ಪಾಕ್ ಆಕ್ರಮಿತ ಪ್ರದೇಶ ಮರಳಿ ಪಡೆಯಲು ಭಾರತೀಯ ಸೈನ್ಯ ಸಿದ್ಧ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 300 ಭಯೋತ್ಪಾದಕರು ಇದ್ದಾರೆ. ಇನ್ನೂ 160 ಜನರು ಎಲ್ಒಸಿ ದಾಟಲು ಮತ್ತು ಭಾರತದೊಳಗೆ ನುಸುಳಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

ಪಾಕ್ ಆಕ್ರಮಿತ ಪ್ರದೇಶ ಮರಳಿ ಪಡೆಯಲು ಭಾರತೀಯ ಸೈನ್ಯ ಸಿದ್ಧ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ
ಪಾಕ್ ಆಕ್ರಮಿತ ಪ್ರದೇಶ ಮರಳಿ ಪಡೆಯಲು ಭಾರತೀಯ ಸೈನ್ಯ ಸಿದ್ಧ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ
Image Credit source: ANI
TV9kannada Web Team

| Edited By: Rakesh Nayak Manchi

Nov 22, 2022 | 10:52 PM


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ವಿರುದ್ಧ ಭಾರತೀಯ ಸೇನೆ ಯಾವಾಗಲೂ ಕ್ರಮ ಕೈಗೊಳ್ಳುತ್ತದೆ. ಏತನ್ಮಧ್ಯೆ, ಪಾಕ್ ಆಕ್ರಮಿತ್ ಕಾಶ್ಮೀರ (Pak occupied Kashmir-POK) ಮರಳಿ ಪಡೆಯಲು ಭಾರತೀಯ ಸೇನೆಯು ಸನ್ನಧವಾಗಿದೆ. ಸರ್ಕಾರದ ಯಾವುದೇ ಆದೇಶ ಪಾಲಿಸಲು ಸೈನ್ಯ ಸನ್ನದ್ಧವಾಗಿದೆ ಎಂದು ಉತ್ತರ ಕಮಾಂಡ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ (Lt Gen Upendra Dwivedi) ಅವರೇ ಈ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದ ಕೆಲವು ಭಾಗಗಳನ್ನು ಹಿಂಪಡೆಯುವ ಸುಳಿವನ್ನು ಸ್ವತಃ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಇತ್ತೀಚೆಗೆ ಶ್ರೀನಗರದಲ್ಲಿ ನಡೆದ ಭಾರತೀಯ ಪದಾತಿ ದಳದ ದಿನದ ಸಮಾರಂಭದಲ್ಲಿ ಹೇಳಿಕೆ ನೀಡಿದ್ದರು. ಪಾಕ್ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರ ಪ್ರದೇಶಗಳಲ್ಲಿನ ಜನರು ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾಗುತ್ತಾರೆ ಮತ್ತು ಇಸ್ಲಾಮಾಬಾದ್ ಎಂದಾದರೂ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೆ ಉಪೇಂದ್ರ ದ್ವಿವೇದಿ ಅವರು ಈ ಹೇಳಿಕೆ ನೀಡಿದ್ದಾರೆ.

ಪೂಂಚ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ರಜೌರಿ-ಪೂಂಚ್ ಪ್ರದೇಶ ಸೇರಿದಂತೆ ಜಮ್ಮು ಕಾಶ್ಮೀರದಲ್ಲಿ 300 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಸೇನೆಗೆ ಲಭ್ಯವಿರುವ ಅಂಕಿಅಂಶಗಳು ಸೂಚಿಸುತ್ತವೆ. 82 ವಿದೇಶಿ ಭಯೋತ್ಪಾದಕರು ಮತ್ತು 53 ಸ್ಥಳೀಯ ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ಸರ್ಕಾರ ಹೊರಡಿಸಿದ ಯಾವುದೇ ಆದೇಶವನ್ನು ಪಾಲಿಸಲಾಗುತ್ತದೆ. ಇದಕ್ಕೆ ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದರು.

ಇದನ್ನೂ ಓದಿ: Assam-Meghalaya: ಅಸ್ಸಾಂ-ಮೇಘಾಲಯ ಗಡಿಯಲ್ಲಿ ಗುಂಡಿನ ದಾಳಿ, 6 ಮಂದಿ ಸಾವು, 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಕಡಿತ

ಆದಾಗ್ಯೂ, ಹಿಂದಿನ ರಾಜ್ಯದಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಮಾತನಾಡಿ, ಕೇಂದ್ರ ಸರ್ಕಾರವು 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಲಾಯಿತು. ಆ ಮೂಲಕ ಪ್ರಮುಖ ಬದಲಾವಣೆಗೆ ಒಳಗಾಯಿತು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. ಶಾಂತಿ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಯೋತ್ಪಾದನೆಯನ್ನು ಎದುರಿಸಿದ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ಅವರು ಶ್ಲಾಘಿಸಿದರು.

“ಅಲ್ಲಿದ್ದ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ಆರ್ಟಿಕಲ್ 370 ರ ರದ್ದತಿಯ ನಂತರ ಕಡಿಮೆಯಾಗುತ್ತಿವೆ ಮತ್ತು ಇಂದು ಶಾಂತಿ ಮತ್ತು ಅಭಿವೃದ್ಧಿ ಕೇಂದ್ರ ಹಂತವನ್ನು ಪಡೆದುಕೊಂಡಿದೆ. ಇದರೊಂದಿಗೆ ಜನರ ಆಶೋತ್ತರಗಳನ್ನು ಪೂರೈಸಲು ಉತ್ತಮ ಸ್ಥಳವಾಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳ ಕೊರತೆಯಿದೆ. ಹೀಗಾಗಿ ನೆರೆಯ ದೇಶವು ಡ್ರೋನ್‌ಗಳ ಮೂಲಕ ಪಿಸ್ತೂಲ್‌ಗಳು, ಗ್ರೆನೇಡ್‌ಗಳು ಮತ್ತು ಡ್ರಗ್‌ಗಳ ನಿರ್ದಿಷ್ಟ ಪ್ರದೇಶಕ್ಕೆ ಎಸೆಯುವ ಮೂಲಕ ಪೂರೈಕೆ ಮಾಡಲಾಗುತ್ತಿದೆ. ನಾವು ಅಂತಹ ಪ್ರದೇಶಗಳನ್ನು ಗುರುತಿಸಿದ್ದೇವೆ. ನಾಗರಿಕರನ್ನು ಗುರಿಯಾಗಿಸಲು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದ್ದು, ಅಮಾಯಕರ ಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada