AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಿಂದ ಹೊರಟಿದ್ದ ಟ್ರಕ್​ ಮಧ್ಯಪ್ರದೇಶದಲ್ಲಿ ಲೂಟಿ; 7 ಕೋಟಿ ರೂ.ಮೌಲ್ಯದ ಮೊಬೈಲ್​ಗಳು ದುಷ್ಕರ್ಮಿಗಳ ಪಾಲು

ಒಪ್ಪೋ ಕಂಪನಿ ಮ್ಯಾನೇಜರ್​ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರದೇಶದ ಪೊಲೀಸ್​ ಠಾಣೆಯಲ್ಲಿ ದೂರು ನೀಡಲು ಪ್ರಯತ್ನಿಸಿದರು. ಆದರೆ ಘಟನೆ ನಡೆದದ್ದು ಮಥುರಾ ಗಡಿಯ ಬಳಿ ಆಗಿದ್ದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಿಂದ ಹೊರಟಿದ್ದ ಟ್ರಕ್​ ಮಧ್ಯಪ್ರದೇಶದಲ್ಲಿ ಲೂಟಿ; 7 ಕೋಟಿ ರೂ.ಮೌಲ್ಯದ ಮೊಬೈಲ್​ಗಳು ದುಷ್ಕರ್ಮಿಗಳ ಪಾಲು
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Oct 17, 2021 | 11:50 AM

Share

ಮಥುರಾ: ಸುಮಾರು 7 ಕೋಟಿ ರೂಪಾಯಿ ಮೌಲ್ಯದ 9 ಸಾವಿರ ಮೊಬೈಲ್​ ಫೋನ್​​ಗಳನ್ನು ಒಯ್ಯುತ್ತಿದ್ದ ಬೆಂಗಳೂರು ಮೂಲದ ಟ್ರಕ್​​​ನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆ. ಈ ಬೆಂಗಳೂರಿನ ಟ್ರಕ್​​​ನ್ನು ಮಧ್ಯಪ್ರದೇಶದ ಶಿಯೋಪುರ್​​ ಎಂಬಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿ, ಆತನನ್ನು ವಾಹನದಿಂದ ಎತ್ತಿ ಬಿಸಾಕಿದ್ದಾರೆ. ಬಳಿಕ ಲಾರಿಯನ್ನು ಲೂಟಿ ಮಾಡಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದರೂ ಉತ್ತರಪ್ರದೇಶದ ಮಥುರಾದಲ್ಲಿ ಪ್ರಕರಣ ದಾಖಲಾಗಿದೆ.  

ಇನ್ನು ಪ್ರಕರಣದ ಬಗ್ಗೆ ಮಥುರಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಟಂಡ್​ ಪ್ರಕಾಶ್​ ಸಿಂಗ್​ ವಿವರಿಸಿದ್ದಾರೆ. ಲಾರಿ ಲೂಟಿಯಾಗಿರುವ ಬಗ್ಗೆ ಒಪ್ಪೊ ಮೊಬೈಲ್​ (Oppo Mobile) ಕಂಪನಿಯ ಮ್ಯಾನೇಜರ್​ ಸಚಿನ್​ ಮಾನವ್​ ಎಂಬುವರು ದೂರು ನೀಡಿದ್ದಾರೆ. ಲಾರಿ ಚಾಲಕ ಮನೀಶ್ ಯಾದವ್​ ಉತ್ತರಪ್ರದೇಶದ ಫಾರೂಖಾಬಾದ್​ ಜಿಲ್ಲೆಯವನು. ಅಕ್ಟೋಬರ್​ 5ರಂದು ಮುಂಜಾನೆ ಬೆಂಗಳೂರಿನಿಂದ ಸುಮಾರು 9 ಸಾವಿರ ಮೊಬೈಲ್​​ ಫೋನ್​​ಗಳನ್ನು ಟ್ರಕ್​​ನಲ್ಲಿ ತುಂಬಿಕೊಂಡು ನೊಯ್ಡಾಕ್ಕೆ ಹೊರಟಿದ್ದ. ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿರುವ ಬೈಪಾಸ್​ ಬಳಿ ಈತನ ಲಾರಿಗೆ ಇಬ್ಬರು ಪ್ರಯಾಣಿಕರು ಹತ್ತಿದ್ದರು.  ಲಾರಿ ಝಾನ್ಸಿಯ ಬಬಿನಾ ಟೋಲ್​ ದಾಟುತ್ತಿದ್ದಂತೆ ಈ ಪ್ರಯಾಣಿಕರ ಸೋಗಿನಲ್ಲಿ ಲಾರಿ ಹತ್ತಿದ್ದ ಇಬ್ಬರು ಚಾಲಕನಿಗೆ ಥಳಿಸಲು ಶುರು ಮಾಡಿದರು. ನಂತರ ಆತನನ್ನು ಲಾರಿಯಿಂದ ಎತ್ತಿ ಬಿಸಾಕಿದ್ದಾರೆ. ಟ್ರಕ್​​​ನೊಂದಿಗೆ ಪರಾರಿಯಾಗಿದ್ದಾರೆ. ಅಂದಹಾಗೆ  ಈ ಟ್ರಕ್​​ ಶಿಯೋಪುರ್​​​ನ ಮನ್​​ಪುರ್​​ನಲ್ಲಿ ಸಿಕ್ಕಿದ್ದು, ಖಾಲಿಯಾಗಿತ್ತು. ಅದರಲ್ಲಿರುವ ಮೊಬೈಲ್​​​ಗಳು ಯಾವುದೂ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಒಪ್ಪೋ ಕಂಪನಿ ಮ್ಯಾನೇಜರ್​ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರದೇಶದ ಪೊಲೀಸ್​ ಠಾಣೆಯಲ್ಲಿ ದೂರು ನೀಡಲು ಪ್ರಯತ್ನಿಸಿದರು. ಆದರೆ ಘಟನೆ ನಡೆದದ್ದು ಮಥುರಾ ಗಡಿಯ ಬಳಿ ಆಗಿದ್ದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಅವರು ಹೋಗಿ ಮಥುರಾ ಠಾಣೆಯಲ್ಲಿ ದೂರು ನೀಡಿದ್ದಾರೆ.  ಸದ್ಯ ತನಿಖೆ ನಡೆಸಲು ಪೊಲೀಸ್​ ತಂಡವನ್ನು ರಚಿಸಲಾಗಿದೆ. ಮಧ್ಯಪ್ರದೇಶ ಪೊಲೀಸರೂ ಕೂಡ ಕಾರ್ಯಾಚರಣೆಗೆ ಇಳಿದಿದ್ದಾರೆ. ಸಿಸಿಟಿವಿ ಫೂಟೇಜ್​​​ಗಳನ್ನು ಪರಿಶೀಲಿಸಲಾಗುತ್ತಿದ್ದು, ದುಷ್ಕರ್ಮಿಗಳ ಲೊಕೇಶನ್​ ಪತ್ತೆ ಕಾರ್ಯವೂ ನಡೆಯುತ್ತಿದೆ.

ಇದನ್ನೂ ಓದಿ: Salaga: ನಿರೀಕ್ಷೆಗೂ ಮೀರಿ ‘ಸಲಗ’ ಸಕ್ಸಸ್​; ಹಾಗಾದ್ರೆ ಈವರೆಗಿನ ಕಲೆಕ್ಷನ್​ ಲೆಕ್ಕ ಹೇಳೋರು ಯಾರು?

ತುಮಕೂರಿನಲ್ಲಿ ಬಸ್-ಗೂಡ್ಸ್ ಮಧ್ಯೆ ಭೀಕರ ಅಪಘಾತ! ಸ್ಥಳದಲ್ಲೇ ನಾಲ್ವರ ಸಾವು

Published On - 11:47 am, Sun, 17 October 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?