ಭಾರತೀಯ ಸೇನೆಗೆ ಬಂದ 4 ಕಾಲಿನ ಸೈನಿಕ, ಶತ್ರುಗಳಿದ್ದಲ್ಲಿಗೇ ಹೋಗಿ ದಾಳಿ ಮಾಡ್ತಾನೆ

ಭವಿಷ್ಯದ ಸವಾಲುಗಳು ಮತ್ತು ದಾಳಿಗಳನ್ನು ಎದುರಿಸಲು ಭಾರತೀಯ ಸೇನೆಯು ತನ್ನನ್ನು ತಾನು ಕೊಂಚ ಬದಲಾವಣೆ ಮಾಡಿಕೊಂಡು ಹೊಸತನವನ್ನು ಸೃಷ್ಟಿಸುವಲ್ಲಿ ನಿರತವಾಗಿದೆ. ಹಾಗೆಯೇ, ಅದರ ಸಂಶೋಧನಾ ವಿಭಾಗವು ಮುಂದಿನ ಪೀಳಿಗೆಗಾಗಿ ಅನೇಕ ಸುಧಾರಿತ ಶಸ್ತ್ರಾಸ್ತ್ರಗಳನ್ನು ರಚಿಸಿದೆ. ಈ ಶಸ್ತ್ರಾಸ್ತ್ರಗಳ ಮೂಲಕ ಶತ್ರು ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬಹುದಾಗಿದೆ. ಇವುಗಳ ಮೂಲಕ ಶತ್ರುಗಳ ಗಡಿಗೆ ಸೈನಿಕರನ್ನು ಕಳುಹಿಸುವ ಅಗತ್ಯ ಇರುವುದಿಲ್ಲ.

ಭಾರತೀಯ ಸೇನೆಗೆ ಬಂದ 4 ಕಾಲಿನ ಸೈನಿಕ, ಶತ್ರುಗಳಿದ್ದಲ್ಲಿಗೇ ಹೋಗಿ ದಾಳಿ ಮಾಡ್ತಾನೆ
ಮ್ಯೂಲ್

Updated on: Sep 13, 2023 | 8:26 AM

ಭವಿಷ್ಯದ ಸವಾಲುಗಳು ಮತ್ತು ದಾಳಿಗಳನ್ನು ಎದುರಿಸಲು ಭಾರತೀಯ ಸೇನೆ(Indian Army)ಯು ತನ್ನನ್ನು ತಾನು ಕೊಂಚ ಬದಲಾವಣೆ ಮಾಡಿಕೊಂಡು ಹೊಸತನವನ್ನು ಸೃಷ್ಟಿಸುವಲ್ಲಿ ನಿರತವಾಗಿದೆ. ಹಾಗೆಯೇ, ಅದರ ಸಂಶೋಧನಾ ವಿಭಾಗವು ಮುಂದಿನ ಪೀಳಿಗೆಗಾಗಿ ಅನೇಕ ಸುಧಾರಿತ ಶಸ್ತ್ರಾಸ್ತ್ರಗಳನ್ನು ರಚಿಸಿದೆ. ಈ ಶಸ್ತ್ರಾಸ್ತ್ರಗಳ ಮೂಲಕ ಶತ್ರು ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬಹುದಾಗಿದೆ. ಇವುಗಳ ಮೂಲಕ ಶತ್ರುಗಳ ಗಡಿಗೆ ಸೈನಿಕರನ್ನು ಕಳುಹಿಸುವ ಅಗತ್ಯ ಇರುವುದಿಲ್ಲ.

ಜಮ್ಮು, ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲಾಗಿದ್ದ ರಕ್ಷಣಾ ಪ್ರದರ್ಶನದಲ್ಲಿ ಸೇನೆಯು ಈ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ಅವುಗಳ ಮಹತ್ವವನ್ನು ತಿಳಿಸಿತು. ಈ ವಿವಿಧೋದ್ದೇಶ ಸಾಧನದ ಹೆಸರು MULE ಮತ್ತು ಖಾಸಗಿ ವಲಯದ ವಿಜ್ಞಾನಿಗಳ ಸಹಯೋಗದೊಂದಿಗೆ ಸೇನೆಯು ಇದನ್ನು ರಚಿಸಿದೆ.

ಮ್ಯೂಲ್​ನ ವಿಶೇಷತೆ ಏನು?
ಸೇನೆಯ ಸಹಯೋಗದಲ್ಲಿ ಇದನ್ನು ಅಭಿವೃದ್ಧಿಪಡಿಸಿರುವ ARC ವೆಂಚರ್ಸ್‌ನ R ಆಂಡ್ D ಎಂಜಿನಿಯರ್ ಆರ್ಯನ್ ಸಿಂಗ್, ಈ ಶಸ್ತ್ರಾಸ್ತ್ರದ ಒಟ್ಟು ಪೇಲೋಡ್ ಸಾಮರ್ಥ್ಯ 12 ಕೆಜಿ. ಈ ಉಪಕರಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಥರ್ಮಲ್ ಕ್ಯಾಮೆರಾಗಳನ್ನು ಅಳವಡಿಸಬಹುದಾಗಿದೆ.

ವಿಜ್ಞಾನಿಗಳ ಪ್ರಕಾರ, ಇದು ಯಾವುದೇ ಭೂಪ್ರದೇಶದಲ್ಲಿ ಕೆಲಸ ಮಾಡಬಹುದು, ಸೇನೆಗೆ ಶತ್ರುಗಳ ಬಗ್ಗೆ ಮಾಹಿತಿ ನೀಡುವುದು ಇದರ ಮೊದಲ ಉದ್ದೇಶ, ಹಾಗೂ ಯುದ್ಧದ ಸಂದರ್ಭದಲ್ಲೂ ಕೂಡ ಇದನ್ನು ಬಳಕೆ ಮಾಡಬಹುದು. ಇಂಜಿನಿಯರ್ ಪ್ರಕಾರ, ಇದು 45 ಡಿಗ್ರಿಗಳಷ್ಟು ಬೆಟ್ಟಗಳನ್ನು ಹತ್ತಬಹುದು ಮತ್ತು 18 ಸೆಂಟಿಮೀಟರ್ಗಳವರೆಗೆ ಮೆಟ್ಟಿಲುಗಳನ್ನು ಹತ್ತಬಹುದು. ಇದನ್ನು ರಿಮೋಟ್ ಕಂಟ್ರೋಲ್ ಮೂಲಕ ನಿರ್ವಹಿಸಬಹುದು ಮತ್ತು ವೈ-ಫೈ ಮತ್ತು ಎಲ್ ಟಿಇ ಮೂಲಕವೂ ಬಳಸಬಹುದು.

ಮತ್ತಷ್ಟು ಓದಿ: ಗುಂಡೇಟು ಬಿದ್ದರೂ ಉಗ್ರರ ಜೊತೆ ಕಾದಾಡಿದ ಭಾರತೀಯ ಸೇನೆಯ ಶ್ವಾನ; ವೈರಲ್ ವಿಡಿಯೋ ಇಲ್ಲಿದೆ

ಗಡಿಯಲ್ಲಿ ಹೆಚ್ಚುತ್ತಿರುವ ಡ್ರೋನ್‌ಗಳ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸೇನೆಯ ಎಂಜಿನಿಯರಿಂಗ್ ವಿಭಾಗವು ಸ್ವಯಂಚಾಲಿತ ಡ್ರೋನ್ ಶೂಟರ್ ಅನ್ನು ಸಿದ್ಧಪಡಿಸಿದೆ. ಈ ಡ್ರೋನ್ ಶೂಟರ್ ಹಸ್ತಚಾಲಿತ ಮತ್ತು ಸ್ವಯಂಚಾಲಿತ ಕಾರ್ಯಗಳನ್ನು ನಿರ್ವಹಿಸುತ್ತದೆ.

ಅಂದರೆ ಅದು ಡ್ರೋನ್ ಅನ್ನು ಟ್ರ್ಯಾಕ್ ಮಾಡಬಹುದು ಮತ್ತು ನಂತರ LMG (ಲೈಟ್ ಮೆಷಿನ್ ಗನ್) ನೊಂದಿಗೆ ಆಜ್ಞೆಗಳನ್ನು ನೀಡುತ್ತದೆ. ಹಿಮ ಮತ್ತು ಪರ್ವತಗಳು ಸೇರಿದಂತೆ – ಎಲ್ಲಾ ಭೂಪ್ರದೇಶಗಳಲ್ಲಿಯೂ ಸಹ ಇದು ಕಾರ್ಯಸಾಧ್ಯವಾಗಿದೆ

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us