
ಪಾಕಿಸ್ತಾನದ ಪ್ರತಿಯೊಂದು ದಾಳಿಗೂ ಭಾರತ ತೀಕ್ಷ್ಣ ತಿರುಗೇಟು ನೀಡುತ್ತಿದೆ. ಭಾರತವು ಇಲ್ಲಿಯವರೆಗೆ ನಡೆಸಿದ ದಾಳಿಗಳಲ್ಲಿ ಪಾಕಿಸ್ತಾನಕ್ಕೆ ಗಣನೀಯ ಹಾನಿಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಬುಧವಾರ ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸಿತು. ಈ ಕಾರ್ಯಾಚರಣೆಯಿಂದ ಪಾಕಿಸ್ತಾನದ ಪ್ರಮುಖ ಉಗ್ರ ನೆಲೆಗಳಿಗೆ ಹಾನಿಯಾಗಿತ್ತು. ಈ ದಾಳಿಗೆ ಪ್ರತಿಯಾಗಿ, ಪಾಕಿಸ್ತಾನವು 7 ಮತ್ತು 8 ನೇ ತಾರೀಖಿನ ರಾತ್ರಿ ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ಯತ್ನಿಸಿತು. ಆದರೆ ಅದನ್ನು ವಿಫಲಗೊಳಿಸಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಡ್ರೋನ್‌ಗಳ ಮೂಲಕ ಪಾಕಿಸ್ತಾನದ ಹಲವಾರು ನಗರಗಳ ಮೇಲೆ ದಾಳಿ ಮಾಡಿ ಲಾಹೋರ್‌ನಲ್ಲಿ ಅದರ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿತು. ಇದರ ನಂತರ, ಮೇ 8 ರ ರಾತ್ರಿ, ಪಾಕಿಸ್ತಾನ ಮತ್ತೆ ಭಾರತದ ಹಲವು ನಗರಗಳನ್ನು ಗುರಿಯಾಗಿಸಲು ಪ್ರಯತ್ನಿಸಿತು. ಆದರೆ ಈ ಬಾರಿಯೂ ಅದು ನಿರಾಶೆಗೊಂಡಿತು. ಅದೇ ಸಮಯದಲ್ಲಿ, ಭಾರತವು ಲಾಹೋರ್, ಇಸ್ಲಾಮಾಬಾದ್, ಕರಾಚಿ, ಸಿಯಾಲ್‌ಕೋಟ್, ಬಹವಾಲ್ಪುರ್ ಮತ್ತು ಪೇಶಾವರ್ ಸೇರಿದಂತೆ ಪಾಕಿಸ್ತಾನದ ಹಲವು ನಗರಗಳ ಮೇಲೆ ಪ್ರತೀಕಾರ ತೀರಿಸಿಕೊಂಡಿತು. ಭಾರತದ ಆಪರೇಷನ್ ಸಿಂಧೂರ್ 2.0 ಮತ್ತು ಎರಡೂ ದೇಶಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಗೆ ಸಂಬಂಧಿಸಿದ ಪ್ರತಿಯೊಂದು ಅಪ್ಡೇಟ್ಗಾಗಿ ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಭಾರತದ ಜೊತೆ ಉತ್ತಮ ಸಂಬಂಧ ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಭಾರತ ತಮ್ಮ ಮೇಲೆ ದಾಳಿ ನಡೆಸುವುದನ್ನು ತಡೆಯಬೇಕೆಂದು ಪಾಕಿಸ್ತಾನದ ಪ್ರಧಾನಿ ಮನವಿ ಮಾಡಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು. ಇಂದು ಈ ಬಗ್ಗೆ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಭಾರತ, ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ’ ಎಂದು ಹೇಳಿದ್ದಾರೆ.
ಭಾರತ, ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ#IndiaPakistanTensions #IndianArmy #pakistan #OperationSindoor #DonaldTrump https://t.co/bzNyMMcBoL
— TV9 Kannada (@tv9kannada) May 10, 2025
ಪಾಕಿಸ್ತಾನಕ್ಕೆ ಮೋದಿ ಸರ್ಕಾರ ದೊಡ್ಡ ಎಚ್ಚರಿಕೆಯೊಂದನ್ನು ನೀಡಿದೆ. ‘ಭಾರತದ ವಿರುದ್ಧ ಭವಿಷ್ಯದಲ್ಲಿ ನಡೆಯುವ ಯಾವುದೇ ರೀತಿಯ ಭಯೋತ್ಪಾದಕ ಕೃತ್ಯವನ್ನು ಭಾರತದ ವಿರುದ್ಧದ ಯುದ್ಧ ಕೃತ್ಯವೆಂದು ಪರಿಗಣಿಸಲಾಗುತ್ತದೆ’ ಎಂದು ಭಾರತ ಸರ್ಕಾರ ಪಾಕಿಸ್ತಾನಕ್ಕೆ ಇಂದು ಖಡಕ್ ವಾರ್ನಿಂಗ್ ನೀಡಿದೆ. ಪದೇಪದೇ ಭಾರತದ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಈ ಮೂಲಕ ಭಾರತ ಕೊನೆಯ ಎಚ್ಚರಿಕೆ ನೀಡಿದೆ.
ನಿಮ್ಮ ಮುಂದಿನ ದಾಳಿಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸುತ್ತೇವೆ; ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ#pakistan #IndiaPakistanWar #IndianArmy #IndianAirForce https://t.co/9JVsDpbKmw
— TV9 Kannada (@tv9kannada) May 10, 2025
ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ್ದಕ್ಕೆ ಮತ್ತು ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಂಡದ್ದಕ್ಕೆ ಭಾರತ ಸರ್ಕಾರವನ್ನು ಸ್ವದೇಶದವರೇ ಕೆಲವರು ಟೀಕಿಸಿದ್ದು ಪಾಕಿಸ್ತಾನಕ್ಕೆ ಆಹಾರವಾಗಿದೆ. ಆದರೆ, ಪರಿಸ್ಥಿತಿಯನ್ನು ಬಹಳ ಚಾಣಾಕ್ಷತನದಿಂದ ನಿಭಾಯಿಸಿದ ಭಾರತದ ವಿದೇಶಾಂಗ ಕಾರ್ಯದರ್ಶಿ, ಪಾಕಿಸ್ತಾನದ ಟೀಕಾಸ್ತ್ರವನ್ನು ಆ ದೇಶಕ್ಕೇ ತಿರಗುಬಾಣವಾಗಿಸಿದ್ದಾರೆ.
ಪಾಕ್ ಟೀಕಾಸ್ತ್ರವನ್ನು ಅವರಿಗೇ ತಿರುಗು ಬಾಣವಾಗಿಸಿದ ವಿಕ್ರಂ ಮಿಸ್ತ್ರಿ#IndiaStrikesBack #IndianDiplomacy #ForeignAffairs #PakistanTensions #IndiaVsPakistan #ChanakyaMove #DefendIndia #NationalSecurity #IndiaFirst #BreakingNewshttps://t.co/G2x2hyODh8
— TV9 Kannada (@tv9kannada) May 10, 2025
ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು “ಆಪರೇಷನ್ ಸಿಂದೂರ್” ಹೆಸರಿನಲ್ಲಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಐವರು ಉಗ್ರಗಾಮಿಗಳು ಹತ್ಯೆಯಾಗಿದ್ದಾರೆ. ಹತ್ಯೆಯಾದ ಉಗ್ರಗಾಮಿಗಳ ಗುರುತು ಮತ್ತು ಅವರ ಸಂಘಟನೆಗಳೊಂದಿಗಿನ ಸಂಬಂಧ ಬಹಿರಂಗಗೊಂಡಿದೆ.
ಆಪರೇಷನ್ ಸಿಂದೂರ್ ದಾಳಿಯಲ್ಲಿ ಹತರಾದ ಉಗ್ರರ ಹೆಸರು, ಹಿಸ್ಟ್ರಿ ಬಹಿರಂಗ#OperationSindoor #IndiaPakistanWar #PakistanAirStrikehttps://t.co/qGKqfpcbTe
— TV9 Kannada (@tv9kannada) May 10, 2025
ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದರು. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ತಪ್ಪುಗ್ರಹಿಕೆಯನ್ನು ತಪ್ಪಿಸಲು ನೇರ ಸಂವಾದವನ್ನು ಪುನಃ ಸ್ಥಾಪಿಸುವ ಮಾರ್ಗಗಳನ್ನು ಎರಡೂ ಕಡೆಯವರು ಕಂಡುಕೊಳ್ಳಬೇಕಾಗಿದೆ ಎಂದು ರೂಬಿಯೊ ಒತ್ತಿ ಹೇಳಿದರು. ಭವಿಷ್ಯದಲ್ಲಿ ವಿವಾದಗಳನ್ನು ತಪ್ಪಿಸಲು ಚರ್ಚೆಗೆ ಅವರು ಒತ್ತು ನೀಡಿದ್ದಾರೆ. ಈ ಮಾಹಿತಿಯನ್ನು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಸಂದರ್ಭದಲ್ಲಿ, ಪಾಕ್ ಕಡೆಯಿಂದ ಹರಡಲಾಗುತ್ತಿರುವ ಸುಳ್ಳು ಪ್ರಚಾರಗಳನ್ನು ಭಾರತೀಯ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳು ಖಂಡಿಸಿವೆ. ಅಲ್ಲದೆ ವಾಸ್ತವಾಂಶವನ್ನು ಜನರ ಮುಂದಿಡಲಾಗಿದೆ.
ಪಾಕಿಸ್ತಾನದ 5 ವಾಯುನೆಲೆಗಳು ಮತ್ತು 2 ರಾಡಾರ್ ಬೇಸ್ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿರುವುದು ದೃಢ.#IndiaStrikesBack #DefenceBriefing #MEAUpdate #IndiaPakistan #OfficialStatement #BreakingNews #RetaliatoryStrike #IndianArmy #ForeignAffairs #NationalSecurityhttps://t.co/onN41XlerG
— TV9 Kannada (@tv9kannada) May 10, 2025
ಭಾರತ-ಪಾಕಿಸ್ತಾನ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೇಕ್ ನ್ಯೂಸ್ಗಳು ಹರಿದಾಡುತ್ತಿವೆ. ಅವುಗಳ ಬಗ್ಗೆ ಮಾಡಲಾಗಿರುವ ಫ್ಯಾಕ್ಟ್ ಚೆಕ್ ಇಲ್ಲಿದೆ.
ವಿವರಗಳಿಗೆ ಓದಿ: ಒಂದಲ್ಲ.. ಎರಡಲ್ಲ..: ಭಾರತ- ಪಾಕಿಸ್ತಾನ ಕುರಿತು ಹರಿದಾಡುತ್ತಿದೆ ನೂರಾರು ಸುಳ್ಳು ಸುದ್ದಿಗಳು
ಭಾರತ ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಕಾರಣ ಕರ್ನಾಟಕದ ಪೊಲೀಸರಿಗೂ ಹೆಚ್ಚುವರಿ ರಜೆ ರದ್ದು ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಕರ್ನಾಟಕ ರಾಜಧಾನಿ ಬೆಂಗಳೂರಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಇಂದು ಸಂಜೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ನಡೆಯಲಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇಂದು ಮತ್ತೆ ಪ್ರಧಾನಿ ನಿವಾಸಕ್ಕೆ ಆಗಮಿಸಿದ್ದಾರೆ. ಅವರು ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ, ವಿದೇಶಾಂಗ ಸಚಿವಾಲಯವು ಭಾರತೀಯ ಸೇನೆಯೊಂದಿಗೆ ಪತ್ರಿಕಾಗೋಷ್ಠಿ ನಡೆಸಲಿದೆ.
ಪಾಕ್ ಶೆಲ್ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹಿರಿಯ ಅಧಿಕಾರಿ ರಾಜ್ ಕುಮಾರ್ ಥಾಪಾ ಮೃತಪಟ್ಟಿದ್ದಾರೆ.ಹಿರಿಯ ಅಧಿಕಾರಿಯ ಸಾವಿಗೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ.
ಪಾಕ್ ಶೆಲ್ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹಿರಿಯ ಅಧಿಕಾರಿ ಸಾವು, ಸಿಎಂ ಒಮರ್ ಅಬ್ದುಲ್ಲಾ ಸಂತಾಪ#national #nationalNews #jammukashmir #omarabdullahhttps://t.co/akZgCyZWWq
— TV9 Kannada (@tv9kannada) May 10, 2025
ಭಾರತವು ತನ್ನ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗ ದಾಳಿ ಮಾಡಿದೆ ಎಂದು ಪಾಕಿಸ್ತಾನ ಸೇನಾ ವಕ್ತಾರರು ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಭಾರತವು ಪಾಕಿಸ್ತಾನದ ಮೇಲೆ ಒಂದರ ನಂತರ ಒಂದರಂತೆ ಒಟ್ಟು 6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಅವರು ಆರೋಪಿಸಿದ್ದಾರೆ. ಈ ದಾಳಿಯಲ್ಲಿ, ರಾವಲ್ಪಿಂಡಿಯ ನೂರ್ ಖಾನ್ ವಾಯುಪಡೆ ನೆಲೆ, ಶೋರ್ಕೋಟ್‌ನ ರಫೀಕಿ ವಾಯುಪಡೆ ನೆಲೆ ಮತ್ತು ಮುರಿಯದ್ ವಾಯುಪಡೆ ನೆಲೆಗಳನ್ನು ಗುರಿಯಾಗಿಸಲಾಗಿತ್ತು. ಆದರೆ, ಭಾರತ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಪಾಕ್ನ ನಾಲ್ಕು ವಾಯುನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿದೆ.
ಪಾಕಿಸ್ತಾನದ ನಾಲ್ಕು ವಾಯುನೆಲೆಗಳ ಮೇಲೆ ದಾಳಿ ನಡೆಸಿದ ಭಾರತ#national #nationalnews #indiaattacks #pakistaniairbaseshttps://t.co/PMb9LVeFRl
— TV9 Kannada (@tv9kannada) May 10, 2025
ಶ್ರೀನಗರದ ಬುದ್ಗಾ-ಬಾರಾಮುಲ್ಲಾಪ್ರದೇಶದಲ್ಲಿ ಎರಡು ಪಾಕಿಸ್ತಾನಿ ಜೆಟ್ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಅವುಗಳಲ್ಲಿದ್ದ ಪೈಲಟ್ಗಳಿಗಾಗಿ ಶೋಧ ನಡೆಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಓದಿ: ಶ್ರೀನಗರ ಬಳಿ ಪಾಕಿಸ್ತಾನದ 2 ಫೈಟರ್ ಜೆಟ್ ಹೊಡೆದುರುಳಿಸಿದ ಭಾರತ
ಕಾಶ್ಮೀರದಲ್ಲಿ ವಾಯು ರಕ್ಷಣಾ ವ್ಯವಸ್ಥೆಯು ಸುಮಾರು 15 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಶುಕ್ರವಾರ ರಾತ್ರಿ ಪಾಕಿಸ್ತಾನ ದಾಳಿ ಯತ್ನದ ನಂತರ, ರಾಜಸ್ಥಾನದ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಜೈಸಲ್ಮೇರ್‌ನಲ್ಲಿ, ಇಡೀ ನಗರದ ದೀಪಗಳು ಆರಿವೆ. ಗಡಿ ಜಿಲ್ಲೆಗಳಲ್ಲಿ ಕರ್ಫ್ಯೂನಂತಹ ಪರಿಸ್ಥಿತಿ ಇದೆ.
ಕಾಶ್ಮೀರ ವಿಭಾಗದ ಕುಪ್ವಾರದಲ್ಲಿ ಗಡಿಯುದ್ದಕ್ಕೂ ಶನಿವಾರ ಬೆಳಗ್ಗೆ ಪಾಕಿಸ್ತಾನ ಭಾರೀ ಶೆಲ್ ದಾಳಿ ಆರಂಭಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ದೇಶದ 28 ವಿಮಾನ ನಿಲ್ದಾಣಗಳನ್ನು ಮೇ 15 ರವರೆಗೆ ಬಂದ್ ಮಾಡಲು ಸೂಚನೆ ನೀಡಿದೆ. ಈ ಹಿಂದೆ ಮೇ 10 ರವರೆಗೆ ಮುಚ್ಚುವುದಾಗಿ ಘೋಷಿಸಲಾಗಿತ್ತು.
Published On - 10:23 am, Sat, 10 May 25