AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂಧೂರ್ ವೇಳೆ ಯೋಧರಿಗೆ ಟೀ ಕೊಡುತ್ತಿದ್ದ ಬಾಲಕನ ಶಿಕ್ಷಣದ ವೆಚ್ಚ ಭರಿಸಲು ಸೇನೆ ನಿರ್ಧಾರ

ಆಪರೇಷನ್ ಸಿಂಧೂರ್‌ನ ಕಿರಿಯ ಯೋಧನೆಂಬ ಹೆಗ್ಗಳಿಕೆಗೆ ಪಾತ್ರನಾದ ಪಂಜಾಬ್​ನ ಬಾಲಕ ಶ್ರವಣ್ ಸಿಂಗ್ ಶಿಕ್ಷಣದ ವೆಚ್ಚವನ್ನು ಭಾರತೀಯ ಸೇನೆಯೇ ಭರಿಸಲಿದೆ. ಆತ ಸೈನಿಕರಿಗೆ ಸಹಾಯ ಮಾಡಿದ್ದ. ಸೈನಿಕರಿಗೆ ದಿನವೂ ಮನೆಯಿಂದ ಟೀ, ಐಸ್, ನೀರು ತಂದುಕೊಡುತ್ತಿದ್ದ. ಶ್ರವಣ್ ಸಿಂಗ್ ಅವರನ್ನು ಸೇನೆಯಿಂದ ಸನ್ಮಾನಿಸಲಾಗಿತ್ತು. ಇದಾದ ನಂತರ ಆತನ ಬಗ್ಗೆ ದೇಶಾದ್ಯಂತ ಚರ್ಚೆ, ಮೆಚ್ಚುಗೆ ವ್ಯಕ್ತವಾಗಿತ್ತು.

ಆಪರೇಷನ್ ಸಿಂಧೂರ್ ವೇಳೆ ಯೋಧರಿಗೆ ಟೀ ಕೊಡುತ್ತಿದ್ದ ಬಾಲಕನ ಶಿಕ್ಷಣದ ವೆಚ್ಚ ಭರಿಸಲು ಸೇನೆ ನಿರ್ಧಾರ
Shravan Singh
ಸುಷ್ಮಾ ಚಕ್ರೆ
|

Updated on:Jul 21, 2025 | 10:14 PM

Share

ನವದೆಹಲಿ, ಜುಲೈ 21: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ಭಾರತೀಯ ಸೈನಿಕರಿಗೆ ನೀರು, ಐಸ್, ಚಹಾ, ಹಾಲು ಮತ್ತು ಲಸ್ಸಿ ಪೂರೈಸಿದ್ದ ಪಂಜಾಬ್​ನ ಫಿರೋಜ್‌ಪುರ ಜಿಲ್ಲೆಯ ತರ್ವಾಲಿ ಗ್ರಾಮದ ಪುಟ್ಟ ಬಾಲಕ ಶ್ರವಣ್ ಸಿಂಗ್ (Shravan Singh) ಅವರ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಭಾರತೀಯ ಸೇನೆಯು (Indian Army) ಭರಿಸಲಿದೆ. ಆ ಬಾಲಕನ ಧೈರ್ಯ ಮತ್ತು ದೃಢಸಂಕಲ್ಪವನ್ನು ಪರಿಗಣಿಸಿ ಸೇನೆಯ ಗೋಲ್ಡನ್ ಆರೋ ವಿಭಾಗವು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ದೇಶದ ಶೌರ್ಯದ ಅನೇಕ ಫೋಟೋಗಳು ಬೆಳಕಿಗೆ ಬಂದವು. ಆ ಫೋಟೋಗಳಲ್ಲಿ ಶ್ರವಣ್ ಸಿಂಗ್ ಅವರದ್ದೂ ಒಂದು. ದೇಶ ಸೇವೆ ಮಾಡಲು ಯಾವುದೇ ವಯಸ್ಸು ಮುಖ್ಯವಲ್ಲ, ಧೈರ್ಯ ಮತ್ತು ದೇಶಭಕ್ತಿಯ ಉತ್ಸಾಹವಿದ್ದರೆ ಸಾಕು ಎಂದು ಶ್ರವಣ್ ಸಿಂಗ್ ಸಾಬೀತುಪಡಿಸಿದ್ದ. ಆಪರೇಷನ್ ಸಿಂಧೂರ್ ಸಮಯದಲ್ಲಿ 10 ವರ್ಷದ ಮುಗ್ಧ ಬಾಲಕ ಶ್ರವಣ್ ತನ್ನ ಕೆಲಸದಿಂದ ಇದನ್ನು ಸಾಬೀತುಪಡಿಸಿದ್ದ.

ಈ 10 ವರ್ಷದ ಬಾಲಕ ಯುದ್ಧದಂತಹ ಸಂದರ್ಭಗಳಲ್ಲಿ ಸೈನಿಕರಿಗೆ ಧೈರ್ಯದ ಮೂಲವಾಯಿತು. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ದೇಶದ ಅತ್ಯಂತ ಕಿರಿಯ ಯೋಧ ಶ್ರವಣ್ ಸಿಂಗ್, ಶಸ್ತ್ರಾಸ್ತ್ರಗಳಿಲ್ಲದೆ, ಸಮವಸ್ತ್ರವಿಲ್ಲದೆ, ಕೇವಲ ತನ್ನ ಉತ್ಸಾಹದಿಂದ ಸೈನಿಕರ ಹೃದಯ ಗೆದ್ದಿದ್ದ. ಆತನ ಮೈಮೇಲೆ ಸಮವಸ್ತ್ರವಿಲ್ಲದಿದ್ದರೂ, ಕೈಯಲ್ಲಿ ಯಾವುದೇ ಆಯುಧಗಳಿಲ್ಲದಿದ್ದರೂ, ಅವನ ಧೈರ್ಯ ಅಪರಿಮಿತವಾಗಿತ್ತು. ಅದಕ್ಕಾಗಿಯೇ ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಉತ್ತುಂಗದಲ್ಲಿದ್ದಾಗ ಮತ್ತು ಭಾರತೀಯ ಸೇನೆಯ ಸೈನಿಕರು ಸುಡುವ ಬಿಸಿಲಲ್ಲಿ ಹೋರಾಡುತ್ತಿದ್ದಾಗ ಈ ಪುಟ್ಟ ದೇಶಭಕ್ತ ಪ್ರತಿದಿನ ಸೈನಿಕರಿಗೆ ನೀರು, ಹಾಲು, ಲಸ್ಸಿ ಮತ್ತು ಐಸ್ ತರುತ್ತಿದ್ದನು.

ಇದನ್ನೂ ಓದಿ: ಜೈಲಿನಲ್ಲಿ ನನಗೇನೇ ಆದರೂ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕಾರಣ; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಈ ಶೌರ್ಯಕ್ಕಾಗಿ, ಶ್ರವಣ್​​ನನ್ನು ಭಾರತೀಯ ಸೇನೆಯು ಆಪರೇಷನ್ ಸಿಂಧೂರ್‌ನ ಅತ್ಯಂತ ಕಿರಿಯ ನಾಗರಿಕ ಯೋಧ ಎಂದು ಗೌರವಿಸಿತು. ಈಗ ಭಾರತೀಯ ಸೇನೆಯು 10 ವರ್ಷದ ಶ್ರವಣ್ ಸಿಂಗ್‌ನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸಲು ನಿರ್ಧರಿಸಿದೆ. ಆತ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಂಜಾಬ್‌ನ ಹಳ್ಳಿಯಲ್ಲಿ ಗುಂಡಿನ ದಾಳಿಯನ್ನು ಎದುರಿಸುತ್ತಿರುವ ಸೈನಿಕರಿಗೆ ಆಹಾರ ಮತ್ತು ನೀರನ್ನು ಒದಗಿಸಿದ್ದ. ಶ್ರವಣ್ ಸಿಂಗ್ ತಾರಾ ವಾಲಿ ಗ್ರಾಮದಲ್ಲಿ ನಿಯೋಜಿಸಲ್ಪಟ್ಟಿದ್ದ ಸೈನಿಕರಿಗಾಗಿ ಕೆಲಸ ಮಾಡುತ್ತಿದ್ದ. ಪಾಕಿಸ್ತಾನದಿಂದ ಗುಂಡಿನ ದಾಳಿ ನಡೆಯುತ್ತಿದ್ದಾಗ ಸೈನಿಕರಿಗಾಗಿ ನೀರು, ಐಸ್, ಚಹಾ, ಹಾಲು ಮತ್ತು ಲಸ್ಸಿಯನ್ನು ಕೊಂಡೊಯ್ಯುತ್ತಿದ್ದ. ಆ ಬಾಲಕನ ಧೈರ್ಯ ಮತ್ತು ಉತ್ಸಾಹವನ್ನು ನೋಡಿದ ಭಾರತೀಯ ಸೇನೆಯ ಗೋಲ್ಡನ್ ಆರೋ ವಿಭಾಗವು ಶ್ರವಣ್‌ನ ಶಿಕ್ಷಣವನ್ನು ಸಂಪೂರ್ಣವಾಗಿ ಪ್ರಾಯೋಜಿಸುವುದಾಗಿ ಭರವಸೆ ನೀಡಿದೆ.

ಕಳೆದ ಶನಿವಾರ, ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿ ನಡೆದ ಸಮಾರಂಭದಲ್ಲಿ ಪಶ್ಚಿಮ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ಅವರು ಪುಟ್ಟ ಸೈನಿಕ ಶ್ರವಣ್ ಸಿಂಗ್​ನನ್ನು ಸನ್ಮಾನಿಸಿದರು. ಶ್ರವಣನ ಕಥೆ ದೇಶಾದ್ಯಂತ ಗುರುತಿಸುವಿಕೆ ಮತ್ತು ಬೆಂಬಲಕ್ಕೆ ಅರ್ಹರಾದ ಅಪ್ರಸಿದ್ಧ ವೀರರನ್ನು ನೆನಪಿಸುತ್ತದೆ ಎಂದು ಸೇನೆ ಹೇಳಿದೆ.

ಇದನ್ನೂ ಓದಿ: Video: ಆಪರೇಷನ್ ಸಿಂಧೂರ್ ಕೇವಲ ಟ್ರೇಲರ್​, ಸಮಯ ಬಂದಾಗ ಪಾಕ್​ಗೆ ಪೂರ್ಣ ಚಿತ್ರ ತೋರಿಸ್ತೀವಿ: ರಾಜನಾಥ್​ ಸಿಂಗ್

ತಾರಾ ವಾಲಿ ಗ್ರಾಮವು ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಮೇ 7ರ ಬೆಳಿಗ್ಗೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದವು. ಇದರಲ್ಲಿ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಭದ್ರಕೋಟೆ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ನೆಲೆ ಸೇರಿವೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಗೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಫಿರೋಜ್‌ಪುರದ ಮಾಮ್‌ಡೋಟ್ ಪಟ್ಟಣದ ಗಡಿ ಗ್ರಾಮವಾದ ತರ್ವಾಲಿಯ ಸರ್ವಾನ್ ಸಿಂಗ್ ಆತನನ್ನು ಸೈನಿಕರಿಗೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಅವರೊಂದಿಗೆ ಸಮಯ ಕಳೆದಿದ್ದಕ್ಕಾಗಿ ಮೇಜರ್ ಜನರಲ್ ರಂಜಿತ್ ಸಿಂಗ್ ಮನ್ರಾಲ್ ಸನ್ಮಾನಿಸಿದ್ದ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:40 pm, Mon, 21 July 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!