Coronavirus cases in India ದೇಶದಲ್ಲಿ 14,146 ಹೊಸ ಕೊವಿಡ್ ಪ್ರಕರಣ ಪತ್ತೆ, 144 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Oct 17, 2021 | 10:51 AM

Covid 19: ಕೊರೊನಾವೈರಸ್ ಸಕ್ರಿಯ ಪ್ರಕರಣಗಳು 1,95,846 ಕ್ಕೆ ಇಳಿದಿವೆ ಮತ್ತು ಒಟ್ಟು ಸೋಂಕಿನ ಶೇಕಡಾ 0.57 ರಷ್ಟಿದೆ. ರಾಷ್ಟ್ರೀಯ ಕೊವಿಡ್ ಚೇತರಿಕೆಯ ಪ್ರಮಾಣವು ಶೇಕಡಾ 98.10 ರಷ್ಟು ದಾಖಲಾಗಿದೆ.

Coronavirus cases in India ದೇಶದಲ್ಲಿ 14,146 ಹೊಸ ಕೊವಿಡ್ ಪ್ರಕರಣ ಪತ್ತೆ, 144 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 14,146 ಹೊಸ ಕೊವಿಡ್ -19 (Covid 19)   ಸೋಂಕುಗಳು ವರದಿ ಆಗಿದ್ದು ಒಟ್ಟು ಪ್ರಕರಣಗಳು 3,40,67,719 ಕ್ಕೆ ತಲುಪಿದೆ.  ಸರಿ ಸುಮಾರು  ಏಳು ತಿಂಗಳುಗಳ ಬಳಿಕ ದೇಶದಲ್ಲಿ  ದೈನಂದಿನ  ಸೋಂಕು ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ 144 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 4,52,124 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಸಕ್ರಿಯ ಪ್ರಕರಣಗಳು 1,95,846 ಕ್ಕೆ ಇಳಿದಿವೆ ಮತ್ತು ಒಟ್ಟು ಸೋಂಕಿನ ಶೇಕಡಾ 0.57 ರಷ್ಟಿದೆ. ರಾಷ್ಟ್ರೀಯ ಕೊವಿಡ್ ಚೇತರಿಕೆಯ ಪ್ರಮಾಣವು ಶೇಕಡಾ 98.10 ರಷ್ಟು ದಾಖಲಾಗಿದೆ. ಶನಿವಾರ ಒಟ್ಟು 11,00,123 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೊವಿಡ್ -19 ಪತ್ತೆಗಾಗಿ ನಡೆಸಲಾದ ಒಟ್ಟು ಪರೀಕ್ಷೆಗಳನ್ನು 59,09,35,381 ಕ್ಕೆ ತೆಗೆದುಕೊಂಡಿದೆ. ಗರಿಷ್ಠ ಹೊಸ ಕೊವಿಡ್ -19 ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಕೇರಳವು 7,955 ಪ್ರಕರಣಗಳನ್ನು ಹೊಂದಿದ್ದು, ಮಹಾರಾಷ್ಟ್ರದಲ್ಲಿ 1,553 ಪ್ರಕರಣಗಳು, ತಮಿಳುನಾಡು 1,233 ಪ್ರಕರಣಗಳು, ಮಿಜೋರಾಂ 948 ಪ್ರಕರಣಗಳು ಮತ್ತು ಪಶ್ಚಿಮ ಬಂಗಾಳದಲ್ಲಿ 443 ಪ್ರಕರಣಗಳಿವೆ. ಈ ಐದು ರಾಜ್ಯಗಳು 85.76 ರಷ್ಟು ಹೊಸ ಪ್ರಕರಣಗಳನ್ನು ವರದಿ ಮಾಡಿವೆ. ದೇಶದಲ್ಲಿ ಹೊಸ ಪ್ರಕರಣಗಳಲ್ಲಿ ಕೇರಳದಲ್ಲಿ ಮಾತ್ರ ಶೇ 55.48 ರಷ್ಟು ಪ್ರಕರಣ ದಾಖಲಾಗಿದೆ.

ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 3,34,19,749 ಕ್ಕೆ ಏರಿಕೆಯಾಗಿದೆ, ಆದರೆ ಪ್ರಕರಣದ ಸಾವಿನ ಪ್ರಮಾಣವು 1.33 ಶೇಕಡಾ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ಇದುವರೆಗೆ 97.65 ಕೋಟಿಗೂ ಹೆಚ್ಚು ಕೊವಿಡ್ ಲಸಿಕೆ ಪ್ರಮಾಣವನ್ನು ನೀಡಲಾಗಿದೆ.


ಭಾರತದಲ್ಲಿ ಕೊವಿಡ್ ಪ್ರಕರಣ ಸಂಖ್ಯೆ ಆಗಸ್ಟ್ 7, 2020 ರಂದು 20 ಲಕ್ಷದ ಗಡಿ ದಾಟಿದೆ. ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ. ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ ದಾಟಿದೆ. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ದಾಟಿತು ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿತು. ಭಾರತವು ಮೇ 4 ರಂದು ಎರಡು ಕೋಟಿ ಮತ್ತು ಜೂನ್‌ನಲ್ಲಿ ಮೂರು ಕೋಟಿಗಳ ಮೈಲುಗಲ್ಲನ್ನು ದಾಟಿದೆ.

ಅಂಡಮಾನ್‌ನಲ್ಲಿ ಯಾವುದೇ ಹೊಸ ಕೊವಿಡ್ -19 ಪ್ರಕರಣಗಳಿಲ್ಲ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೊವಿಡ್ ಸಂಖ್ಯೆ 7,641 ನಲ್ಲಿ ಬದಲಾಗದೆ ಉಳಿದಿದೆ, ಭಾನುವಾರ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ ಎಂದು ಆರೋಗ್ಯ ಬುಲೆಟಿನ್ ತಿಳಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈಗ ಒಂಬತ್ತು ಸಕ್ರಿಯ ಪ್ರಕರಣಗಳಿವೆ, 7,503 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಮತ್ತು 129 ರೋಗಿಗಳು ಈವರೆಗೆ ಸೋಂಕಿಗೆ ಬಲಿಯಾಗಿದ್ದಾರೆ.  ಆಡಳಿತವು ಇದುವರೆಗೆ ಕೊವಿಡ್ -19 ಗಾಗಿ 5.76 ಲಕ್ಷ ಮಾದರಿಗಳನ್ನು ಪರೀಕ್ಷಿಸಿದೆ ಮತ್ತು 2.91 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಅವರಲ್ಲಿ 1.7 ಲಕ್ಷ ಜನರಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ ಎಂದು ಅದು ಹೇಳಿದೆ.

ಮಹಾರಾಷ್ಟ್ರ: ಥಾಣೆಯಲ್ಲಿ 154 ಹೊಸ ಪ್ರಕರಣ ದಾಖಲು, ಎರಡು ಸಾವುಗಳು
154 ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಸೇರ್ಪಡೆಯೊಂದಿಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,63,197 ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಈ ಹೊಸ ಪ್ರಕರಣಗಳು ಶನಿವಾರ ವರದಿಯಾಗಿವೆ ಎಂದು ಅವರು ಹೇಳಿದರು. ಇಬ್ಬರ ಸಾವಿನೊಂದಿಗೆ ದ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 11,458 ಕ್ಕೆ ಏರಿದೆ. ಮರಣ ಪ್ರಮಾಣವು ಶೇಕಡಾ 2.03 ಆಗಿದೆ ಎಂದು ಅವರು ಹೇಳಿದರು.
ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ, ಕೊವಿಡ್ -19 ಪ್ರಕರಣಗಳ ಸಂಖ್ಯೆ 1,37,459 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 3,279 ಎಂದು ಪಾಲ್ಘರ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Covid 19 Vaccination Anthem: ಕೊವಿಡ್​ 19 ಲಸಿಕೆ ಗೀತೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ; ಕೈಲಾಶ್​ ಖೇರ್​ ಗಾಯನ

Published On - 10:49 am, Sun, 17 October 21