AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್​​ನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ದೇಶವಾಗಿದೆ ಭಾರತ

ಭಾರತಕ್ಕೆ ಮತ್ತೊಂದು ಬಹುದೊಡ್ಡ ಹಿರಿಮೆ ಸೇರಿಕೊಂಡಿದೆ. ಜಪಾನ್​​ನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ದೇಶವಾಗಿದೆ ಭಾರತ. ಗ್ಲೋಬಲ್ ಎನರ್ಜಿ ಥಿಂಕ್ ಟ್ಯಾಂಕ್, ಎಂಬರ್ ವರದಿಯ ಪ್ರಕಾರ, 2023 ರಲ್ಲಿ ಭಾರತವು ಜಪಾನ್​​ನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ದೇಶವಾಗಿದೆ.

ಜಪಾನ್​​ನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ದೇಶವಾಗಿದೆ ಭಾರತ
Follow us
ಅಕ್ಷಯ್​ ಪಲ್ಲಮಜಲು​​
|

Updated on:May 10, 2024 | 4:35 PM

ಭಾರತ ಈಗಾಗಲೇ ಜಗತ್ತಿನ ಆರ್ಥಿಕತೆಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ದೇಶದಲ್ಲಿ ನಡೆಯುತ್ತಿರುವ ಅನೇಕ ಅಭಿವೃದ್ಧಿಯನ್ನು ಕಂಡು ವಿಶ್ವದ ಬೇರೆ ಬೇರೆ ದೇಶಗಳು ಅಚ್ಚರಿ ವ್ಯಕ್ತಪಡಿಸಿದೆ. ನರೇಂದ್ರ ಮೋದಿ ಆಡಳಿತಕ್ಕೆ ವಿಶ್ವ ನಾಯಕರು ತಲೆಬಾಗಿದ್ದಾರೆ. ಇದೀಗ ಮತ್ತೊಂದು ಮಹತ್ವ ಹೆಜ್ಜೆಯನ್ನು ಭಾರತ ಇಟ್ಟಿದೆ. ಗ್ಲೋಬಲ್ ಎನರ್ಜಿ ಥಿಂಕ್ ಟ್ಯಾಂಕ್, ಎಂಬರ್ ವರದಿಯ ಪ್ರಕಾರ, 2023 ರಲ್ಲಿ ಭಾರತವು ಜಪಾನ್​​ನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ (solar power) ದೇಶವಾಗಿದೆ.

ಬುಧವಾರ ಬಿಡುಗಡೆಯಾದ ಗ್ಲೋಬಲ್ ಇಲೆಕ್ಟ್ರಿಸಿಟಿ ರಿವ್ಯೂ 2023- 2024ರ ಸಾಲಿನ ವಿಶ್ವಾದ್ಯಂತ ವಿದ್ಯುತ್ ಉತ್ಪಾದನಾ ವ್ಯವಸ್ಥೆಗಳ ವಿವರವಾದ ವಿಶ್ಲೇಷಣೆಯನ್ನು ನೀಡಿದೆ. ಇದು 2023 ರಲ್ಲಿ ವಿದ್ಯುತ್ ಉತ್ಪಾದನೆ ಬಗ್ಗೆ ವಿಶ್ವದ ಮೊದಲ ಓಪನ್​​​​ ಡೇಟಾಸೆಟ್‌ನೊಂದಿಗೆ ಪ್ರಕಟಿಸಲ್ಪಟ್ಟಿದೆ. ಇದು ಜಾಗತಿಕ ವಿದ್ಯುತ್ ಬೇಡಿಕೆಯ 92%ನ್ನು ಪ್ರತಿನಿಧಿಸುವ 80 ದೇಶಗಳನ್ನು ಒಳಗೊಂಡಿದೆ.

ಜಾಗತಿಕ ವಿದ್ಯುತ್ ಉತ್ಪಾದನೆಯಲ್ಲಿ ಸೌರಶಕ್ತಿಯ ಪಾಲು 2023 ರಲ್ಲಿ ದಾಖಲೆಯ ಶೇಕಡಾ 5.5ಕ್ಕೆ ಏರಿದೆ ಎಂದು ವರದಿ ಹೇಳುತ್ತದೆ. ಚೀನಾವನ್ನು ಹೋಲಿಸಿದರೆ (+156 TWh), 2023 ರಲ್ಲಿ ಸೌರ ಉತ್ಪಾದನೆಯಲ್ಲಿ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ದೇಶವಾಗಿತ್ತು (+18 ಟೆರಾವಾಟ್ ಗಂಟೆಗಳ ಅಥವಾ TWh). ಯುನೈಟೆಡ್ ಸ್ಟೇಟ್ಸ್ (+33 TWh), ಮತ್ತು ಬ್ರೆಜಿಲ್ (+22 TWh) ಸೌರ ಉತ್ಪಾದನೆ ಮಾಡುತ್ತಿರುವ ದೇಶವಾಗಿದೆ.

ಇದನ್ನೂ ಓದಿ: ವಂದೇ ಭಾರತ್ ರೈಲು ಖಾಲಿ ಓಡುತ್ತಿದೆ ಎಂದ ಕಾಂಗ್ರೆಸ್ ಟೀಕೆಗೆ ಸಚಿವ ವೈಷ್ಣವ್ ಉತ್ತರ ಇದು

2015 ರಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದ ಭಾರತವು ತನ್ನ ಸೌರ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ವಿಸ್ತರಿಸಿದೆ. ಸೌರಶಕ್ತಿಯ ಪಾಲು 2015 ರಲ್ಲಿ ಶೇಕಡಾ 0.5 ರಿಂದ 2023 ರಲ್ಲಿ 5.8 ಶೇಕಡಾಕ್ಕೆ ಏರಿದೆ ಎಂದು ವರದಿ ಹೇಳಿದೆ. ಭಾರತವು ಜಾಗತಿಕ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ 2015ರಿಂದ 2023ರ ನಡುವೆ ಆರು ಪಟ್ಟು ವೇಗವನ್ನು ಪಡೆದುಕೊಂಡಿದೆ.

ಇನ್ನು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (IEA) 2030 ರ ವೇಳೆಗೆ ಸೌರ ಶಕ್ತಿಯು ಜಾಗತಿಕ ವಿದ್ಯುತ್ ಉತ್ಪಾದನೆಯು 22 ಪ್ರತಿಶತವನ್ನು ಹೊಂದಲಿದೆ ಎಂದು ಹೇಳಲಾಗಿದೆ. 2030 ರ ವೇಳೆಗೆ ಇದರ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಹೇಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Fri, 10 May 24