Har Ghar Dastak ಮನೆ ಮನೆಗೆ ಕೊವಿಡ್ ಲಸಿಕೆ ಅಭಿಯಾನ ‘ಹರ್ ಘರ್ ದಸ್ತಕ್’ ಇಂದು ಆರಂಭ
ಒಂದು ತಿಂಗಳ ಅವಧಿಯ ಮನೆ-ಮನೆಗೆ ಲಸಿಕೆ ಅಭಿಯಾನವಾದ ಹರ್ ಘರ್ ದಸ್ತಕ್ ಕಳಪೆ-ಕಾರ್ಯನಿರ್ವಹಣೆಯ ಜಿಲ್ಲೆಗಳಲ್ಲಿ ಇಡೀ ಜನಸಂಖ್ಯೆಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದೆ.
ದೆಹಲಿ: ಕೇಂದ್ರ ಸರ್ಕಾರವು ಮಂಗಳವಾರ ಧನ್ವಂತರಿ ದಿವಸ್ ಸಂದರ್ಭದಲ್ಲಿ ಕೊರೊನಾವೈರಸ್ ಕಾಯಿಲೆ (Covid -19) ವಿರುದ್ಧ ‘ಹರ್ ಘರ್ ದಸ್ತಕ್’ (Har Ghar Dastak) ಮೆಗಾ-ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಿದೆ. ಒಂದು ತಿಂಗಳ ಅವಧಿಯ ಮನೆ-ಮನೆಗೆ ಲಸಿಕೆ ಅಭಿಯಾನವು ಕಳಪೆ-ಕಾರ್ಯನಿರ್ವಹಣೆಯ ಜಿಲ್ಲೆಗಳಲ್ಲಿ ಇಡೀ ಜನಸಂಖ್ಯೆಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದೆ. ಪ್ರಸ್ತುತ ಯುನೈಟೆಡ್ ಕಿಂಗ್‌ಡಂನ ಗ್ಲಾಸ್ಗೋದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೋಪ್ 26 (COP26) ಹವಾಮಾನ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಭಾರತಕ್ಕೆ ಹಿಂದಿರುಗಿದ ತಕ್ಷಣ ಕೊವಿಡ್ -19 ಪರಿಶೀಲನಾ ಸಭೆಯನ್ನು ನಡೆಸಲು ಸಿದ್ಧರಾಗಿದ್ದಾರೆ. ವರದಿಗಳ ಪ್ರಕಾರ ಕರೋನವೈರಸ್ ಪರಿಶೀಲನಾ ಸಭೆಯು ಕಡಿಮೆ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಗಳ ಮೇಲೆ ಕೇಂದ್ರೀಕರಿಸುತ್ತದೆ. ಮೊದಲ ಡೋಸ್‌ನಲ್ಲಿ ಶೇಕಡಾ 50 ಕ್ಕಿಂತ ಕಡಿಮೆ ಕವರೇಜ್ ಹೊಂದಿರುವ ಪ್ರದೇಶಗಳು ಮತ್ತು ಎರಡನೇ ಡೋಸ್‌ನಲ್ಲಿ ಕಡಿಮೆ ಕವರೇಜ್ ಇರುವ ಪ್ರದೇಶಗಳಿರುತ್ತವೆ.
ಕಳೆದ ವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಕೊವಿಡ್ -19 ಪರಿಶೀಲನಾ ಸಭೆಯ ನಂತರ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಲಸಿಕೆ ಅಭಿಯಾನವನ್ನು ಹೆಚ್ಚಿಸಲು ‘ಹರ್ ಘರ್ ದಸ್ತಕ್’ ಅಭಿಯಾನದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. “ನಾವು ‘ಹರ್ ಘರ್ ದಸ್ತಕ್’ ಎಂಬ ಮೆಗಾ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಲಿದ್ದೇವೆ. ಮುಂದಿನ ಒಂದು ತಿಂಗಳ ಕಾಲ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಎರಡನೇ ಡೋಸ್‌ಗೆ ಅರ್ಹರಾದವರಿಗೆ ಮತ್ತು ಮೊದಲ ಡೋಸ್ ತೆಗೆದುಕೊಳ್ಳದವರಿಗೆ ಲಸಿಕೆ ಹಾಕಲು ನಾವು ನಿರ್ಧರಿಸಿದ್ದೇವೆ ”ಎಂದು ಮಾಂಡವಿಯಾ ಹೇಳಿದರು.
The government will launch door-to-door COVID-19 vaccination drive – #HarGharDastak to boost the second dose vaccination. Let’s come together & #Unite2FightCorona! pic.twitter.com/uFqfCW2NIL
— MyGovIndia (@mygovindia) November 2, 2021
ಕೇಂದ್ರ ಸಚಿವರ ಪ್ರಕಾರ ಭಾರತದಲ್ಲಿ ಅರ್ಹ ಜನಸಂಖ್ಯೆಯ 77 ಪ್ರತಿಶತದಷ್ಟು ಜನರು ಕೊವಿಡ್ -19 ವಿರುದ್ಧ ಮೊದಲ ಡೋಸ್ ಲಸಿಕೆ ಹಾಕಿದ್ದಾರೆ ಮತ್ತು 32 ಪ್ರತಿಶತ ಜನರು ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. “10 ಕೋಟಿಗೂ ಹೆಚ್ಚು ಜನರು ಎರಡನೇ ಡೋಸ್ ಲಸಿಕೆ ತೆಗೆದುಕೊಂಡಿಲ್ಲ”. “ಎರಡನೇ ಡೋಸ್‌ಗೆ ಅರ್ಹರಾಗಿರುವ ಜನರು ಲಸಿಕೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ವ್ಯಾಕ್ಸಿನೇಷನ್‌ನ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಅಗತ್ಯವನ್ನು ಎತ್ತಿಹಿಡಿದ ಅವರು, ನಿಗದಿತ ಮಧ್ಯಂತರ ನಂತರ ಎರಡನೇ ಡೋಸ್ ತೆಗೆದುಕೊಳ್ಳದ 10.34 ಕೋಟಿಗೂ ಹೆಚ್ಚು ಜನರು ದೇಶದಲ್ಲಿದ್ದಾರೆ ಎಂದು ಹೇಳಿದರು. ಹಲವಾರು ದೇಶಗಳು ಹೆಚ್ಚಿನ ಸಂಖ್ಯೆಯ ಕೊವಿಡ್ -19 ಪ್ರಕರಣಗಳನ್ನು ವರದಿ ಮಾಡುವುದರಿಂದ, ತೀವ್ರತೆಯನ್ನು ಕಡಿಮೆ ಮಾಡಲು ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ನಿರ್ಣಾಯಕವಾಗುತ್ತದೆ.
ಇದನ್ನೂ ಓದಿ: Coronavirus cases in India ದೇಶದಲ್ಲಿ 10,423 ಹೊಸ ಕೊವಿಡ್ ಪ್ರಕರಣ ಪತ್ತೆ, 443 ಮಂದಿ ಸಾವು
Published On - 11:17 am, Tue, 2 November 21