ಇಂದೇ ಯುದ್ಧವಾದ್ರೂ 40 ದಿನ ಹೋರಾಟಕ್ಕೆ ಸೇನೆ ಸರ್ವ ಸನ್ನದ್ಧ

ದೆಹಲಿ: ಭಾರತದ ವಿರುದ್ಧ ವೈರಿ ರಾಷ್ಟ್ರಗಳು ಹಲ್ಲು ಮಸೆಯುತ್ತಿವೆ. ಎಡ ಬಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಪದೇಪದೆ ಕಿರಿಕ್ ಮಾಡುತ್ತಲೇ ಬಂದಿವೆ. ಇಂಥ ಹೊತ್ತಲ್ಲಿ ಇದ್ದಕ್ಕಿದ್ದಂತೆ ವೈರಿ ರಾಷ್ಟ್ರಗಳು ಯುದ್ಧ ಸಾರಿದರೆ ಅದನ್ನ ಎದುರಿಸಲು ಸೇನೆ ಸದಾ ಸನ್ನದ್ಧವಾಗಿರಬೇಕು. ಇದನ್ನೆಲ್ಲಾ ಅರಿತಿರುವ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಆನೆಬಲ ತುಂಬಿದೆ. ವೈರಿ ಪಡೆಯ ಎದೆನಡುಗಿಸಲು ಭಾರತೀಯ ಯೋಧರು ಸನ್ನದ್ಧವಾಗಿದ್ದಾರೆ. ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಅಮೆರಿಕ, ರಷ್ಯಾ ಹಾಗೂ ಚೀನಾ ನಂತರ ಭಾರತೀಯ ಸೇನೆಗೆ […]

ಇಂದೇ ಯುದ್ಧವಾದ್ರೂ 40 ದಿನ ಹೋರಾಟಕ್ಕೆ ಸೇನೆ ಸರ್ವ ಸನ್ನದ್ಧ
ಭಾರತೀಯ ಸೇನೆ (ಪ್ರಾತಿನಿಧಿಕ ಚಿತ್ರ)
Follow us
ಸಾಧು ಶ್ರೀನಾಥ್​
|

Updated on:Jan 28, 2020 | 1:08 PM

ದೆಹಲಿ: ಭಾರತದ ವಿರುದ್ಧ ವೈರಿ ರಾಷ್ಟ್ರಗಳು ಹಲ್ಲು ಮಸೆಯುತ್ತಿವೆ. ಎಡ ಬಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಪದೇಪದೆ ಕಿರಿಕ್ ಮಾಡುತ್ತಲೇ ಬಂದಿವೆ. ಇಂಥ ಹೊತ್ತಲ್ಲಿ ಇದ್ದಕ್ಕಿದ್ದಂತೆ ವೈರಿ ರಾಷ್ಟ್ರಗಳು ಯುದ್ಧ ಸಾರಿದರೆ ಅದನ್ನ ಎದುರಿಸಲು ಸೇನೆ ಸದಾ ಸನ್ನದ್ಧವಾಗಿರಬೇಕು. ಇದನ್ನೆಲ್ಲಾ ಅರಿತಿರುವ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಆನೆಬಲ ತುಂಬಿದೆ. ವೈರಿ ಪಡೆಯ ಎದೆನಡುಗಿಸಲು ಭಾರತೀಯ ಯೋಧರು ಸನ್ನದ್ಧವಾಗಿದ್ದಾರೆ.

ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಅಮೆರಿಕ, ರಷ್ಯಾ ಹಾಗೂ ಚೀನಾ ನಂತರ ಭಾರತೀಯ ಸೇನೆಗೆ ಟಾಪ್ 10ರಲ್ಲಿ ಸ್ಥಾನವಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತೀಯ ಸೇನೆಯನ್ನ ಮತ್ತಷ್ಟು ಶಕ್ತಗೊಳಿಸಿವೆ. ಆದ್ರೆ ಇಷ್ಟೆಲ್ಲಾ ಇದ್ದರೂ ಸೇನೆ ಮಾತ್ರ ದಿಢೀರ್ ಯುದ್ಧಕ್ಕೆ ಸನ್ನದ್ಧವಾಗಿರಲಿಲ್ಲ. ಅಗತ್ಯಕ್ಕೆ ತಕ್ಕಷ್ಟು ಶಸ್ತ್ರಾಸ್ತ್ರಗಳು ಸೇನೆ ಬತ್ತಳಿಕೆಯಲ್ಲಿ ಇರಲಿಲ್ಲ. ಅದ್ರಲ್ಲೂ 2012ರಿಂದ ನಿರಂತರವಾಗಿ ಸೇನೆ ಮದ್ದುಗುಂಡು, ಯುದ್ಧ ಟ್ಯಾಂಕರ್​ಗಳ ಭಾರಿ ಕೊರತೆ ಎದುರಿಸುತ್ತಿತ್ತು. ಆದರೆ 2016ರ ಉರಿ ದಾಳಿ ಬಳಿಕ ಭಾರತೀಯ ಸೇನೆಗೆ ಹೆಚ್ಚಿನ ಅಧಿಕಾರ ನೀಡಿ, ಯುದ್ಧ ಪರಿಸ್ಥಿತಿಗೆ ಸಿದ್ಧವಾಗಿರುವಂತೆ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.

40 ದಿನಗಳ ಯುದ್ಧಕ್ಕೆ ಸಿದ್ಧ! ಭಾರತದ ಮೇಲೆ ಚೀನಾ ಅಥವಾ ಪಾಕಿಸ್ತಾನದಂತಹ ವೈರಿ ರಾಷ್ಟ್ರಗಳು ದಿಢೀರ್ ದಾಳಿ ಮಾಡಿದರೆ, ತಕ್ಕ ಉತ್ತರ ನೀಡಲು ಸೇನೆ ಸನ್ನದ್ಧವಾಗಿದೆ. ಕನಿಷ್ಠ 10 ರಿಂದ 40 ದಿನಗಳವರೆಗಾದ್ರೂ ಯುದ್ಧಮಾಡುವ ಸಾಮರ್ಥ್ಯ ಭಾರತೀಯ ಸೇನೆಗೆ ದೊರೆತಂತಾಗಿದೆ. ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚಮಾಡಿ ಅಗತ್ಯ ಯುದ್ಧಸಲಕರಣೆ ಖರೀದಿ ಮಾಡಲಾಗಿದೆ. ಶಸ್ತ್ರಾಸ್ತ್ರ ಖರೀದಿಗೆ ಬೇಕಾಗಿರುವ ಅನುದಾನವನ್ನ ಮೂರೂ ಸೇನೆಗಳಿಗೆ ಕೇಂದ್ರ ಸರ್ಕಾರ ಒದಗಿಸಿದೆ. ಈ ಮೂಲಕ ಮಿಸೈಲ್, ಯುದ್ಧ ಟ್ಯಾಂಕರ್ ಸೇರಿದಂತೆ ವಿಮಾನಗಳನ್ನ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಅಕಸ್ಮಾತ್ ವೈರಿಗಳು ಭಾರತದ ತಂಟೆಗೇನಾದರು ಬಂದರೆ ಅದಕ್ಕೆ ತಕ್ಕ ಉತ್ತರ ನೀಡಲು ವೀರ ಯೋಧರು ಸಿದ್ಧರಾಗಿದ್ದಾರೆ.

ಒಟ್ನಲ್ಲಿ ಹಲವು ವರ್ಷದ ಕನಸು ಈಡೇರಿದೆ. 2012ರಿಂದ ಶಸ್ತ್ರಾಸ್ತ್ರಗಳ ಕೊರತೆ ಎದುರಿಸ್ತಿದ್ದ ಭಾರತೀಯ ಪಡೆಗಳಿಗೆ ಅಗತ್ಯವಿರುವ ಸಲಕರೆಗಳು ಸಿಕ್ಕಿವೆ. ಈ ಮೊದ್ಲು ಯುದ್ಧಕ್ಕೆ ಸನ್ನದ್ಧವಾಗಿರದ ಕಾರಣ ದಿಢೀರ್ ದಾಳಿ ಬಗ್ಗೆ ಸೇನೆ ಚಿಂತಾಕ್ರಾಂತವಾಗಿತ್ತು. ಈಗ ಎಲ್ಲಾ ಈಡೇರಿದಂತಾಗಿದ್ದು, ಭಾರತೀಯ ಸೇನೆಗೆ ನೂರಾನೆ ಬಲ ಬಂದಂತಾಗಿದೆ.

Published On - 1:07 pm, Tue, 28 January 20

ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ