ತನ್ನ ಪ್ರಜೆಗಳ ಪ್ರವೇಶಕ್ಕೆ ಗೇಟ್ ತೆರೆಯದ ಪಾಕಿಸ್ತಾನ; ಭಾರತ ಬಿಟ್ಟು ಹೋಗಲು ಗಡುವು ವಿಸ್ತರಣೆ

ಭಾರತ ಬಿಟ್ಟು ಹೋಗಲು ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಸರ್ಕಾರ ಆದೇಶಿಸಿದೆ. ಅದಕ್ಕಾಗಿ ನೀಡಲಾಗಿದ್ದ ಗಡುವು ಮುಕ್ತಾಯವಾಗಿದೆ. ಈ ನಡುವೆ ಪಾಕಿಸ್ತಾನದ ನಿವಾಸಿಗಳು ಭಾರತದಿಂದ ವಾಪಸಾಗದಂತೆ ವಾಘಾ ಗಡಿ ಬಂದ್‌ ಮಾಡಲಾಗಿದೆ. ಪಾಕಿಸ್ತಾನ ಸರ್ಕಾರ ತನ್ನ ದೇಶದ ಪ್ರಜೆಗಳಿಗೇ ಗಡಿಯನ್ನು ಮುಚ್ಚಿರುವುದರಿಂದ ಪಾಕಿಸ್ತಾನದ ಪ್ರಜೆಗಳು ಅತಂತ್ರರಾಗಿದ್ದಾರೆ. ಹೀಗಾಗಿ, ಭಾರತದಿಂದ ಪಾಕಿಸ್ತಾನಿಯರು ವಾಪಸಾಗಲು ಕೇಂದ್ರ ಸರ್ಕಾರ ಅವಧಿ ವಿಸ್ತರಿಸಿದೆ. ಪಾಕಿಸ್ತಾನಿ ನಾಗರಿಕರು ದೇಶ ಬಿಡಲು ಮುಂದಿನ ಸೂಚನೆ ಬರುವವರೆಗೆ ಭಾರತ ಗಡುವನ್ನು ವಿಸ್ತರಿಸಿದೆ.

ತನ್ನ ಪ್ರಜೆಗಳ ಪ್ರವೇಶಕ್ಕೆ ಗೇಟ್ ತೆರೆಯದ ಪಾಕಿಸ್ತಾನ; ಭಾರತ ಬಿಟ್ಟು ಹೋಗಲು ಗಡುವು ವಿಸ್ತರಣೆ
Pakistani Citizens

Updated on: May 01, 2025 | 6:48 PM

ನವದೆಹಲಿ, ಮೇ 1: ಭಾರತದಲ್ಲಿ ಸಿಲುಕಿರುವ ಪಾಕಿಸ್ತಾನಿ ಪ್ರಜೆಗಳು ಪಾಕಿಸ್ತಾನಕ್ಕೆ ತೆರಳುವ ದಿನಾಂಕವನ್ನು ಭಾರತ ಸರ್ಕಾರ ವಿಸ್ತರಿಸಿದೆ. ಅನೇಕ ಪಾಕಿಸ್ತಾನಿ ಪ್ರಜೆಗಳು ಪಾಕಿಸ್ತಾನಕ್ಕೆ ಪ್ರವೇಶಿಸಲು ವಾಘಾ-ಅಟ್ಟಾರಿ ಗಡಿಯನ್ನು ತಲುಪಿದ್ದಾರೆ. ಆದರೂ ಪಾಕ್ ಸರ್ಕಾರ ಅವರನ್ನು ಪಾಕಿಸ್ತಾನಕ್ಕೆ ಪ್ರವೇಶಿಸಲು ಅನುಮತಿಸುತ್ತಿಲ್ಲ. ಹೀಗಾಗಿ, ವಲಸೆಯಿಂದಾಗಿ ಪಾಕಿಸ್ತಾನದ ಸ್ವಂತ ನಾಗರಿಕರಿಗೆ ತೊಂದರೆಯಾಗುತ್ತಿದೆ. ಬುಧವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ಒಟ್ಟು 125 ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆದಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ. ಇಲ್ಲಿಯವರೆಗೆ 911 ಪಾಕಿಸ್ತಾನಿ ನಾಗರಿಕರು ದೇಶ ತೊರೆದಿದ್ದಾರೆ.

ವಾಘಾ ಗಡಿಯಲ್ಲಿ ಇಸ್ಲಾಮಾಬಾದ್ ತಮ್ಮ ಪ್ರವೇಶ ಪ್ರಕ್ರಿಯೆ ವಿಳಂಬ ಮಾಡಿದ ನಂತರ ಭಾರತ ಪಾಕಿಸ್ತಾನಿ ಪ್ರಜೆಗಳು ಮನೆಗೆ ಮರಳಲು ಗಡುವನ್ನು ವಿಸ್ತರಿಸಿದೆ. ಮೂಲತಃ ಏಪ್ರಿಲ್ 30ಕ್ಕೆ ಗಡುವು ನಿಗದಿಪಡಿಸಲಾಗಿತ್ತು. ಆದರೆ, ಭಾರತದಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನಿ ನಾಗರಿಕರ ವಿನಂತಿಗಳ ಮೇರೆಗೆ ಮಾನವೀಯತೆಯ ದೃಷ್ಟಿಯಿಂದ ಭಾರತ ಗಡುವನ್ನು ವಿಸ್ತರಿಸಿದೆ. ತಮ್ಮದೇ ಸರ್ಕಾರವು ಪಾಕಿಸ್ತಾನಿಗಳ ಅವರ ವಾಪಸಾತಿಗೆ ತೊಂದರೆ ಉಂಟುಮಾಡುತ್ತಿರುವುದರಿಂದ ಡಜನ್ಗಟ್ಟಲೆ ಜನರು ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ; ಪಾಕಿಸ್ತಾನದ ವಿಮಾನಗಳು, ಮಿಲಿಟರಿ ವಿಮಾನಗಳಿಗೆ ಭಾರತದ ವಾಯುಮಾರ್ಗ ಬಂದ್

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಭಾರತವು ಪಾಕಿಸ್ತಾನಿಗಳಿಗೆ ಹಿಂದಿರುಗಲು ಗಡಿಯನ್ನು ತೆರೆದಿಟ್ಟಿದ್ದರೂ, ಇತರ ಎಲ್ಲಾ ಗಡಿಯಾಚೆಗಿನ ಚಲನೆಯನ್ನು ಸ್ಥಗಿತಗೊಳಿಸಲಾಗಿದೆ. ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ಎಲ್ಲಾ ರೀತಿಯ ಒಳಬರುವ ಮತ್ತು ಹೊರಹೋಗುವ ಪ್ರಯಾಣಿಕರು ಮತ್ತು ಸರಕುಗಳ ಚಲನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲು ಮತ್ತು ಮಾನ್ಯ ಅನುಮೋದನೆಗಳೊಂದಿಗೆ ಗಡಿಯನ್ನು ದಾಟಿದವರಿಗೆ ಮೇ 1ರ ಮೊದಲು ಮಾರ್ಗದ ಮೂಲಕ ಹಿಂತಿರುಗಲು ಅನುಮತಿ ನೀಡಲು ಆದೇಶಿಸಲಾಗಿದೆ” ಎಂದು ಗೃಹ ಸಚಿವಾಲಯ (MHA) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ