ದೇಶದಲ್ಲಿ 24 ಗಂಟೆಯಲ್ಲಿ 60,753 ಹೊಸ ಕೊರೊನಾ ಕೇಸ್ಗಳು ದಾಖಲು; ಈ ಐದು ರಾಜ್ಯಗಳದ್ದೇ ಹೆಚ್ಚಿನ ಪಾಲು
ಮತ್ತೊಂದೆಡೆ ಕೊರೊನಾ ಲಸಿಕೆ ಅಭಿಯಾನ ಕೂಡ ಭರದಿಂದ ಸಾಗುತ್ತಿದೆ. ಇದುವರೆಗೆ 27,23,88,783 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಕಳೆದ 74 ದಿನಗಳಲ್ಲಿ ದೇಶದಲ್ಲಿ ಸಕ್ರಿಯ ಪ್ರಕರಣಗಳು ತುಂಬ ಕಡಿಮೆಯಾಗಿದ್ದು ಸಮಾಧಾನಕಾರ ಸಂಗತಿಯಾಗಿದೆ.
ಕೊವಿಡ್ 2ನೇ ಅಲೆ ಸ್ವಲ್ಪ ಮಟ್ಟಿಗೆ ತಗ್ಗುತ್ತಿದೆ. ಕಳೆದ 24 ಗಂಟೆಯಲ್ಲಿ 60,753 ಹೊಸ ಕೊರೊನಾ ಕೇಸ್ಗಳು ದಾಖಲಾಗಿವೆ ಹಾಗೂ 1647 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಒಂದೇ ದಿನದಲ್ಲಿ 97,743 ಜನರು ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ ಇದುವರೆಗೆ ಗುಣಮುಖರಾದವರ ಸಂಖ್ಯೆ 2,86,78,390ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಕೊರೊನಾ ಚೇತರಿಕೆ ಪ್ರಮಾಣ ಶೇ.96.16ರಷ್ಟಿದೆ.
ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 7,60,019ರಷ್ಟಿದೆ. ಕಳೆದ 24ಗಂಟೆಯಲ್ಲಿ ದಾಖಲಾದ ಹೊಸ ಕೊರೊನಾ ಪ್ರಕರಣಗಳಲ್ಲಿ ಶೇ.69ರಷ್ಟು ಐದು ರಾಜ್ಯಗಳ ಪಾಲಾಗಿದೆ. ಅದರಲ್ಲೂ ಕೇರಳ ಒಂದೇ ರಾಜ್ಯದ ಪಾಲು ಶೇ.18.7ರಷ್ಟಿದೆ. ಸದ್ಯದ ಮಟ್ಟಿಗೆ ದೇಶದಲ್ಲಿ ಒಂದು ದಿನದಲ್ಲಿ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯ ಕೇರಳವೇ ಆಗಿದೆ. ಕೇರಳದಲ್ಲಿ ಕಳೆದ 24ಗಂಟೆಯಲ್ಲಿ 11,361, ಮಹಾರಾಷ್ಟ್ರದಲ್ಲಿ 9,798, ತಮಿಳುನಾಡಿನಲ್ಲಿ 8,633, ಆಂಧ್ರಪ್ರದೇಶದಲ್ಲಿ 6341 ಮತ್ತು ಕರ್ನಾಟಕದಲ್ಲಿ 5783 ಹೊಸ ಕೊರೊನಾ ಕೇಸ್ಗಳು ದಾಖಲಾಗಿದ್ದು, ಈ ಐದು ರಾಜ್ಯಗಳಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಹಾಗೇ, ಒಂದೇ ದಿನದಲ್ಲಿ 1647 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಅದರಲ್ಲಿ 648 ಸಾವು ಮಹಾರಾಷ್ಟ್ರದಿಂದ ಮತ್ತು 287 ತಮಿಳುನಾಡಿನಿಂದ ವರದಿಯಾಗಿದೆ.
ಮತ್ತೊಂದೆಡೆ ಕೊರೊನಾ ಲಸಿಕೆ ಅಭಿಯಾನ ಕೂಡ ಭರದಿಂದ ಸಾಗುತ್ತಿದೆ. ಇದುವರೆಗೆ 27,23,88,783 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಕಳೆದ 74 ದಿನಗಳಲ್ಲಿ ದೇಶದಲ್ಲಿ ಸಕ್ರಿಯ ಪ್ರಕರಣಗಳು ತುಂಬ ಕಡಿಮೆಯಾಗಿದ್ದು ಸಮಾಧಾನಕಾರ ಸಂಗತಿಯಾಗಿದೆ. ಮೊದಲನೇ ಅಲೆ ಕೊರೊನಾ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ಮಾಡಿದ್ದರಿಂದಲೇ ಎರಡನೇ ಅಲೆ ಕೊವಿಡ್ ತುಂಬ ಬಾಧಿಸಿತು. ಇನ್ನು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಐಜಿಪಿ ರಾಘವೇಂದ್ರ ಸುಹಾಸ್ಗೆ ಸಿಐಡಿಯಿಂದ ನೋಟಿಸ್
Published On - 11:13 am, Sat, 19 June 21