ಸುಪ್ರೀಂ ಕೋರ್ಟ್ ಕ್ಷಮೆ ಕೇಳಲು ಕುನಾಲ್ ಕಮ್ರಾ ನಿರಾಕರಣೆ

| Updated By: ganapathi bhat

Updated on: Apr 06, 2022 | 8:32 PM

ಕುನಾಲ್ ಕಮ್ರಾ ಹ್ಯಾಷ್​ಟ್ಯಾಗ್ ಟ್ವಿಟರ್ ಟ್ರೆಂಡಿಂಗ್​ನಲ್ಲಿದೆ. ಟ್ವಿಟರ್​ನಲ್ಲಿ #KunalKamra ಟ್ಯಾಗ್​ನಲ್ಲಿ ಇಂದು (ಜ.29) ಸಂಜೆಯ ವೇಳೆ 10.9kಯಷ್ಟು (ಸುಮಾರು 10,000) ಟ್ವೀಟ್​ಗಳಾಗಿವೆ.

ಸುಪ್ರೀಂ ಕೋರ್ಟ್ ಕ್ಷಮೆ ಕೇಳಲು ಕುನಾಲ್ ಕಮ್ರಾ ನಿರಾಕರಣೆ
ಕುನಾಲ್ ಕಮ್ರಾ
Follow us on

ದೆಹಲಿ: ಬಲಶಾಲಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಟೀಕೆಗಳನ್ನು ಸ್ವೀಕರಿಸಲು, ಸಹಿಸಲು ನಿರಾಕರಿಸಿದರೆ, ನಾವು ಕೇವಲ ಸೆರೆವಾಸವನ್ನು ಅನುಭವಿಸುವ ಕಲಾವಿದರು ಮತ್ತು ದೊಡ್ಡವರ ಆಜ್ಞೆಯಂತೆ ನಡೆದುಕೊಳ್ಳುವ ದೇಶವಾಗಿ ಕುಗ್ಗಿ ಹೋಗುತ್ತೇವೆ ಎಂದು ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ಹೇಳಿಕೆ ನೀಡಿದ್ದಾರೆ. ಕುನಾಲ್ ಕಮ್ರಾ ಇಂದು (ಜ.29) ಸುಪ್ರೀಂ ಕೋರ್ಟ್​ಗೆ ನೀಡಿರುವ ಅಫಿಡವಿಟ್​ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

ನಾನು ತನ್ನ ಮಿತಿಯನ್ನು ಮೀರಿ ವರ್ತಿಸಿದ್ದೇನೆ. ಅದಕ್ಕಾಗಿ, ಇಂಟರ್​ನೆಟ್ ಸ್ಥಗಿತಗೊಳಿಸಬೇಕು ಅಂತಾದರೆ, ನಾನು ಕೂಡ ಕಾಶ್ಮೀರಿ ಗೆಳೆಯರಂತೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಬರೆಯುತ್ತೇನೆ ಎಂದು ಅಫಿಡವಿಟ್​ನಲ್ಲಿ ಕಟುವಾಗಿ ಹೇಳಿಕೊಂಡಿದ್ದಾರೆ.

ಕುನಾಲ್ ಕಮ್ರಾ, ಡಿಸೆಂಬರ್ 18ರಂದು ನ್ಯಾಯಾಂಗ ಹಾಗೂ ನ್ಯಾಯಾಧೀಶರಿಗೆ ಸಾಮಾಜಿಕ ಜಾಲತಾಣಗಳ ಪೋಸ್ಟ್ ಮೂಲಕ ನಿಂದನೆ ಮಾಡಿರುವ ಆರೋಪದ ಅಡಿಯಲ್ಲಿ ಕೋರ್ಟ್ ನೋಟೀಸ್ ಪಡೆದಿದ್ದರು. ಕೋರ್ಟ್ ನೋಟೀಸ್​ಗೆ ಪ್ರತಿಯಾಗಿ ಕುನಾಲ್ ಇಂದು ಅಫಿಡವಿಟ್ ಸಲ್ಲಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿಯಾಗುತ್ತಿರುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಮುನಾವರ್ ಫಾರೂಕಿ ತಾವು ಮಾಡದ ಜೋಕ್​ಗಾಗಿ ಸೆರೆವಾಸ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳು ದೇಶದ್ರೋಹ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಅಫಿಡವಿಟ್​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಆರು ವಾರಗಳ ಒಳಗೆ ಪ್ರತಿಕ್ರಿಯಿಸಿ: ಕುನಾಲ್ ಕಮ್ರಾ ಮತ್ತು ರಚಿತಾ ತನೇಜಾಗೆ ಸುಪ್ರೀಂಕೋರ್ಟ್ ಸೂಚನೆ

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದಲ್ಲಿರುವ ಯಾವುದೇ ಸಂಸ್ಥೆಯು ಟೀಕೆಯಿಂದ ಹೊರತಾಗಿದ್ದರೆ, ಅದು ಅಸಮರ್ಪಕವಾಗಿ ಜಾರಿಗೊಳಿಸಿದ ಲಾಕ್​ಡೌನ್ ಸಮಯದಲ್ಲಿ ವಲಸಿಗರನ್ನು ವಸತಿ ಹುಡುಕಿಕೊಳ್ಳಿ ಎಂದು ಬಿಟ್ಟಂತೆ ಎಂದು  ಹೇಳಿದ್ದಾರೆ. ನನ್ನ ಟ್ವೀಟ್​ಗಳು, ವಿಶ್ವದಲ್ಲಿ ಅತಿ ಬಲಶಾಲಿ ಕೋರ್ಟ್ ಒಂದರ ಅಡಿಪಾಯವನ್ನು ಅಲ್ಲಾಡಿಸುತ್ತದೆ ಅಂತಾದರೆ, ಅದು ನನ್ನ ಸಾಮರ್ಥ್ಯಕ್ಕೂ ಮೀರಿದ ಊಹೆ ಎಂದು ಕನಾಲ್ ಅಫಿಡವಿಟ್​ನಲ್ಲಿ ಬರೆದುಕೊಂಡಿದ್ದಾರೆ.

ಈ ಜೋಕ್​ಗಳು ವಾಸ್ತವ ಅಲ್ಲ, ಅವನ್ನು ಹಾಗೆ ಹೇಳಲೂ ಆಗುವುದಿಲ್ಲ. ತಮಗೆ ನಗುಬರಿಸದ ಜೋಕ್​ಗಳ ಬಗ್ಗೆ ಹಲವರು ಪ್ರತಿಕ್ರಿಯಿಸುವುದಿಲ್ಲ. ನಮ್ಮ ರಾಜಕಾರಣಿಗಳು ತಮ್ಮ ವಿರುದ್ಧದ ಟೀಕೆಗಳನ್ನು ನಿರ್ಲಕ್ಷಿಸುವಂತೆ ಈ ಜೋಕುಗಳನ್ನೂ ಬಹುತೇಕ ಜನರು ನಿರ್ಲಕ್ಷಿಸುತ್ತಾರೆ. ಜೋಕೊಂದರ ಜೀವನ ಅಲ್ಲಿಗೆ ಮುಗಿಯಬೇಕು… ನ್ಯಾಯಾಧೀಶರು ಸೇರಿದಂತೆ ಯಾರೇ ಆಗಲಿ ಇಂಥ ವ್ಯಂಗ್ಯ ಅಥವಾ ಕಾಮಿಡಿಗಳು ಅವರ ಕೆಲಸಕ್ಕೆ ತೊಡಕುಂಟುಮಾಡುತ್ತವೆ ಎಂಬುದನ್ನು ನಾನು ಒಪ್ಪುವುದಿಲ್ಲ.

ಈ ಕಾರಣದಿಂದ ಕುನಾಲ್ ಕಮ್ರಾ ಹ್ಯಾಷ್​ಟ್ಯಾಗ್ ಟ್ವಿಟರ್ ಟ್ರೆಂಡಿಂಗ್​ನಲ್ಲಿದೆ. ಟ್ವಿಟರ್​ನಲ್ಲಿ #KunalKamra ಟ್ಯಾಗ್​ನಲ್ಲಿ ಇಂದು (ಜ.29) ಸಂಜೆಯ ವೇಳೆ 10.9kಯಷ್ಟು (ಸುಮಾರು 10,000) ಟ್ವೀಟ್​ಗಳಾಗಿವೆ.

ಟ್ವಿಟರ್ ಜಾಲತಾಣದಲ್ಲಿ ಕಂಡುಬಂದ ಕೆಲವು ಟ್ವೀಟ್​ಗಳು

 

ಬಿಜೆಪಿ ಮಾಧ್ಯಮ ವಕ್ತಾರ ಮಾಡಿರುವ ಟ್ವೀಟ್

ಆರು ವಾರಗಳ ಒಳಗೆ ಪ್ರತಿಕ್ರಿಯಿಸಿ: ಕುನಾಲ್ ಕಮ್ರಾ ಮತ್ತು ರಚಿತಾ ತನೇಜಾಗೆ ಸುಪ್ರೀಂಕೋರ್ಟ್ ಸೂಚನೆ

Published On - 8:22 pm, Fri, 29 January 21