ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್​ ಅಲಿ ಶಾ ಗೀಲಾನಿ ಮೊಮ್ಮಗ ಸರ್ಕಾರಿ ಹುದ್ದೆಯಿಂದ ವಜಾ

ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್​ ಅಲಿ ಶಾ ಗೀಲಾನಿ ಮೊಮ್ಮಗ ಸರ್ಕಾರಿ ಹುದ್ದೆಯಿಂದ ವಜಾ
ಸೈಯದ್​ ಅಲಿ ಗೀಲಾನಿ

ಅಲ್ತಫ್​ ಅಹ್ಮದ್ ಶಾ ಅಲಿಯಾಸ್​ ಅಲ್ತಫ್ ಫಾಂಟೂಶ್​ ಅವರ ಪುತ್ರ ಅನೀಸ್​ ಉಲ್​ ಇಸ್ಲಾಮ್​ ಸರ್ಕಾರಿ ಸ್ವಾಮ್ಯದ ಕನ್ವೆನ್ಶನ್​ ಕೇಂದ್ರದಲ್ಲಿ ಸಂಶೋಧನಾ ಅಧಿಕಾರಿ (Research Officer)ಯಾಗಿ ಕೆಲಸ ಮಾಡುತ್ತಿದ್ದರು.

TV9kannada Web Team

| Edited By: Lakshmi Hegde

Oct 16, 2021 | 11:32 PM

ಶ್ರೀನಗರ: ಇತ್ತೀಚೆಗೆ ಮೃತಪಟ್ಟ ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್​ ಅಲಿ ಶಾ ಗೀಲಾನಿ (Syed Ali Geelani) ಅವರ ಮೊಮ್ಮಗ ಅನೀಸ್​ ಉಲ್​ ಇಸ್ಲಾಮ್​​ ಅವರನ್ನು ಸರ್ಕಾರಿ ಹುದ್ದೆಯಿಂದ ವಜಾಗೊಳಿಸಿ ಆದೇಶ ನೀಡಲಾಗಿದೆ. ಜಮ್ಮು-ಕಾಶ್ಮಿರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಅವರು ನೆರವು ನೀಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.  

ಅಲ್ತಫ್​ ಅಹ್ಮದ್ ಶಾ ಅಲಿಯಾಸ್​ ಅಲ್ತಫ್ ಫಾಂಟೂಶ್​ ಅವರ ಪುತ್ರ ಅನೀಸ್​ ಉಲ್​ ಇಸ್ಲಾಮ್​ ಸರ್ಕಾರಿ ಸ್ವಾಮ್ಯದ ಕನ್ವೆನ್ಶನ್​ ಕೇಂದ್ರದಲ್ಲಿ ಸಂಶೋಧನಾ ಅಧಿಕಾರಿ (Research Officer)ಯಾಗಿ ಕೆಲಸ ಮಾಡುತ್ತಿದ್ದರು. 2016ರಲ್ಲಿ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿದ್ದಾಗಿನಂದಲೂ ಅವರು ಈ ಹುದ್ದೆಯಲ್ಲಿ ಇದ್ದರು.  ಇದೀಗ ಸಂವಿಧಾನದ ಕಲಂ 311 (2) (ಸಿ) ಅಡಿಯಲ್ಲಿ ಬರುವ ವಿಶೇಷ ನಿಬಂಧನೆಗಳ ಅನುಸಾರ ಅವರನ್ನು ವಜಾಗೊಳಿಸಲಾಗಿದೆ.

ಇನ್ನು ಗೀಲಾನಿ ಸೆಪ್ಟೆಂಬರ್​​ನಲ್ಲಿ ಮೃತಪಟ್ಟಿದ್ದಾರೆ. ಅವರು 30 ವರ್ಷಗಳಿಂದ ಕಾಶ್ಮೀರ ಪ್ರತ್ಯೇಕತಾವಾದ ಹೋರಾಟಗಾರರಾಗಿದ್ದರು. ಪಾಕ್​ಗೆ ಬೆಂಬಲ ನೀಡುತ್ತಿದ್ದರು. ಅವರು ಮೃತಪಟ್ಟಾಗ ಮೃತದೇಹದ ಮೇಲೆ ಕುಟುಂಬಸ್ಥರು ಪಾಕಿಸ್ತಾನದ ಧ್ವಜ ಹೊದೆಸಿದ್ದು ವಿವಾದ ಸೃಷ್ಟಿಸಿತ್ತು. ಕುಟುಂಬಸ್ಥರ ವಿರುದ್ಧ ಪೊಲೀಸರು ಎಫ್​ಐಆರ್​ ಕೂಡ ದಾಖಲಿಸಿದ್ದರು.

ಇದನ್ನೂ ಓದಿ: ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಸೌಹಾರ್ದತೆ ನೆಲೆಗೊಂಡಿರಬೇಕಾದರೆ ಸದಸ್ಯರ ನಡುವೆ ಸಂವಾದ ಅತಿ ಮುಖ್ಯ: ಡಾ ಸೌಜನ್ಯ ವಶಿಷ್ಠ

ಆರೋಗ್ಯದ ಬಗ್ಗೆ ಮಾಹಿತಿ ನೀಡುವ ನಾಯ್ಸ್ ಕಲರ್​ಫಿಟ್​ ಪ್ರೋ ಸ್ಮಾರ್ಟ್ ವಾಚ್ ಈಗ ಕಡಿಮೆ ಬೆಲೆಗೆ ಲಭ್ಯ!

Follow us on

Related Stories

Most Read Stories

Click on your DTH Provider to Add TV9 Kannada