Tarang Shakti: ಆಕಾಶದಲ್ಲಿ ವಿಶ್ವದ ಶಕ್ತಿಶಾಲಿ ಯುದ್ಧ ವಿಮಾನಗಳ ಘರ್ಜನೆ, ವೈಮಾನಿಕ ಪ್ರದರ್ಶನಕ್ಕೆ ಭಾರತ ಸಜ್ಜು

ಭಾರತವು ಈ ತಿಂಗಳಿನಲ್ಲಿ ತರಂಗ್ ಶಕ್ತಿ 2024 ಅನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ವಿಶ್ವದ 30 ದೇಶಗಳು ತಮ್ಮ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳ ಚಮತ್ಕಾರವನ್ನು ಪ್ರದರ್ಶಿಸಲಿವೆ.

Tarang Shakti: ಆಕಾಶದಲ್ಲಿ ವಿಶ್ವದ ಶಕ್ತಿಶಾಲಿ ಯುದ್ಧ ವಿಮಾನಗಳ ಘರ್ಜನೆ, ವೈಮಾನಿಕ ಪ್ರದರ್ಶನಕ್ಕೆ ಭಾರತ ಸಜ್ಜು
ಯುದ್ಧ ವಿಮಾನ
Follow us
ನಯನಾ ರಾಜೀವ್
|

Updated on: Aug 01, 2024 | 12:54 PM

ಭಾರತೀಯ ವಾಯುಪಡೆಯು ತರಂಗ್ ಶಕ್ತಿ ಎನ್ನುವ ವೈಮಾನಿಕ ಪ್ರದರ್ಶನಕ್ಕೆ ಸಜ್ಜಾಗಿದ್ದು, 51 ದೇಶಗಳನ್ನು ಆಹ್ವಾನಿಸಿದೆ. ಈ ವೈಮಾನಿಕ ಪ್ರದರ್ಶನವು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಆಗಸ್ಟ್ 6 ರಿಂದ 14ರವರೆಗೆ ಸೂಲೂರಿನಲ್ಲಿ ನಡೆಯಲಿದೆ. ಎರಡನೇ ಹಂತವು ಜೋಧ್​​ಪುರದಲ್ಲಿ ಆಗಸ್ಟ್ 29ರಿಂದ ಸೆಪ್ಟೆಂಬರ್ 14ರವರೆಗೆ ನಡೆಯಲಿದೆ.

ಸುಲೂರ್ ಏರ್ ಫೋರ್ಸ್ ಸ್ಟೇಷನ್ ತಮಿಳುನಾಡಿನ ಕೊಯಮತ್ತೂರಿನ ಬಳಿ ಇದೆ. ತರಂಗ್ ಶಕ್ತಿ ಸೇನಾ ಸಮರಾಭ್ಯಾಸದಲ್ಲಿ ವಾಯುಪಡೆಯ ಎಲ್ ಸಿಎ ತೇಜಸ್, ಮಿರಾಜ್ 2000 ಮತ್ತು ರಫೇಲ್ ಭಾಗವಹಿಸಲಿವೆ ಎಂದು ವಾಯುಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ, ಜಪಾನ್, ಆಸ್ಟ್ರೇಲಿಯಾ, ಸ್ಪೇನ್, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಯುಎಇ ಸೇರಿದಂತೆ 12 ದೇಶಗಳ ಫೈಟರ್ ಜೆಟ್‌ಗಳು ಸಹ ಈ ಸಮರಾಭ್ಯಾಸದಲ್ಲಿ ಭಾಗವಹಿಸಲಿವೆ. ತರಂಗ್ ಶಕ್ತಿ ಸಮರಾಭ್ಯಾಸವು ಅಮೆರಿಕದ ರೆಡ್ ಫ್ಲಾಗ್ ವಾರ್ ಗೇಮ್ ಮಟ್ಟದಲ್ಲಿರಲಿದೆ ಎಂದು ವಾಯುಪಡೆಯ ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: MiG 21: ರಷ್ಯಾ ನಿರ್ಮಿತ ಮಿಗ್​-21 ಯುದ್ಧ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿದ ವಾಯುಪಡೆ

NATO ದೇಶಗಳು ರೆಡ್ ಫ್ಲಾಗ್ ವಾರ್ ಗೇಮ್‌ನಲ್ಲಿ ಭಾಗವಹಿಸುತ್ತವೆ. ರೆಡ್ ಫ್ಲಾಗ್ ವಾರ್ ಗೇಮ್ ಜೂನ್ 2023 ರಲ್ಲಿ ನಡೆಯಿತು ಮತ್ತು ಭಾರತವು ಅದರ ರಫೇಲ್ ಯುದ್ಧ ವಿಮಾನವನ್ನು ಕರೆದೊಯ್ದಿತ್ತು.

ಭಾರತೀಯ ವಾಯುಪಡೆಯು ಮೊದಲ ಬಾರಿಗೆ ತರಂಗ್ ಶಕ್ತಿ ಪ್ರದರ್ಶನವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ವಿಶ್ವದ 30ಕ್ಕೂ ಅಧಿಕ ದೇಶಗಳು ತಮ್ಮ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳ ಚಮತ್ಕಾರವನ್ನು ಪ್ರದರ್ಶಿಸಲಿವೆ. ವಿಶ್ವದ ಈ ಅದ್ದೂರಿ ಸಮಾರಂಭದಲ್ಲಿ ಭಾರತವೂ ತನ್ನ ಸೇನಾ ಶಕ್ತಿ ಪ್ರದರ್ಶಿಸಲಿದೆ.

ಆಸ್ಟ್ರೇಲಿಯಾದ ಎಫ್-18, ಬಾಂಗ್ಲಾದೇಶದ ಸಿ-130, ಫ್ರಾನ್ಸ್‌ನ ರಫೇಲ್, ಜರ್ಮನಿ, ಸ್ಪೇನ್, ಯುಕೆ ಟೈಫೂನ್ ಫೈಟರ್, ಗ್ರೀಸ್ ಎಫ್-16, ಅಮೆರಿಕದ ಎ-10, ಎಫ್-16, ಜೊತೆಗೆ ಎಫ್‌ಆರ್‌ಎ ಸೇರಿವೆ. ರಫೇಲ್, ಸುಖೋಯ್, ಮಿರಾಜ್, ಜಾಗ್ವಾರ್, ತೇಜಸ್, ಮಿಗ್ 29, ಪ್ರಚಂಡ ಮತ್ತು ರುದ್ರ ದಾಳಿ ಹೆಲಿಕಾಪ್ಟರ್‌ಗಳು, ಎಎಲ್‌ಎಚ್ ಧ್ರುವ್, ಸಿ-130, ಐಎಲ್ -78, ಭಾರತೀಯ ವಾಯುಪಡೆಯ ಅವಾಕ್ಸ್ ಸೇರಿವೆ.

ರಷ್ಯಾ ಭಾಗವಹಿಸುವುದಿಲ್ಲವೆಂದು ವೈಸ್ ಚೀಫ್ ಏರ್ ಮಾರ್ಷಲ್ ಎಪಿ ಸಿಂಗ್ ಹೇಳಿದ್ದಾರೆ, ಇಸ್ರೇಲ್​ಗೂ ಆಹ್ವಾನ ಕಳುಹಿಸಿಲ್ಲ. ಮೊದಲ ಹಂತದಲ್ಲಿ 72 ವಿಮಾನಗಳು ತಮ್ಮ ಶಕ್ತಿ ಪ್ರದರ್ಶಿಸಲಿವೆ ಎಂದು ತಿಳಿಸಿದರು. ಇವುಗಳಲ್ಲಿ 32 ವಿದೇಶಿ ವಿಮಾನಗಳು ಮತ್ತು ಭಾರತೀಯ ವಾಯುಪಡೆಯ 40 ವಿಮಾನಗಳು ಸೇರಿವೆ.

ಎರಡನೇ ಹಂತದಲ್ಲಿ ಒಟ್ಟು 75-80 ಫೈಟರ್‌ಗಳನ್ನು ಸೇರಿಸಲಾಗುವುದು. ಇವುಗಳಲ್ಲಿ 27 ವಿದೇಶಿ ಫೈಟರ್‌ಗಳು, 40 ಭಾರತೀಯ ಯುದ್ಧವಿಮಾನಗಳು, ಮಿಡ್ ಏರ್ ರಿಫ್ಯೂಲರ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಸಾರಿಗೆ ವಿಮಾನಗಳು ಸೇರಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ