Parliament Special Session: 2047ರ ವೇಳೆಗೆ ಭಾರತ ಅಭಿವೃದ್ಧಿ ರಾಷ್ಟ್ರವಾಗಬೇಕು: ಪ್ರಧಾನಿ ಮೋದಿ

ವಿಶೇಷ ಸಂಸತ್​​ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದೆ ಪ್ರಧಾನಿ ಮೋದಿ. ಭಾರತದ ಚಂದ್ರಯಾನ-3 ನಮ್ಮ ತಿರಂಗವನ್ನು ಎತ್ತಿ ಹಿಡಿದಿದೆ. ಶಿವಶಕ್ತಿ ಪಾಯಿಂಟ್ ಹೊಸ ಸ್ಫೂರ್ತಿಯ ಕೇಂದ್ರವಾಗಿದೆ. ಇದು ನಮ್ಮಲ್ಲಿ ಹೆಮ್ಮೆಯನ್ನು ತುಂಬುತ್ತಿದೆ. ಇಂತಹ ಸಾಧನೆಯನ್ನು ಮಾಡಿದಾಗ, ಜಗತ್ತು ನಮ್ಮ ಆಧುನಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಥ್​​ ನೀಡುತ್ತದೆ. ಈ ಸಾಮರ್ಥ್ಯವು ಪ್ರಪಂಚದ ಮುಂದೆ ಇಟ್ಟಾಗ ಹಲವಾರು ಅವಕಾಶಗಳು ಭಾರತದ ಬಾಗಿಲುಗಳನ್ನು ತಟ್ಟುತ್ತವೆ ಎಂದು ಹೇಳಿದರು.

Parliament Special Session: 2047ರ ವೇಳೆಗೆ ಭಾರತ ಅಭಿವೃದ್ಧಿ ರಾಷ್ಟ್ರವಾಗಬೇಕು: ಪ್ರಧಾನಿ ಮೋದಿ
ಸಾಂದರ್ಭಿಕ ಚಿತ್ರ
Follow us
|

Updated on:Sep 18, 2023 | 11:07 AM

ದೆಹಲಿ, ಸೆ.18: ಇಂದಿನಿಂದ ಐದು ದಿನಗಳ ಕಾಲ ಸಂಸತ್​​ ವಿಶೇಷ ಅಧಿವೇಶನ (Parliament Special Session) ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು 11.00 ಗಂಟೆಗೆ ಸಂಸತ್​​ನಲ್ಲಿ ಭಾಷಣ ಮಾಡಲಿದ್ದಾರೆ. ಈಗಾಗಲೇ ಸಂಸತ್​​​ ಅಧಿವೇಶಕ್ಕೆ ಆಗಮಿಸಿದ ಮೋದಿ, ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಭಾರತದ ಚಂದ್ರಯಾನ-3 ನಮ್ಮ ತಿರಂಗವನ್ನು ಎತ್ತಿ ಹಿಡಿದಿದೆ. ಶಿವಶಕ್ತಿ ಪಾಯಿಂಟ್ ಹೊಸ ಸ್ಫೂರ್ತಿಯ ಕೇಂದ್ರವಾಗಿದೆ. ಇದು ನಮ್ಮಲ್ಲಿ ಹೆಮ್ಮೆಯನ್ನು ತುಂಬುತ್ತಿದೆ. ಇಂತಹ ಸಾಧನೆಯನ್ನು ಮಾಡಿದಾಗ, ಜಗತ್ತು ನಮ್ಮ ಆಧುನಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಥ್​​ ನೀಡುತ್ತದೆ. ಈ ಸಾಮರ್ಥ್ಯವು ಪ್ರಪಂಚದ ಮುಂದೆ ಇಟ್ಟಾಗ ಹಲವಾರು ಅವಕಾಶಗಳು ಭಾರತದ ಬಾಗಿಲುಗಳನ್ನು ತಟ್ಟುತ್ತವೆ ಎಂದು ಹೇಳಿದರು.

ಇನ್ನು ಮೋದಿ ಅವರು ಜಿ-20 ಯಶಸ್ವಿನ ಬಗ್ಗೆಯು ಮಾಧ್ಯಮಗಳೊಂದಿದೆ ಮಾತನಾಡಿದರು. ಜಿ-20 ಶೃಂಗಸಭೆಯು ಜಾಗತಿಕ ದಕ್ಷಿಣದ ಧ್ವನಿಯಾಗಿದೆ. ಈ ಸಭೆಯಲ್ಲಿ ಆಫ್ರಿಕನ್ ಯೂನಿಯನ್​ ಜಿ-20ಯಲ್ಲಿ ಖಾಯಂ ಸದಸ್ಯತ್ವ ಪಡೆದಿದೆ. ಇದೆಲ್ಲವೂ ಭಾರತದ ಉಜ್ವಲ ಭವಿಷ್ಯದ ಸಂಕೇತವಾಗಿದೆ. ಇನ್ನು ನಿನ್ನೆ ‘ಯಶೋಭೂಮಿ’ ಅಂತರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಇಂದಿನಿಂದ ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ

ಇಂದು ನಡೆಯುವ ಅಧಿವೇಶನ ಚಿಕ್ಕದ್ದು, ಆದರೆ ಇದರ ಸಮಯ ದೊಡ್ಡದು, ಇದು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿವೇಶನವಾಗಿದೆ. ಈ ಅಧಿವೇಶನ ಒಂದು ವಿಶೇಷತೆ ಎಂದರೆ 75 ವರ್ಷಗಳ ಪ್ರಯಾಣ. ಇನ್ನು ಈ ಹೊಸ ಗಮ್ಯಸ್ಥಾನ ಈ ಪ್ರಯಾಣವನ್ನು ಮಾಡಲಿದೆ. ಅಂದರೆ ಹೊಸ ಸಂಸತ್​​ ಭವನಕ್ಕೆ ಹೋಗುತ್ತಿದೆ. 2047ರ ವೇಳೆ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಮಾಡಬೇಕು. ಇದಕ್ಕಾಗಿ ಮುಂದೆ ಎಲ್ಲ ನಿರ್ಧಾರವನ್ನು ಹೊಸ ಸಂಸತ್​​ ಭವನದಲ್ಲಿ ತೆಗೆದುಕೊಳ್ಳಲಾಗುತ್ತದೆ.

ನಾಳೆ ಗಣೇಶ ಚತುರ್ಥಿ, ಈ ಶುಭ ದಿನದಂದು ನಮ್ಮ ಎಲ್ಲ ವಿಚಾರಗಳ ಜತೆಗೆ ಹೊಸ ಸಂಸತ್ತಿಗೆ ತೆರಳಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಣಪತಿಯನ್ನು ವಿಘ್ನಹರ್ತ ಎಂದೂ ಕರೆಯಲಾಗುತ್ತದೆ, ಈಗ ದೇಶದ ಅಭಿವೃದ್ಧಿಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ, ನಿರ್ವಿಘ್ನವಾಗಿ ಭಾರತದ ಎಲ್ಲ ಸಂಕಲ್ಪ ಪರಿಪೂರ್ಣಗೊಳ್ಳಬೇಕು. ಸಂಸತ್ತಿನ ಈ ಅಧಿವೇಶನವು ಚಿಕ್ಕದಾಗಿರಬಹುದು, ಆದರೆ ಇದು ಐತಿಹಾಸಿಕವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:04 am, Mon, 18 September 23