2026ರ ಮಾರ್ಚ್ ವೇಳೆಗೆ ಭಾರತ ನಕ್ಸಲಿಸಂನಿಂದ ಮುಕ್ತ; ಕೇರಳದಲ್ಲಿ ಅಮಿತ್ ಶಾ

ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ. ಬಿಜೆಪಿ ಇಲ್ಲದೆ 'ವಿಕಸಿತ ಕೇರಳ' ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಪುತ್ತರಿಕಂಡಂ ಮೈದಾನದಲ್ಲಿ ನಡೆದ ವಿಕಸಿತ್ ಕೇರಳಂ ಸಮ್ಮೇಳನದಲ್ಲಿ ಮಾತನಾಡಿದ ಅಮಿತ್ ಶಾ, ಕೇರಳದ ಅಭಿವೃದ್ಧಿಯು ಅಭಿವೃದ್ಧಿ ಹೊಂದಿದ ಭಾರತದ (ವಿಕಸಿತ್ ಭಾರತ) ದೃಷ್ಟಿಕೋನದ ಅವಿಭಾಜ್ಯ ಅಂಗವಾಗಿದೆ ಎಂದು ಒತ್ತಿ ಹೇಳಿದರು.

2026ರ ಮಾರ್ಚ್ ವೇಳೆಗೆ ಭಾರತ ನಕ್ಸಲಿಸಂನಿಂದ ಮುಕ್ತ; ಕೇರಳದಲ್ಲಿ ಅಮಿತ್ ಶಾ
Amit Shah

Updated on: Jul 12, 2025 | 5:29 PM

ತಿರುವನಂತಪುರಂ, ಜುಲೈ 12: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಾಗ್ದಾಳಿ ನಡೆಸಿದ್ದಾರೆ. ಈ ಪಕ್ಷ ಕೇರಳದ ಅಭಿವೃದ್ಧಿಗಿಂತ ಕೇಡರ್ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇಡರ್‌ಗಿಂತ ವಿಕಸಿತ ಕೇರಳ (ಅಭಿವೃದ್ಧಿ ಹೊಂದಿದ ಕೇರಳ) ಅನ್ನು ಆಯ್ಕೆ ಮಾಡಿತು. ಆದರೆ 2026ರ ಮಾರ್ಚ್ 31ರ ವೇಳೆಗೆ ಭಾರತ ನಕ್ಸಲಿಸಂ ಮುಕ್ತವಾಗಲಿದೆ ಎಂದು ಭರವಸೆ ನೀಡಿತು ಎಂದಿದ್ದಾರೆ.

“ಬಿಜೆಪಿ ಮತ್ತು ಸಿಪಿಐ(ಎಂ) ಎರಡೂ ಕೇಡರ್ ಆಧಾರಿತ ಪಕ್ಷಗಳಾಗಿವೆ. ಆದರೆ, ಎರಡರ ನಡುವೆ ಭಾರೀ ವ್ಯತ್ಯಾಸವಿದೆ. ಕೇರಳದಲ್ಲಿ ರಾಜ್ಯದ ಅಭಿವೃದ್ಧಿಗಿಂತ ಕೇಡರ್ ಕಲ್ಯಾಣ ಮಹತ್ವದ್ದಾಗಿದೆ. ಆದರೆ ಬಿಜೆಪಿಗೆ ಕೇಡರ್‌ಗಿಂತ ವಿಕಸಿತ ಕೇರಳ ಮುಖ್ಯ” ಎಂದು ಅವರು ತಿರುವನಂತಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಅಣ್ಣಾಮಲೈಗೆ ತಮಿಳುನಾಡಿನ ಜೊತೆ ರಾಷ್ಟ್ರೀಯ ಹುದ್ದೆ ನೀಡುತ್ತೇವೆ; ಅಮಿತ್ ಶಾ

ಕೇರಳದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ 3 ಪ್ರಮುಖ ದೃಷ್ಟಿಕೋನಗಳನ್ನು ಅಮಿತ್ ಶಾ ವಿವರಿಸಿದರು. ಗೃಹ ಸಚಿವ ಅಮಿತ್ ಶಾ, ಕೇರಳದ ಎಲ್‌ಡಿಎಫ್ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅನ್ನು ಸಹ ಟೀಕಿಸಿದ್ದಾರೆ. “ಎಲ್‌ಡಿಎಫ್ ಮತ್ತು ಯುಡಿಎಫ್​​ಗಳ ಸಾಧನೆ ಭ್ರಷ್ಟ ಸರ್ಕಾರವಾಗಿದೆ. ಎಲ್‌ಡಿಎಫ್ ಸ್ಫೋಟಕ ಹಗರಣ, ಸಹಕಾರಿ ಬ್ಯಾಂಕ್ ಹಗರಣ, ಎಐ ಕ್ಯಾಮೆರಾ ಹಗರಣ, ಲೈಫ್ ಮಿಷನ್ ಹಗರಣ, ಪಿಪಿಇ ಕಿಟ್ ಹಗರಣ ಮತ್ತು ಭಾರತದ ಅತಿದೊಡ್ಡ ಹಗರಣವಾದ ರಾಜ್ಯ ಪ್ರಾಯೋಜಿತ ಚಿನ್ನದ ಕಳ್ಳಸಾಗಣೆ ಹಗರಣವನ್ನು ಮಾಡಿದೆ” ಎಂದಿದ್ದಾರೆ.

ಇದನ್ನೂ ಓದಿ: ರಾಜಕೀಯ ಬಿಟ್ಟು ವೇದ, ಉಪನಿಷತ್ ಅಧ್ಯಯನ ಮಾಡುವೆ; ನಿವೃತ್ತಿ ಪ್ಲಾನ್ ಬಿಚ್ಚಿಟ್ಟ ಅಮಿತ್ ಶಾ

“ಕಾಂಗ್ರೆಸ್ ಶೀಘ್ರದಲ್ಲೇ ಮುಚ್ಚಲಿರುವ ಪಕ್ಷ. ಬಿಜೆಪಿ ಇಲ್ಲದೆ ವಿಕಸಿತ ಕೇರಳ ಸಾಧ್ಯವಿಲ್ಲ ಎಂದು ನಾನು ಕೇರಳದ ಜನರಿಗೆ ಹೇಳಲು ಬಂದಿದ್ದೇನೆ” ಎಂದು ಅವರು ಹೇಳಿದ್ದಾರೆ. ಎಲ್‌ಡಿಎಫ್ ಅಥವಾ ಯುಡಿಎಫ್ ಎರಡೂ ರಾಜ್ಯದಲ್ಲಿ ನಿಜವಾದ ಬದಲಾವಣೆಯನ್ನು ತರಲು ಸಾಧ್ಯವಿಲ್ಲದ ಕಾರಣ ಕೇರಳ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಮತ ಹಾಕಬೇಕು ಎಂದು ಅಮಿತ್ ಶಾ ಮನವಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ