Budget 2021 ಭಾರತ ಹಿಂದೆಂದೂ ಕಂಡರಿಯದ ಬಜೆಟ್​ ನಿಮ್ಮ ಮುಂದಿರಲಿದೆ.. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಗೂಗ್ಲಿ!

ಈ ಬಗ್ಗೆ ಸಿಐಐ ಪಾಲುದಾರಿಕೆ ಶೃಂಗಸಭೆ 2020ರಲ್ಲಿ ಮಾತನಾಡಿದ ನಿರ್ಮಲಾ, ಈ ಬಾರಿಯ ಬಜೆಟ್​ ತುಂಬಾನೇ ವಿಶೇಷವಾಗಿರಲಿದೆ. ಈ ರೀತಿಯ ಮುಂಗಡಪತ್ರವನ್ನು ಭಾರತ ಹಿಂದೇಂದೂ ಕಂಡಿರಲಿಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

Budget 2021 ಭಾರತ ಹಿಂದೆಂದೂ ಕಂಡರಿಯದ ಬಜೆಟ್​ ನಿಮ್ಮ ಮುಂದಿರಲಿದೆ.. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಗೂಗ್ಲಿ!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​
Edited By:

Updated on: Jan 30, 2021 | 1:04 PM

ನವದೆಹಲಿ: ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಭಾರತದ ಆರ್ಥಿಕತೆ ಮೈನಸ್​ 23ಕ್ಕೆ ಕುಸಿತ ಕಂಡಿತ್ತು. ಈಗ ನಿಧಾನವಾಗಿ ಆರ್ಥಿಕತೆ ಚೇತರಿಕೆ ಕಾಣಲು ಆರಂಭಿಸಿದೆ. ಈ ಮಧ್ಯೆ, ಮುಂದಿನ ಫೆಬ್ರವರಿಯಲ್ಲಿ ಘೋಷಣೆ ಆಗಲಿರುವ ಬಜೆಟ್​ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡ ಮೂಡಿದೆ. ಹೀಗಿರುವಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಈ ಬಾರಿಯ ಬಜೆಟ್​ ವಿಶೇಷವಾಗಿರಲಿದೆ ಎನ್ನುವ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸಿಐಐ ಪಾಲುದಾರಿಕೆ ಶೃಂಗಸಭೆ 2020ರಲ್ಲಿ ಮಾತನಾಡಿದ ನಿರ್ಮಲಾ, ಈ ಬಾರಿಯ ಬಜೆಟ್​ ತುಂಬಾನೇ ವಿಶೇಷವಾಗಿರಲಿದೆ. ಈ ರೀತಿಯ ಮುಂಗಡಪತ್ರವನ್ನು ಭಾರತ ಹಿಂದೇಂದೂ ಕಂಡಿರಲಿಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಈ ಬಾರಿಯ ಬಜೆಟ್​ನಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ಸಾಕಷ್ಟು ಅಂಶಗಳು ಇರಲಿವೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ನಿಮ್ಮ ಸೂಚನೆಗಳನ್ನು ನನಗೆ ಕಳುಹಿಸಿ. ಇದರಿಂದ ಬಜೆಟ್​ ಸಿದ್ಧಪಡಿಸಲು ನಮಗೆ ತುಂಬಾನೇ ಸಹಕಾರಿಯಾಗಲಿದೆ. 100 ವರ್ಷಗಳ ಭಾರತದ ಇತಿಹಾಸದಲ್ಲಿ ಈ ರೀತಿಯ ಬಜೆಟ್​ಅನ್ನು ಯಾರು ನೋಡಿರಬಾರದು. ಆ ರೀತಿಯ ಮುಂಗಡ ಪತ್ರವನ್ನು ಸಿಧ್ಧಗೊಳಿಸಲಿದ್ದೇವೆ. ಆದರೆ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಅತ್ಯಗತ್ಯ ಎಂದಿದ್ದಾರೆ.

2021-22ನೇ ಸಾಲಿನ ಬಜೆಟ್​ ಫೆಬ್ರವರಿ 1ರಂದು ಮಂಡನೆ ಆಗಲಿದೆ. ಬಜೆಟ್​ ಅಧಿವೇಶನ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಬಹುತೇಕ ಕ್ಷೇತ್ರಗಳು ಕೊರೊನಾ ವೈರಸ್​ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿವೆ. ಬಜೆಟ್​ನಲ್ಲಿ ಈ ಕ್ಷೇತ್ರಗಳಿಗೆ ಚೈತನ್ಯ ನೀಡುವ ಕೆಲಸ ಆಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಆಪ್ತ ಕಾರ್ಯದರ್ಶಿಯಾಗಿ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್​ ನಿಯೋಜನೆ

Published On - 5:09 pm, Sat, 19 December 20

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us