India Covid Updates: ಭಾರತದಲ್ಲಿ ಹೊಸದಾಗಿ 10,158 ಮಂದಿಗೆ ಕೊರೊನಾ ಸೋಂಕು, ಪ್ರಕರಣಗಳು ನಿನ್ನೆಗಿಂತ ಶೇ.30ರಷ್ಟು ಹೆಚ್ಚಳ

ಭಾರತದಲ್ಲಿ ಏಪ್ರಿಲ್ 12ಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ 3 ಸಾವಿರಕ್ಕಿಂತ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ 10,150 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ

India Covid Updates: ಭಾರತದಲ್ಲಿ ಹೊಸದಾಗಿ 10,158 ಮಂದಿಗೆ ಕೊರೊನಾ ಸೋಂಕು, ಪ್ರಕರಣಗಳು ನಿನ್ನೆಗಿಂತ ಶೇ.30ರಷ್ಟು ಹೆಚ್ಚಳ
ಕೊರೊನಾವೈರಸ್

Updated on: Apr 13, 2023 | 10:15 AM

ಭಾರತದಲ್ಲಿ ಏಪ್ರಿಲ್ 12ಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ 3 ಸಾವಿರಕ್ಕಿಂತ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ 10,150 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ.ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಸಕ್ರಿಯ ಸೋಂಕಿತರ ಸಂಖ್ಯೆ 44,998 ಇದೆ, ಬುಧವಾರ ದೇಶದಲ್ಲಿ 7,830 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಮಂಗಳವಾರ 5,675 ಮಂದಿ ಸೋಂಕಿಗೆ ತುತ್ತಾಗಿದ್ದರು. ಇದೀಗ ಸೋಂಕು ಬಹುಬೇಗ ಎಲ್ಲ ಕಡೆ ಹರಡುತ್ತಿದೆ.

ದೈನಂದಿನ ಧನಾತ್ಮಕತೆಯ ದರ ಶೇ.4.42ರಷ್ಟಿದ್ದರೆ, ವಾರದ ಧನಾತ್ಮಕತೆಯ ದರ ಶೇ. 4.02ರಷ್ಟಿದೆ. ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ ಶೇ.0.10ಯಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್​-19 ಚೇತರಿಕೆ ದರವು ಶೇ.98.71ರಷ್ಟಿದೆ, ಸಾವಿನ ಪ್ರಮಾಣ ಶೇ.1.19ರಷ್ಟಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,42,10,127ಕ್ಕೆ ಏರಿಕೆಯಾಗಿದೆ.

ಮತ್ತಷ್ಟು ಓದಿ: India Covid Updates: ಭಾರತದಲ್ಲಿ 223 ದಿನಗಳಲ್ಲೇ ಅಧಿಕ ಕೊರೊನಾ ಪ್ರಕರಣಗಳು ಪತ್ತೆ, 7,830 ಮಂದಿಗೆ ಸೋಂಕು

ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ದೆಹಲಿ ಆರೋಗ್ಯ ಇಲಾಖೆ ಹೊರಡಿಸಿದ ದೈನಂದಿನ ಬುಲೆಟಿನ್ ಪ್ರಕಾರ, ರಾಷ್ಟ್ರ ರಾಜಧಾನಿ ಬುಧವಾರ 1,149 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿ ಮಾಡಿದೆ, ಮಂಗಳವಾರದಿಂದ 980 ಪ್ರಕರಣಗಳು ವರದಿಯಾಗಿವೆ.
ದೆಹಲಿ ಆರೋಗ್ಯ ಇಲಾಖೆಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಒಂದು ಸಾವು ವರದಿಯಾಗಿದೆ ಆದರೆ ಸಾವಿಗೆ ಪ್ರಾಥಮಿಕ ಕಾರಣ ಕೋವಿಡ್ ಅಲ್ಲ. ಪಾಸಿಟಿವಿಟಿ ದರವು 23.8 ಪ್ರತಿಶತದಷ್ಟಿದೆ.

ಸೋಮವಾರ, ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಲ್ಲಿ ತುರ್ತು ಕೋವಿಡ್ -19 ಪರಿಸ್ಥಿತಿಯ ಸಿದ್ಧತೆಯನ್ನು ಪರಿಶೀಲಿಸಲು ರಾಷ್ಟ್ರವ್ಯಾಪಿ ಅಣಕು ಡ್ರಿಲ್‌ಗಳನ್ನು ನಡೆಸಲಾಯಿತು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೆಲವು ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್‌ಗಳನ್ನು ಮೇಲ್ವಿಚಾರಣೆ ನಡೆಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us