2022ರ ಅಂತ್ಯದ ಹೊತ್ತಿಗೆ 5ಬಿಲಿಯನ್ ಡೋಸ್ ಕೊರೊನಾ ಲಸಿಕೆ ಉತ್ಪಾದನೆ: ಜಿ20 ನಾಯಕರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು
G20 Summit: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆತಿಥ್ಯ ವಹಿಸಿರುವ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಎಂಬ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಹಾಗೇ, ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ನಡೆದ ಜಿ20 ಶೃಂಗಸಭೆ(G20 Summit)ಯ ಮೊದಲ ಸೆಶನ್ಸ್ನಲ್ಲಿ ಮಾತನಾಡುವಾಗ, ಜಾಗತಿಕವಾಗಿ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಭಾರತ ಅಪಾರ ಕೊಡುಗೆಗಳನ್ನು ನೀಡಿದ ವಿಚಾರಕ್ಕೆ ಜಾಸ್ತಿ ಒತ್ತು ಕೊಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ ಶೃಂಗಲಾ ಹೇಳಿದರು. ಕೊರೊನಾ ಸಂದರ್ಭದಲ್ಲಿ ಭಾರತ ಸುಮಾರು 150 ದೇಶಗಳಿಗೆ ವೈದ್ಯಕೀಯ ನೆರವು ನೀಡಿದೆ. ಒಂದು ಭೂಮಿ..ಒಂದು ಆರೋಗ್ಯ (One Earth, One Health) ಎಂಬುದು ನಮ್ಮ ರಾಷ್ಟ್ರದ ಧ್ಯೇಯ ಎಂದು ನರೇಂದ್ರ ಮೋದಿ ಶೃಂಗಸಭೆಯಲ್ಲಿ ಜಿ 20 ನಾಯಕರಿಗೆ ತಿಳಿಸಿದ್ದಾರೆ.
2022ರ ಅಂತ್ಯದ ಹೊತ್ತಿಗೆ 5 ಬಿಲಿಯನ್ ಡೋಸ್ ಕೊವಿಡ್ 19 ಲಸಿಕೆ ಉತ್ಪಾದನೆಗೆ ಭಾರತ ಸಿದ್ಧವಾಗಿದೆ. ಇದನ್ನು ಇಡೀ ಜಗತ್ತಿಗೆ ಅಗತ್ಯವಿದ್ದಲ್ಲಿ ಪೂರೈಸಲಾಗುತ್ತದೆ ಎಂದು ಹೇಳಿರುವ ಪ್ರಧಾನಿ ಮೋದಿ, ಆರ್ಥಿಕ ಚೇತರಿಕೆ ಮತ್ತು ಪೂರೈಕೆ ಸರಪಳಿ ವೈವಿಧ್ಯೀಕರಣದಲ್ಲಿ ಭಾರತವನ್ನು ನಿಮ್ಮ ಸಹಭಾಗಿಯನ್ನಾಗಿ ಮಾಡಿಕೊಳ್ಳಿ ಎಂದು ಜಿ20 ದೇಶಗಳ ನಾಯಕರಿಗೆ ಕರೆ ನೀಡಿದರು. . ಕೊವಿಡ್ 19 ಸಾಂಕ್ರಾಮಿಕದ ಹೊರತಾಗಿಯೂ ಕೂಡ ವಿಶ್ವಾಸಾರ್ಹ ಪೂರೈಕೆಯಲ್ಲಿ ಭಾರತ ನಂಬಿಕಸ್ಥ ಪಾಲುದಾರನಾಗಿದೆ ಎಂಬುದಾಗಿ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಹೇಳಿದ್ದಾರೆಂದು ಹರ್ಷವರ್ಧನ ಶೃಂಗಲಾ ತಿಳಿಸಿದ್ದಾರೆ.
ಇಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆತಿಥ್ಯ ವಹಿಸಿರುವ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಎಂಬ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಹಾಗೇ, ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಅಲ್ಲಿಂದ ಅವರು ಗ್ಲ್ಯಾಸ್ಗೋಗೆ ತೆರಳಿ, ಯುನೈಟೆಡ್ ನೇಶನ್ಸ್ ಫ್ರೇಮ್ವರ್ಕ್ ಕನ್ವೆನ್ಷನ್ನ ಹವಾಮಾನ ಬದಲಾವಣೆ ಕುರಿತಂತೆ ನಡೆಯಲಿರುವ 26ನೇ ಸಮ್ಮೇಳನದಲ್ಲಿ ಭಾಗವಹಿಸುವರು.
ಇದನ್ನೂ ಓದಿ: Puneeth Rajkumar: ಬಾಯಿಯಿಂದ ಪುನೀತ್ ಚಿತ್ರ ಬಿಡಿಸಿ ನಮನ ಸಲ್ಲಿಸಿದ ಕಲಾವಿದ
ಕಂಠೀರವ ಸ್ಟುಡಿಯೋ ಸುತ್ತಮುತ್ತ ಸೆಕ್ಷನ್ 144 ಜಾರಿ: ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್
Published On - 9:39 am, Sun, 31 October 21