ಅಕ್ಟೋಬರ್​ 24ಕ್ಕೆ ಮನ್​ ಕೀ ಬಾತ್​; ಸಾರ್ವಜನಿಕರಿಂದ ಅನಿಸಿಕೆ ಆಹ್ವಾನಿಸಿದ ಪ್ರಧಾನಿ ಮೋದಿ

Mann Ki Baat: ಪ್ರಧಾನಿ ನರೇಂದ್ರ ಮೋದಿ ಈ ಬಾರಿ ತಮ್ಮ ಮನ್​ ಕೀ ಬಾತ್​​ನಲ್ಲಿ ಯಾವ ವಿಚಾರವನ್ನು ಮಾತಿಗೆ ಎತ್ತಿಕೊಳ್ಳಬಹುದು ಎಂಬುದು ಕುತೂಹಲ ಹುಟ್ಟಿಸಿದೆ. 

ಅಕ್ಟೋಬರ್​ 24ಕ್ಕೆ ಮನ್​ ಕೀ ಬಾತ್​; ಸಾರ್ವಜನಿಕರಿಂದ ಅನಿಸಿಕೆ ಆಹ್ವಾನಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
TV9 Web
| Updated By: Lakshmi Hegde

Updated on: Oct 16, 2021 | 11:31 PM

ದೆಹಲಿ: ಅಕ್ಟೋಬರ್​ 24ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​​ನ 82ನೇ ಆವೃತ್ತಿಯಲ್ಲಿ ಮಾತನಾಡಲಿದ್ದಾರೆ. ಈ 82ನೇ ಎಪಿಸೋಡ್​​ನ ಮನ್​ ಕೀ ಬಾತ್​​ಗಾಗಿ ವಿಚಾರಗಳು,  ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.  ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳೂ ಈ ಮನ್​ ಕೀ ಬಾತ್​ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಇದರಲ್ಲಿ ಅವರು ರಾಜಕೀಯ ಹೊರತಾಗಿ ಬೇರೆ ವಿಶೇಷ ವಿಷಯಗಳ ಬಗ್ಗೆ ಉಲ್ಲೇಖ ಮಾಡುತ್ತಾರೆ. ಕಳೆದ ಮನ್​ ಕೀ ಬಾತ್​​ನಲ್ಲಿ ನದಿಗಳ ಮಹತ್ವ ತಿಳಿಸಿದ್ದರು. ನದಿಗಳ ದಿನದ ನೆನಪು ಮಾಡಿಕೊಟ್ಟಿದ್ದರು. ಹಾಗೇ ಟ್ವೀಟ್ ಮಾಡಿ, ಈ ತಿಂಗಳ ಮನ್​ ಕೀ ಬಾತ್​​ಗಾಗಿ ಅನಿಸಿಕೆ ಹಂಚಿಕೊಳ್ಳಲು ಸಾರ್ವಜನಿಕರಿಗೆ ತಿಳಿಸಿದ್ದಾರೆ. 

ದೇಶದಲ್ಲಿ ಕೊವಿಡ್ 19 ಲಸಿಕೆ ಅಭಿಯಾನ ಭರ್ಜರಿಯಾಗಿ ಸಾಗುತ್ತಿದೆ. ಮುಂದಿನ ವಾರ 100 ಕೋಟಿ ಗಡಿಯನ್ನೂ ದಾಟಿ ದಾಖಲೆ ನಿರ್ಮಿಸಲಿದೆ. ಇದರ ಮಧ್ಯೆ ದೇಶದಲ್ಲಿ ಕೊರೊನಾ ಸೋಂಕಿನ ಪ್ರಸರಣವೂ ತುಸು ಕಡಿಮೆಯಾಗಿದ್ದು, ಕೊವಿಡ್​ 19 ಶಿಷ್ಟಾಚಾರಗಳ ಪಾಲನೆಯಲ್ಲೂ ಸಡಿಲತೆ ಕಂಡುಬಂದಿದೆ. ಹೀಗೆ ಸುಮಾರು ವಿಷಯಗಳಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಬಾರಿ ತಮ್ಮ ಮನ್​ ಕೀ ಬಾತ್​​ನಲ್ಲಿ ಯಾವ ವಿಚಾರವನ್ನು ಮಾತಿಗೆ ಎತ್ತಿಕೊಳ್ಳಬಹುದು ಎಂಬುದು ಕುತೂಹಲ ಹುಟ್ಟಿಸಿದೆ.

ಈ ಬಗ್ಗೆ ಪ್ರಧಾನಮಂತ್ರಿ ಕಚೇರಿ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. ನರೇಂದ್ರ ಮೋದಿಯವರು ಇದೇ ಭಾನುವಾರ ಅಂದರೆ ಅಕ್ಟೋಬರ್​ 24ರಂದು 82ನೇ ಎಪಿಸೋಡ್​​ನ ಮನ್​ ಕೀ ಬಾತ್​ ನಡೆಸಿಕೊಡಲಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರೂ ತಮ್ಮ ಅನಿಸಿಕೆ, ಅಭಿಪ್ರಾಯ, ವಿಚಾರಗಳನ್ನು ನಮೋ ಆ್ಯಪ್​, ಮೈ ಗವ್​ (NaMo App and My Gov)ಮೂಲಕ ಹಂಚಿಕೊಳ್ಳಬಹುದು. ಇಲ್ಲದೆ ಇದ್ದರೆ ತಮ್ಮ ಅನಿಸಿಕೆಯನ್ನು ರೆಕಾರ್ಡ್​ ಮಾಡಿ 1800-11-7800ಕ್ಕೆ ಕಳಿಸಬಹುದು ಎಂದು ಹೇಳಿದೆ.

ಇದನ್ನೂ ಓದಿ: Covid 19 Vaccination Anthem: ಕೊವಿಡ್​ 19 ಲಸಿಕೆ ಗೀತೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ; ಕೈಲಾಶ್​ ಖೇರ್​ ಗಾಯನ

ಐಪಿಎಲ್‌ನಲ್ಲಿ ಮಿಂಚಿದ ವೆಂಕಟೇಶ್ ಅಯ್ಯರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ತೊಡಕಾಗಿರುವ 3 ಅಂಶಗಳಿವು

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ