ವಂದೇ ಭಾರತ್ ರೈಲು ಖಾಲಿ ಓಡುತ್ತಿದೆ ಎಂದ ಕಾಂಗ್ರೆಸ್ ಟೀಕೆಗೆ ಸಚಿವ ವೈಷ್ಣವ್ ಉತ್ತರ ಇದು
Ashwini Vaishnaw says Vande Bharat has 103pc occupancy rate: ಶೇ. 50ಕ್ಕಿಂತ ಹೆಚ್ಚು ವಂದೇ ಭಾರತ್ ರೈಲುಗಳು ಖಾಲಿ ಓಡುತ್ತಿವೆ ಎಂದು ಕಾಂಗ್ರೆಸ್ ಪಕ್ಷ ಮಾಡಿರುವ ಆರೋಪಕ್ಕೆ ಕೇಂದ್ರ ಸಚಿವ ಎ ವೈಷ್ಣವ್ ತಿರುಗೇಟು ನೀಡಿದ್ದಾರೆ. 2024-25ರ ಹಣಕಾಸು ವರ್ಷದಲ್ಲಿ ಮೇ 7ರವರೆಗೆ ವಂದೇ ಭಾರತ್ ರೈಲಿನಲ್ಲಿನ ಆಕ್ಯುಪೆನ್ಸಿ ಶೇ. 103ರಷ್ಟಿದೆ ಎನ್ನುವ ದತ್ತಾಂಶವನ್ನು ವೈಷ್ಣವ್ ಕೊಟ್ಟಿದ್ದಾರೆ. ಮೇ 8ರಂದು ಕಾಂಗ್ರೆಸ್ನ ಕೇರಳ ಘಟಕ ಸರಣಿ ಟ್ವೀಟ್ ಮಾಡಿ, ವಂದೇ ಭಾರತ್ ರೈಲುಗಳು ದುಬಾರಿ ಟಿಕೆಟ್ ಹೊಂದಿರುವುದರಿಂದ ಪ್ರಯಾಣಿಕರಿಲ್ಲದೆ ಖಾಲಿ ಓಡಾಡುತ್ತಿವೆ ಎಂದು ಐಆರ್ಸಿಟಿಸಿ ಟಿಕೆಟ್ ಬುಕಿಂಗ್ ದತ್ತಾಂಶ ಆಧಾರದಲ್ಲಿ ಹೇಳಿತ್ತು.
ನವದೆಹಲಿ, ಮೇ 9: ವಂದೇ ಭಾರತ್ ರೈಲುಗಳಲ್ಲಿ ಟಿಕೆಟ್ ದರ ದುಬಾರಿಯಾಗಿದ್ದು, ರೈಲುಗಳೂ ಖಾಲಿ ಓಡಾಡುತ್ತಿವೆ ಎಂದು ಕೇರಳ ಘಟಕದ ಕಾಂಗ್ರೆಸ್ ಪಕ್ಷ ಮಾಡಿದ ಆರೋಪವನ್ನು ಕೇಂದ್ರ ರೈಲ್ವೆ ಸಚಿವ ಡಾ. ಎ ವೈಷ್ಣವ್ (Ashwini vaishnaw) ತಳ್ಳಿಹಾಕಿದ್ದಾರೆ. 2024-25ರ ಹಣಕಾಸು ವರ್ಷದಲ್ಲಿ ವಂದೇ ಭಾರತ್ ರೈಲುಗಳಲ್ಲಿ (Vande Bharat train) ಪ್ರಯಾಣಿಕರ ಸಂಖ್ಯೆ (occupancy rate) ಶೇ. 103ರಷ್ಟಿದೆ. ಕಾಂಗ್ರೆಸ್ ಪಕ್ಷದ ಸುಳ್ಳುಗಳ ಗುಳ್ಳೆಯನ್ನು ಒಡೆಯುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ಐಆರ್ಸಿಟಿಸಿಯ ಟಿಕೆಟ್ ಬುಕಿಂಗ್ ಡಾಟಾದ ವಿಶ್ಲೇಷಣೆಯೊಂದನ್ನು ಆಧರಿಸಿ ಕಾಂಗ್ರೆಸ್ ಪಕ್ಷ ನಿನ್ನೆ ಬುಧವಾರ ಸರಣಿ ಟ್ವೀಟ್ ಮಾಡಿತ್ತು. ವಂದೇ ಭಾರತ್ ಎಂಬ ಗುಳ್ಳೆಯನ್ನು ಒಡೆಯಲು ನಿರ್ಧರಿಸಿದ್ದೇವೆ ಎಂದು ಆರಂಭಿಸಿ, ದೇಶದ ವಿವಿಧ ಮಾರ್ಗಗಳಲ್ಲಿ ಶೇ. 50ಕ್ಕಿಂತ ಹೆಚ್ಚು ವಂದೇ ಭಾರತ್ ರೈಲುಗಳು ಖಾಲಿ ಓಡಾಡುತ್ತಿವೆ ಎಂದು ದತ್ತಾಂಶವನ್ನು ಕಾಂಗ್ರೆಸ್ ತನ್ನ ಸರಣಿ ಟ್ವೀಟ್ಗಳಲ್ಲಿ ಮುಂದಿಟ್ಟಿತ್ತು.
ಇದಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಪೋಸ್ಟ್ನಲ್ಲೇ ಉತ್ತರ ಕೊಟ್ಟಿದ್ದಾರೆ. ‘ಕಾಂಗ್ರೆಸ್ನ ಸುಳ್ಳುಗಳ ಗುಳ್ಳೆಯನ್ನು ಹೊಡೆಯುವ ಸಮಯ ಬಂದಿದೆ. ಮೇ 7ರಂದು ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರ ಪ್ರಮಾಣ ಶೇ. 98ರಷ್ಟಿತ್ತು. 2024-25ರ ಹಣಕಾಸು ವರ್ಷದಲ್ಲಿ (ಮೇ 7ರವರೆಗೆ) ಪ್ರಯಾಣಿಕರ ಸಂಖ್ಯೆ ಶೇ. 103ರಷ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ವಂದೇ ಭಾರತ್ ರೈಲು ನಿಲ್ಲುವುದು ಬೇಕಾ?’ ಎಂದು ಡಾ. ಅಶ್ವಿನಿ ವೈಷ್ಣವ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
Its time to prick the bubble of Congress lies. Occupancy of Vande Bharat trains on 7th May is 98%. Occupancy in FY 2024-25 (till 7th May) is 103%. Does Congress want Vande Bharat to stop? pic.twitter.com/zihu2GwpfR
— Ashwini Vaishnaw (मोदी का परिवार) (@AshwiniVaishnaw) May 9, 2024
ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು; ಅಮಿತ್ ಶಾ ಘೋಷಣೆ
ಕಡಿಮೆ ಟಿಕೆಟ್ ಬೆಲೆಯ ಮಾಮೂಲಿಯ ರೈಲಿಗೆ ಸಿಕ್ಕಾಪಟ್ಟೆ ಬೇಡಿಕೆ ಎಂಬುದು ಕೈ ವಾದ
ಕಾಂಗ್ರೆಸ್ ಪಕ್ಷ ಐಆರ್ಸಿಟಿಸಿ ಟಿಕೆಟ್ ಬುಕಿಂಗ್ ದತ್ತಾಂಶಗಳನ್ನಿಟ್ಟುಕೊಂಡು ವಿಶ್ಲೇಷಣೆ ಮಾಡಿದೆ. ರೈಲು ಹೊರಡುವ ಕೆಲ ಗಂಟೆಗಳ ಮೊದಲು ಐಆರ್ಸಿಟಿಸಿಯಲ್ಲಿನ ಟಿಕೆಟ್ ಬುಕಿಂಗ್ ದತ್ತಾಂಶವನ್ನು ಪರಿಗಣಿಸಲಾಗಿದೆ. ವಂದೇ ಭಾರತ್ ರೈಲುಗಳನ್ನು ಬಳಸುವ ಜನರು ಉತ್ತಮ ಆರ್ಥಿಕತೆಯ ಪ್ರದೇಶಗಳಲ್ಲಿನವರು. ಹಿಂದುಳಿದ ಪ್ರದೇಶಗಳಲ್ಲಿ ವಂದೇ ಭಾರತ್ಗೆ ಪ್ರಯಾಣಿಕರು ಕಡಿಮೆ ಎಂಬುದನ್ನು ಕೇರಳ ಕಾಂಗ್ರೆಸ್ ಎತ್ತಿತೋರಿಸಿದೆ.
ಅಷ್ಟೇ ಅಲ್ಲ, ಕಡಿಮೆ ಟಿಕೆಟ್ ಬೆಲೆ ಇರುವ ಮಾಮೂಲಿಯ ರೈಲುಗಳು ಜನರಿಂದ ತುಂಬಿತುಳುಕುತ್ತಿರುವ ವಿಡಿಯೋವೊಂದನ್ನೂ ಅದು ಶೇರ್ ಮಾಡಿದೆ. ಕೆಳ ಮಧ್ಯಮ ವರ್ಗದ ಜನರಿಗೆ ವಂದೇ ಭಾರತ್ ಕೈಗೆಟುಕದಂತಾಗಿದೆ ಎಂದು ತನ್ನ ಸರಣಿ ಟ್ವೀಟ್ಗಳಲ್ಲಿ ಕೇರಳ ಕಾಂಗ್ರೆಸ್ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ