ದೆಹಲಿ: ಕಳೆದ 24 ಗಂಟೆಗಳಲ್ಲಿ 3,11,170 ಹೊಸ ಪ್ರಕರಣಗಳನ್ನು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2.46 ಕೋಟಿಗೆ ತಲಪಿದ. ದೇಶಾದ್ಯಂತ 4,077 ಸಾವುಗಳು ವರದಿಯಾಗಿವೆ. ಈಗ ಸಾವಿನ ಸಂಖ್ಯೆ 2,70,284 ಆಗಿದ್ದು ಸಕ್ರಿಯ ಪ್ರಕರಣಗಳು 26.18 ಲಕ್ಷದಷ್ಟಿವೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶದ ಕೊವಿಡ್ -19 ಪರಿಸ್ಥಿತಿಯನ್ನು ನಿಭಾಯಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೆಂಟಿಲೇಟರ್‌ಗಳು ಬಳಕೆಯಾಗದೆ ಇರುವ ವರದಿಗಳ ನಂತರ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಒದಗಿಸಿದವರ ಬಗ್ಗೆ ತಕ್ಷಣ ಆಡಿಟ್ ಮಾಡಬೇಕೆಂದು ಮೋದಿ ಕರೆ ನೀಡಿದರು. ರಾಜ್ಯಗಳು ತಮ್ಮ ಪ್ರಕರಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವರದಿ ಮಾಡುವಾಗ ಪಾರದರ್ಶಕವಾಗಿರಬೇಕು ಎಂದು ಅವರು ಹೇಳಿದ್ದಾರೆ.
India reports 3,11,170 new #COVID19 cases, 3,62,437 discharges and 4,077 deaths in the last 24 hours, as per Union Health Ministry
Total cases: 2,46,84,077
Total discharges: 2,07,95,335
Death toll: 2,70,284
Active cases: 36,18,458Total vaccination: 18,22,20,164 pic.twitter.com/fbSxJtb1vD
— ANI (@ANI) May 16, 2021
ಮೇ 16 ರ ಭಾನುವಾರ ಬೆಳಿಗ್ಗೆ 6 ರಿಂದ ಮೇ 30 ರವರೆಗೆ ಸಂಜೆ 6 ರಿಂದ ಪಶ್ಚಿಮ ಬಂಗಾಳ ಸರ್ಕಾರವು ಹದಿನೈದು ದಿನಗಳವರೆಗೆ ರಾಜ್ಯದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಇಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದ್ದು ಪ್ರತಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಇರಲಿದೆ.
ತಮಿಳುನಾಡಿನಲ್ಲಿ 33,658 ಹೊಸ ಪ್ರಕರಣ, 303 ಸಾವು
ತಮಿಳುನಾಡಿನಲ್ಲಿ ಶನಿವಾರ 33,658 ಹೊಸ ಪ್ರಕರಣಗಳು ವರದಿ ಆಗಿದ್ದು 303 ಸಾವು ಸಂಭವಿಸಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 15,65,035 ಆಗಿದೆ. 20,905 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 4,32,344 ಮಂದಿ ಸಾವಿಗೀಡಾಗಿದ್ದಾರೆ.
ಮಹಾರಾಷ್ಟ್ರದಲ್ಲಿ 34,848ಹೊಸ ಸೋಂಕು ಪ್ರಕರಣ, 960 ಸಾವು
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 34,848 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 59,073 ಮಂದಿ ಚೇತರಿಸಿಕೊಂಡಿದ್ದಾರೆ.960 ಸಾವು ಸಂಭವಿಸಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,94,032 ಆಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 63 ಸಾವು
ಜಮ್ಮು ಮತ್ತು ಕಾಶ್ಮೀರದಲ್ಲಿ 3,677ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2,40,467ಕ್ಕೇರಿದೆ. ಶನಿವಾರ 63 ಮಂದಿ ಸಾವಿಗೀಡಾಗಿದ್ದು ಈವರೆಗೆ 3,090 ಮಂದಿ ಮೃತಪಟ್ಟದ್ದಾರೆ.
ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳು– ಕರ್ನಾಟಕ- 41,664 ಪ್ರಕರಣಗಳು, ಮಹಾರಾಷ್ಟ್ರ -34,848 ಪ್ರಕರಣಗಳು, ತಮಿಳುನಾಡು -33,658 ಪ್ರಕರಣಗಳು, ಕೇರಳ – 32,680 ಪ್ರಕರಣಗಳು ಮತ್ತು ಆಂಧ್ರಪ್ರದೇಶ 22,517 ಪ್ರಕರಣಗಳನ್ನು ದಾಖಲಿಸಿದೆ. ಈ ಐದು ರಾಜ್ಯಗಳಿಂದ 53.15% ಹೊಸ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಮಾತ್ರ ಶೇ 13.39 ಹೊಸ ಪ್ರಕರಣಗಳಿಗೆ ಕಾರಣವಾಗಿದೆ.
ಕೋವಿಡ್ -19 ಪೀಡಿತ ಮಕ್ಕಳ ಮಾಹಿತಿ ಪ್ರಕಟಿಸಿದ ಉತ್ತರಾಖಂಡ
ಉತ್ತರಾಖಂಡ ಆರೋಗ್ಯ ಇಲಾಖೆ ಏಪ್ರಿಲ್ 16 ಮತ್ತು ಏಪ್ರಿಲ್ 30 ರ ನಡುವೆ ಕನಿಷ್ಠ 9 ವರ್ಷ ವಯಸ್ಸಿನ 1,053 ಮಕ್ಕಳು ಕೊವಿಡ್ -19 ಪೀಡಿತರಾಗಿದ್ದಾರೆ. ಮೇ 1 ಮತ್ತು ಮೇ 14 ರ ನಡುವೆ 1,618 ಮಕ್ಕಳು ಬಾಧಿತರಾಗಿದ್ದಾರೆ ಎಂದು ಮಾಹಿತಿ ಪ್ರಕಟಿಸಿದೆ.
ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಕುಸಿತ
ಕೊವಿಡ್ ದೈನಂದಿನ ಪ್ರಕರಣಗಳು ಕಳೆದ ಏಳು ದಿನಗಳಿಂದ ಸತತವಾಗಿ ಕುಸಿದಿದೆ. ಕಳೆದ ವಾರದಲ್ಲಿ ಪಾಸಿಟಿವಿಟಿದರ ಶೇ 20ಕ್ಕಿಂತ ಕಡಿಮೆಯಾಗಿದೆ ಮತ್ತು ಈ ಅವಧಿಯಲ್ಲಿ ಸಕ್ರಿಯ ಪ್ರಕರಣಗಳು 1.5 ಲಕ್ಷಕ್ಕಿಂತ ಕಡಿಮೆಯಾಗಿದೆ.
ಇದನ್ನೂ ಓದಿ: ‘ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ’ , ಕೊವಿಡ್ ಪರಿಸ್ಥಿತಿ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಭಾವುಕ ಬರಹ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಜೀವ್ ಸಾತವ್ ಕೊರೊನಾ ಸೋಂಕಿಗೆ ಬಲಿ
(India has registered 311170 new cases in the last 24 hours taking the overall tally to 2.46 crore)