ಭಾರತ-ಪಾಕಿಸ್ತಾನ 1971ರ ಯುದ್ಧ ಚೆಸ್ ಆಟದಂತಿತ್ತಾ? ಭಾರತದ ಆ ಒಂದು ನಡೆಗೆ 93,000 ಪಾಕ್ ಸೈನಿಕರು ಶರಣಾಗತಿ; ಯಾವುದದು ನಡೆ?

|

Updated on: Dec 17, 2023 | 5:35 PM

India Pakistan 1971 War: 1971ರ ಯುದ್ಧದಲ್ಲಿ ಭಾರತದ ಸೇನೆಯ ಹೊಡೆತ ತಾಳಲಾಗದೇ ಪಾಕಿಸ್ತಾನ ಸೇನೆ ತತ್ತರಿಸಿಹೋಗಿತ್ತು. 93,000 ಸೈನಿಕರು ಶರಣಾಗಬೇಕಾಯಿತು. ಆ ಯುದ್ಧದದಲ್ಲಿ ಭಾರತೀಯ ವಾಯು ಪಡೆಯ ಪರಾಕ್ರಮ ಮತ್ತು ದೈತ್ಯ ಶಕ್ತಿಯಿಂದ ಪಾಕಿಸ್ತಾನ ಕಂಗಾಲಾಗಿ ಹೋಗಿತ್ತು. 1971ರ ಡಿಸೆಂಬರ್ 14ರಂದು ಡಾಕಾ ಗವರ್ನರ್ ಭವನಕ್ಕೆ ಐಎಎಫ್ ವೈಮಾನಿಕ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ನೈತಿಕ ಸ್ಥೈರ್ಯ ಕಳೆದುಕೊಂಡಿತ್ತು.

ಭಾರತ-ಪಾಕಿಸ್ತಾನ 1971ರ ಯುದ್ಧ ಚೆಸ್ ಆಟದಂತಿತ್ತಾ? ಭಾರತದ ಆ ಒಂದು ನಡೆಗೆ 93,000 ಪಾಕ್ ಸೈನಿಕರು ಶರಣಾಗತಿ; ಯಾವುದದು ನಡೆ?
1971ರ ಯುದ್ಧದಲ್ಲಿ ಪಾಲ್ಗೊಂಡ ಭಾರತೀಯ ಸೈನಿಕರು
Follow us on

ನವದೆಹಲಿ, ಡಿಸೆಂಬರ್ 17: ಭಾರತದ ಮಿಲಿಟರಿ ಇತಿಹಾಸದಲ್ಲಿ ಅತ್ಯಂತ ಮಹತ್ವದ ಯುದ್ಧಗಳಲ್ಲಿ 1971ರದ್ದು (India Pakistan War) ಒಂದು. ಎರಡೂ ಮಗ್ಗಲುಗಳಲ್ಲಿ ಭಾರತಕ್ಕೆ ಮುಳ್ಳಾಗಿದ್ದ ಪಾಕಿಸ್ತಾನ ಆ ವರ್ಷ ಹೋಳಾಗಿ ಹೋಗಿತ್ತು. ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಮೋಚನೆ ಪಡೆದಿತ್ತು. ಭಾರತಕ್ಕೆ ವಿಜಯದ ದಿನವಾಗಿತ್ತು (Indian Army Vijay Diwas). ಭಾರತದ ಸೇನಾ ಪಡೆಯ ನೆರವಿನಿಂದ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದಿತ್ತು. ಭಾರತದ ಮೂರು ಸೇನಾ ಪಡೆಗಳ ಸಂಯೋಜಿತ ದಾಳಿಗೆ ಪಾಕಿಸ್ತಾನದ ಬಳಿ ಉತ್ತರವೇ ಇರಲಿಲ್ಲ. 1971ರ ಡಿಸೆಂಬರ್ 3ಕ್ಕೆ ಆರಂಭವಾದ ಯುದ್ಧ ಡಿಸೆಂಬರ್ 16ಕ್ಕೆ ಅಂತ್ಯಗೊಂಡಿತು. ಪಾಕಿಸ್ತಾನದ 93,000 ಸೈನಿಕರು ಭಾರತೀಯ ಸೇನೆಗೆ ಶರಣಾಗಿ ಹೋಗಿದ್ದರು. ಇದು ಹೇಗೆ ಸಾಧ್ಯವಾಯಿತು ಎಂಬ ಘಟನೆಯ ವಿವರವೇ ರೋಚಕವಾಗಿದೆ. ಭಾರತೀಯ ವಾಯು ಸೇನೆ ನಿನ್ನೆ ವಿಜಯ್ ದಿವಸ್​ನಂದು ಆ ಘಟನೆಯನ್ನು ಸ್ಮರಿಸಿಕೊಂಡು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಜನರಲ್ ಮಾಣಿಕ್ ಶಾ ನೇತೃತ್ವದಲ್ಲಿ ಭಾರತೀಯ ಸೇನೆ, ವಾಯು ಸೇನೆ ಮತ್ತು ನೌಆ ಸೇನೆ ಈ ಮೂರು ವಿಭಾಗಗಳಿಂದ ಸಂಯೋಜಿತ ದಾಳಿಗಳಾಗಿದ್ದವು. ಹಾಗೆಯೇ, ಭಾರತೀಯ ಸೇನೆ ಬೆಳೆಸಿದ ಮುಕ್ತಿ ಬಹಾನಿ (mukti bahani) ಎಂಬ ಗೆರಿಲ್ಲಾ ಪಡೆಯೂ ಪಾಕಿಸ್ತಾನ ಸೈನಿಕರನ್ನು ಹೈರಾಣಗೊಳಿಸಿತ್ತು.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಮಾಲ್ಟಾ ಹಡಗನ್ನು ಅಪಹರಿಸುವ ಯತ್ನ ವಿಫಲ

ಆ ಒಂದು ಘಟನೆ ಪಾಕ್ ಸೇನೆಯನ್ನು ತಲ್ಲಣಗೊಳಿಸಿತ್ತು..?

ಭಾರತೀಯ ಮಿಲಿಟರಿಯ ಯೋಜಿತ ದಾಳಿಗಳಿಂದ ಪಾಕಿಸ್ತಾನ ಆವಾಕ್ಕಾಗಿ ಹೋಗಿತ್ತು. ಅದರಲ್ಲೂ ವಾಯುಪಡೆಯ ಶಕ್ತಿಗೆ ಶತ್ರುಗಳು ಬೆರಗಾಗಿ ಹೋಗಿದ್ದರು. ಡಿಸೆಂಬರ್ 14ರಂದು ಅಂದಿನ ಈಸ್ಟ್ ಪಾಕಿಸ್ತಾನದ ಢಾಕಾದಲ್ಲಿ ಗವರ್ನರ್ ಹೌಸ್​ನಲ್ಲಿ ಸಭೆ ನಡೆದಿತ್ತು. ಆ ಗವರ್ನರ್ ಹೌಸ್ ಕಟ್ಟಡದ ಮೇಲೆ ಭಾರತೀಯ ವಾಯುಪಡೆಯಿಂದ ವೈಮಾನಿಕ ದಾಳಿ ಆಗಿತ್ತು.

ಆ ಒಂದು ದಾಳಿಯು ಈಸ್ಟ್ ಪಾಕಿಸ್ತಾನ್ ಸರ್ಕಾರವನ್ನು ಜರ್ಝರಿತಗೊಳಿಸಿತು. ಕೂಡಲೇ ಸರ್ಕಾರ ರಾಜೀನಾಮೆ ಕೊಟ್ಟಿತು. ಪಾಕಿಸ್ತಾನ ಸೇನೆ ಮಾನಸಿಕವಾಗಿ ಸ್ಥೈರ್ಯ ಕಳೆದುಕೊಂಡಿತು.

ಇದನ್ನೂ ಓದಿ: ಸಂಸತ್ತಿನಲ್ಲಿ ನಡೆದ ಘಟನೆ ಆತಂಕಕಾರಿಯಾಗಿದೆ: ನರೇಂದ್ರ ಮೋದಿ

ಅಂದಿನ ಪಾಕಿಸ್ತಾನ ಸೇನೆಯ ನೇತೃತ್ವ ವಹಿಸಿದ್ದವರು ಜನರಲ್ ನಿಯಾಜಿ. ಸ್ಯಾಮ್ ಮಾಣಿಕ್ ಶಾ ಬಳಿ ಬಂದು ಅವರು ಕದನವಿರಾಮ ಘೋಷಿಸುವಂತೆ ಮನವಿ ಮಾಡಿದರು. ಅದಕ್ಕೆ ಭಾರತದ ಸೇನಾ ಮುಖ್ಯಸ್ಥರು ಹೇಳಿದ ಮಾತು ಹೀಗಿತ್ತು:

‘ಬಾಂಗ್ಲಾದೇಶದಲ್ಲಿ ನಿಮ್ಮ ಕಮಾಂಡ್​ನಲ್ಲಿ ಇರುವ ಎಲ್ಲಾ ಪಡೆಗಳಿಗೂ ಕೂಡಲೇ ಕದನವಿರಾಮ ಕೈಗೊಂಡು, ನನ್ನ ಪಡೆಗಳಿಗೆ ಶರಣಾಗಬೇಕೆಂದು ನೀವು ಆದೇಶ ಕೊಡುತ್ತೀರೆಂದು ನಿರೀಕ್ಷಿಸುತ್ತೇನೆ’ ಎಂದು ಕಡ್ಡಿ ತುಂಉ ಮಾಡಿದಂತೆ ಜನರಲ್ ಮಾಣಿಕ್​ಶಾ ಹೇಳಿದ್ದರು. ಡಿಸೆಂಬರ್ 16ಕ್ಕೆ ಶರಣಾಗಲು ಗಡುವು ನಿಗದಿ ಮಾಡಿದರು.

ಡಿಸೆಂಬರ್ 15, ಸಂಜೆ 5ರಿಂದ ಡಿಸೆಂಬರ್ 16ರ ಬೆಳಗ್ಗೆ 9ಗಂಟೆಯವರೆಗೆ ಭಾರತೀಯ ವಾಯುಪಡೆಯ ಕಾರ್ಯಾಚರಣೆಗಳಿಗೆ ತಾತ್ಕಾಲಿಕ ವಿರಾಮ ಕೊಡಲಾಗಿತ್ತು. ಡಿಸೆಂಬರ್ 16, ಬೆಳಗ್ಗೆ 9ಗಂಟೆಯ ಗಡುವಿಗೆ ಅರ್ಧ ಗಂಟೆ ಇರುವಾಗ ಜನರಲ್ ನಿಯಾಜಿ ಓಡಿ ಬಂದು, ಕದನವಿರಾಮವನ್ನು ಮಧ್ಯಾಹ್ನ 3 ಗಂಟೆಯವರೆಗೆ ವಿಸ್ತರಿಸುವಂತೆ ಕೇಳಿಕೊಂಡರು. ಅಲ್ಲದೇ ತಮ್ಮ ಸೇನಾ ಪಡೆಗಳಿಗೆ ಶರಣಾಗುವಂತೆ ತಿಳಿಸಿರುವುದಾಗಿ ಅರುಹಿದ್ದರು.

ಇದನ್ನೂ ಓದಿ: ಐದು ರಾಜ್ಯಗಳಲ್ಲಿ ವಿಕಸಿತ ಭಾರತ್ ಸಂಕಲ್ಪ ಯಾತ್ರೆಗೆ ಚಾಲನೆ: ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಸಂಜೆ 4:31ಕ್ಕೆ ಪಾಕಿಸ್ತಾನದ 93,000 ಸೇನಾ ಪಡೆಗಳು ಭಾರತಕ್ಕೆ ಶರಣಾಗಿದ್ದವು. ಅಷ್ಟೊಂದು ಸಂಖ್ಯೆಯಲ್ಲಿ ತುಕಡಿಗಳಿದ್ದರೂ ಪಾಕಿಸ್ತಾನ ಯಾಕೆ ಸುಖಾಸುಮ್ಮನೆ ಶರಣಾಯಿತು ಎಂಬುದು ಕೆಲವರಿಗೆ ಅಚ್ಚರಿ ಎನಿಸಿರಬಹುದು. ಈ ಬಗ್ಗೆ ಪಾಕಿಸ್ತಾನದ ಅಂದಿನ ಸೇನಾ ಮುಖ್ಯಸ್ಥ ಜನರಲ್ ನಿಯಾಜಿ ಅವರನ್ನು ಭಾರತೀಯ ಸೇನಾಧಿಕಾರಿಯೊಬ್ಬರು ಕೇಳಿದಾಗ ಅವರು ಭಾರತೀಯ ವಾಯು ಸೇನೆಯನ್ನು ಬೊಟ್ಟು ಮಾಡಿ ತೋರಿಸಿದ್ದರು.

ಭಾರತೀಯ ವಾಯು ಸೇನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಪಾಕಿಸ್ತಾನ ಸೇನೆ ಇತ್ತು. ಏರ್ ಫೋರ್ಸ್ ಚೆಸ್ ಗೇಮ್​ನಲ್ಲಿ ಎದುರಾಳಿಗೆ ಚೆಕ್ ಮೇಟ್ ಕೊಟ್ಟಂತಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ