ಆನ್‌ಲೈನ್ ಡೇಟಿಂಗ್ ಪ್ಲಾಟ್‌ಫಾರ್ಮ್‌ ಬಳಕೆಯಲ್ಲಿ ಭಾರತಕ್ಕೆ 9ನೇ ಸ್ಥಾನ

TV9kannada Web Team

TV9kannada Web Team | Edited By: Rashmi Kallakatta

Updated on: Jan 25, 2023 | 12:57 PM

ಚೀನಾದಲ್ಲಿ ಇದು ಶೇ9.1ಮತ್ತು ಜಪಾನ್ ನಲ್ಲಿ ಶೇ9.5 ಮಂದಿ ಇದನ್ನು ಬಳಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ, ಅದರ ಜನಸಂಖ್ಯೆಯ ಶೇ21ಜನರು ಆನ್‌ಲೈನ್ ಡೇಟಿಂಗ್ ಸೇವೆಗಳನ್ನು ಬಳಸುತ್ತಾರೆ. ಯುಕೆಯಲ್ಲಿ ಶೇ 19.1, ಫ್ರಾನ್ಸ್ ನಲ್ಲಿ ಶೇ 12.7 ಮತ್ತು ಜರ್ಮನಿಯಲ್ಲಿ ಶೇ11.8 ಜನರು ಡೇಟಿಂಗ್

ಆನ್‌ಲೈನ್ ಡೇಟಿಂಗ್ ಪ್ಲಾಟ್‌ಫಾರ್ಮ್‌ ಬಳಕೆಯಲ್ಲಿ ಭಾರತಕ್ಕೆ 9ನೇ ಸ್ಥಾನ
ಪ್ರಾತಿನಿಧಿಕ ಚಿತ್ರ

ದೆಹಲಿ: ಜಗತ್ತು ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಒಗ್ಗಿಕೊಂಡಿರುವಾಗ ಭಾರತವೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಆನ್‌ಲೈನ್ ಡೇಟಿಂಗ್ (online dating) ಸೇವೆಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಸುವ ಜನರ ವಿಷಯದಲ್ಲಿ ಭಾರತ ವಿಶ್ವದಲ್ಲಿ ಒಂಬತ್ತನೇ ಸ್ಥಾನವನ್ನು ಹೊಂದಿದೆ. ಸ್ಟ್ಯಾಟಿಸ್ಟಾ ಡಿಜಿಟಲ್ ಮಾರ್ಕೆಟಿಂಗ್ ಇನ್ ಸೈಟ್ಸ್ (Statista Digital Marketing Insights) ಹಂಚಿಕೊಂಡ ಡೇಟಾದ ಪ್ರಕಾರ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಜನರಿಂದ ಸುಮಾರು $398 ಮಿಲಿಯನ್ ಆದಾಯವನ್ನು ಗಳಿಸುತ್ತದೆ.ಭಾರತದಲ್ಲಿ ಜನಸಂಖ್ಯೆಯ ಶೇ5.8, ಅದರಲ್ಲಿಯೂ ಯುವಕರು ಆನ್‌ಲೈನ್ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ. ಚೀನಾದಲ್ಲಿ ಇದು ಶೇ9.1ಮತ್ತು ಜಪಾನ್ ನಲ್ಲಿ ಶೇ9.5 ಮಂದಿ ಇದನ್ನು ಬಳಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ, ಅದರ ಜನಸಂಖ್ಯೆಯ ಶೇ21ಜನರು ಆನ್‌ಲೈನ್ ಡೇಟಿಂಗ್ ಸೇವೆಗಳನ್ನು ಬಳಸುತ್ತಾರೆ. ಯುಕೆಯಲ್ಲಿ ಶೇ 19.1, ಫ್ರಾನ್ಸ್ ನಲ್ಲಿ ಶೇ 12.7 ಮತ್ತು ಜರ್ಮನಿಯಲ್ಲಿ ಶೇ11.8 ಜನರು ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ.

ಈ ಡಿಜಿಟಲ್ ಯುಗದಲ್ಲಿ, ಸಂಬಂಧಿಕರು ಅಥವಾ ಸ್ನೇಹಿತರ ಮೂಲಕ ಜನರನ್ನು ಭೇಟಿ ಮಾಡುವುದಕ್ಕಿಂತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಡೇಟಿಂಗ್ ಮಾಡುವುದು ಸುಲಭವಾಗಿದೆ.ವಿಶೇಷವಾಗಿ ಭಾರತದಂತಹ ದೇಶದಲ್ಲಿ ಮದುವೆಗೆ ಮುನ್ನ ಈ ರೀತಿಯ ಭೇಟಿ ನಿಷೇಧಿಸಲಾಗಿದೆ ಎಂದು ದೆಹಲಿ ಮೂಲದ ಸಲಹೆಗಾರ್ತಿ ಅರ್ಚನಾ ಕುಮಾರಿ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ತಾಜಾ ಸುದ್ದಿ

ಇದನ್ನೂ ಓದಿ:Lakhimpur Kheri Case: ಕೇಂದ್ರ ಸಚಿವರ ಪುತ್ರನಿಗೆ ಜಾಮೀನು ನೀಡಿದ ಸುಪ್ರೀಂ

ಈ ಆನ್‌ಲೈನ್ ಸೇವೆಗಳನ್ನು ಬಳಸುವ ಪ್ರಮುಖ ಭಾರತೀಯ ನಗರಗಳೆಂದರೆ ಮುಂಬೈ, ಬೆಂಗಳೂರು, ದೆಹಲಿ, ಪುಣೆ, ಅಹಮದಾಬಾದ್, ಸೂರತ್, ಚೆನ್ನೈ ಮತ್ತು ಕೋಲ್ಕತ್ತಾ. ಭಾರತೀಯ ಬಳಕೆದಾರರಲ್ಲಿ ಶೇ 67ಪುರುಷರು. ಜನಪ್ರಿಯ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳೆಂದರೆ ಬಂಬಲ್, ಹಿಂಜ್, ಹ್ಯಾಪ್ನ್, ಐಲ್, ಟಿಂಡರ್ ಮತ್ತು ಬಡೂ.

ಆನ್‌ಲೈನ್ ಡೇಟಿಂಗ್ ಸೇವೆಗಳಿಂದ US $ 2,277 ಮಿಲಿಯನ್ ಅನ್ನು ವರ್ಷಕ್ಕೆ ಉತ್ಪಾದಿಸುತ್ತದೆ ಎಂದು ಡೇಟಾ ತೋರಿಸುತ್ತದೆ. ಚೀನಾ ಎರಡನೇ ಅತಿ ಹೆಚ್ಚು ಆದಾಯ ಹೊಂದಿದ್ದು ವರ್ಷಕ್ಕೆ $ 1,547 ಮಿಲಿಯನ್ ಗಳಿಸುತ್ತದೆ. ಆನ್‌ಲೈನ್ ಡೇಟಿಂಗ್ ಸೇವೆಗಳನ್ನು ಬಳಸುವ ಶೇ 10.2 ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಆಫ್ರಿಕಾ ಅತೀ ಕಡಿಮೆ ಅಂದರೆ $23 ಮಿಲಿಯನ್‌ನಲ್ಲಿ ಆದಾಯವನ್ನು ಗಳಿಸುತ್ತದೆ. ಆನ್‌ಲೈನ್ ಡೇಟಿಂಗ್ ಸೇವೆಗಳ ಮೂಲಕ ಉತ್ಪತ್ತಿಯಾಗುವ ಆದಾಯವು 2023 ರಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ, ಸ್ಟ್ಯಾಟಿಸ್ಟಾ ಪ್ರಕಾರ, 2024-25 ರ ವೇಳೆಗೆFog ಭಾರತದಲ್ಲಿ $783 ಮಿಲಿಯನ್ ತಲುಪುತ್ತದೆ. “2025 ರ ವೇಳೆಗೆ ಆನ್‌ಲೈನ್ ಡೇಟಿಂಗ್ ಸೇವೆಗಳನ್ನು ಬಳಸುವ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಅಗ್ರ ಐದು ದೇಶಗಳಲ್ಲಿ ಭಾರತವು ಒಂದಾಗಲಿದೆ” ಎಂದು 2021 ರಲ್ಲಿ ಡಿಜಿಟಲ್ ಅಪ್ಲಿಕೇಶನ್ ಮೂಲಕ ತನ್ನ ಸಂಗಾತಿಯನ್ನು ಕಂಡುಕೊಂಡ ಸುಧೀರ್ ಶುಕ್ಲಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada