯ ಭಾರತೀಯರು ಒಂದಾಗಲು, ಎದ್ದುನಿಲ್ಲಲು ಮತ್ತು ರಾಷ್ಟ್ರದ ಚೈತನ್ಯವನ್ನು ಆಚರಿಸಲು ಪ್ರೇರೇಪಿಸಿದ ಹಾಡು ಇದಾಗಿದೆ. ಖ್ಯಾತ ಬಂಗಾಳಿ ಕವಿ ಮತ್ತು ಕಾದಂಬರಿಕಾರ ಬಂಕಿಮ್ ಚಂದ್ರ ಚಟರ್ಜಿ ಬರೆದ “ವಂದೇ ಮಾತರಂ” ಭಾರತದ ಜಾಗೃತಿಯ ಸಂಕೇತವಾಗಿ ನಿಂತಿದೆ.

ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯು ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದ್ದಂತೆ “ವಂದೇ ಮಾತರಂ” ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಧ್ವನಿಯನ್ನು ಕಂಡುಕೊಂಡಿತು. ಇದಾದ ನಂತರ “ವಂದೇ ಮಾತರಂ” ಸ್ವಾತಂತ್ರ್ಯ ಹೋರಾಟಗಾರರ ರ್ಯಾಲಿಯ ಘೋಷಣೆ, ಮಾತೃಭೂಮಿಯ ಮೇಲಿನ ಪ್ರೀತಿ ಮತ್ತು ಭಕ್ತಿಯ ಸಂಕೇತವಾಯಿತು. ನಂತರ ವಿದೇಶಿ ಶಕ್ತಿಯ ವಿರುದ್ಧದ ಪ್ರತಿರೋಧದ ಘೋಷಣೆಯಾಯಿತು. “ವಂದೇ ಮಾತರಂ” ಅನ್ನು ಸಭೆಗಳು, ಮೆರವಣಿಗೆಗಳು ಮತ್ತು ದೊಡ್ಡ ಸಾರ್ವಜನಿಕ ಸಭೆಗಳಲ್ಲಿ ಹಾಡಾಗಿ ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಭಕ್ತರ ಘೋಷಣೆಯಾಗಿಯೂ ಬಳಸಲಾಗುತ್ತಿತ್ತು.


ಇದನ್ನೂ ಓದಿ: ವಂದೇ ಮಾತರಂ ಹಾಡಿ ಪ್ರಧಾನಿ ಮೋದಿ ಮನ ಗೆದ್ದ ಮಿಜೋರಾಂ ಬಾಲಕಿ

ನಾಳೆ (ನವೆಂಬರ್ 7) ಪ್ರತಿಯೊಬ್ಬ ಭಾರತೀಯನಿಗೂ ಒಂದು ಸ್ಮರಣೀಯ ದಿನ. ನಾವು ವಂದೇ ಮಾತರಂನ 150 ವೈಭವದ ವರ್ಷಗಳನ್ನು ಆಚರಿಸಲಿದ್ದೇವೆ. ಇದು ಹಲವು ಪೀಳಿಗೆಗೆ ಸ್ಫೂರ್ತಿ ನೀಡಿದ ಮತ್ತು ನಮ್ಮ ದೇಶದಾದ್ಯಂತ ದೇಶಭಕ್ತಿಯ ಅವಿನಾಶಿ ಚೈತನ್ಯವನ್ನು ಹೊತ್ತಿಸಿದ ಒಂದು ಪ್ರೇರಕ ಗೀತೆಯಾಗಿದೆ. ಈ ಸಂದರ್ಭದ ಪ್ರಯುಕ್ತ ನಾನು ನಾಳೆ ಬೆಳಿಗ್ಗೆ 9.30ಕ್ಕೆ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಇದರ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಸಹ ಬಿಡುಗಡೆ ಮಾಡಲಾಗುವುದು. ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ವಂದೇ ಮಾತರಂನ ಸಾಮೂಹಿಕ ವಾಚನ! ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ರವೀಂದ್ರನಾಥ ಟ್ಯಾಗೋರ್ ಕೈಬರಹದ ರಾಷ್ಟ್ರಗೀತೆಯ ಅನುವಾದ ಪಠ್ಯ ಹಂಚಿಕೊಂಡ ನೊಬೆಲ್ ಸಮಿತಿ

1896ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಈ ಸುಮಧುರ ಕವಿತೆಯನ್ನು ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೋಲ್ಕತ್ತಾ ಅಧಿವೇಶನದಲ್ಲಿ ಹಾಡಿದರು. 1950ರ ಜನವರಿ 24ರಂದು ಭಾರತದ ಸಂವಿಧಾನ ಸಭೆಯು ಅಧಿಕೃತವಾಗಿ ರಾಷ್ಟ್ರೀಯ ಗೀತೆಯಾಗಿ ಇದನ್ನು ಅಂಗೀಕರಿಸಿದ ನಂತರ ಅಂದಿನ ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರು “ವಂದೇ ಮಾತರಂ” ಅನ್ನು ರಾಷ್ಟ್ರಗೀತೆಯಾದ “ಜನ ಗಣ ಮನ”ದೊಂದಿಗೆ ಸಮಾನವಾಗಿ ಗೌರವಿಸಬೇಕೆಂದು ಘೋಷಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Thu, 6 November 25