ಇರಾನ್​​ನಲ್ಲಿರುವ ಕನ್ನಡಿಗರೆ ಗಮನಿಸಿ… ಭಾರತೀಯ ದೂತಾವಾಸದ ಸಲಹೆಗಳಿವು; ಇಲ್ಲಿದೆ ವಾಟ್ಸಾಪ್, ಟೆಲಿಗ್ರಾಮ್ ಲಿಂಕ್

Israel Iran conflict: ಮಧ್ಯ ಪ್ರಾಚ್ಯದಲ್ಲಿ ಬಿಕ್ಕಟ್ಟು ಉದ್ಭವಿಸಿರುವುದರಿಂದ ಇರಾನ್​​ನಲ್ಲಿರುವ ಭಾರತೀಯರ ಸುರಕ್ಷತೆಗೆ ಭಾರತ ಕ್ರಮ ಕೈಗೊಂಡಿದೆ. ಅನಗತ್ಯವಾಗಿ ಓಡಾಟ ನಡೆಸಬಾರದು, ದೂತಾವಾಸ ಕಚೇರಿಯೊಂದಿಗೆ ಸದಾ ಸಂಪರ್ಕದಲ್ಲಿರಬೇಕು ಎಂಬಿತ್ಯಾದಿ ಅಂಶಗಳಿರುವ ಅಡ್ವೈಸರಿಯನ್ನು ಬಿಡುಗಡೆ ಮಾಡಲಾಗಿದೆ. ಇರಾನ್ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಕನ್ನಡಿಗರೂ ಇದ್ದಾರೆ.

ಇರಾನ್​​ನಲ್ಲಿರುವ ಕನ್ನಡಿಗರೆ ಗಮನಿಸಿ... ಭಾರತೀಯ ದೂತಾವಾಸದ ಸಲಹೆಗಳಿವು; ಇಲ್ಲಿದೆ ವಾಟ್ಸಾಪ್, ಟೆಲಿಗ್ರಾಮ್ ಲಿಂಕ್
ಇಸ್ರೇಲ್ ಮತ್ತು ಇರಾನ್ ಮಧ್ಯೆ ಸಂಘರ್ಷ

Updated on: Jun 15, 2025 | 6:51 PM

ನವದೆಹಲಿ, ಜೂನ್ 15: ಇಸ್ರೇಲ್ ಮತ್ತು ಇರಾನ್ ಮಧ್ಯೆ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಭಾರತ ಚಿಂತಾಕ್ರಾಂತವಾಗಿದೆ. ಇರಾನ್ ಮೇಲೆ ಇಸ್ರೇಲ್ ವ್ಯಾಪಕ ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇರಾನ್​​ನಲ್ಲಿರುವ ಭಾರತೀಯರನ್ನು ರಕ್ಷಿಸಲು ಮತ್ತು ನೆರವು ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಇರಾನ್​​ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯು ವಿವಿಧ ಸಹಾಯವಾಣಿಗಳನ್ನು ಬಿಡುಗಡೆ ಮಾಡಿದೆ.

ಇರಾನ್​​ನಲ್ಲಿ ಬಹಳಷ್ಟು ಭಾರತೀಯರಿದ್ದಾರೆ. ಕನ್ನಡಿಗರೂ ಕೂಡ ಸಾಕಷ್ಟಿದ್ದಾರೆ. ಅಲ್ಲಿರುವ ಭಾರತೀಯರು ಆತಂಕ ಪಡದೆ ತಾವು ನೀಡುವ ಸೂಚನೆ ಪ್ರಕಾರ ನಡೆದುಕೊಳ್ಳಬೇಕೆಂದು ಇಂಡಿಯನ್ ಎಂಬಸಿ ತಿಳಿಸಿದೆ. ಎಕ್ಸ್ ಪ್ಲಾಟ್​​ಫಾರ್ಮ್​​ನಲ್ಲಿ ಸರಣಿ ಟ್ವೀಟ್ ಮಾಡಿರುವ ದೂತಾವಾಸ ಕಚೇರಿಯ ಅಕೌಂಟ್, ವಿವಿಧ ಸಹಾಯವಾಣಿ ನಂಬರ್ ಹಾಗೂ ಟೆಲಿಗ್ರಾಮ್ ಲಿಂಕ್ ಅನ್ನು ಒದಗಿಸಿದೆ.

ಇದನ್ನೂ ಓದಿ: ಪಾಕಿಸ್ತಾನ 3 ರಫೇಲ್ ಹೊಡೆದಿಲ್ಲ; ವಾಸ್ತವ ಗೊತ್ತಾದರೆ ಅಚ್ಚರಿ ಆಗಬಹುದು: ಡಸ್ಸೋ ಏವಿಯೇಶನ್ ಸಿಇಒ

‘ಇರಾನ್​​ನಲ್ಲಿರುವ ಈಗಿನ ಸಂದರ್ಭವನ್ನು ಗಮನಿಸಿ, ಇರಾನ್​ನಲ್ಲಿರುವ ಭಾರತೀಯ ನಾಗರಿಕರು ಹಾಗೂ ಭಾರ ಮೂಲದ ವ್ಯಕ್ತಿಗಳು ದೂತಾವಾಸ ಕಚೇರಿಯೊಂದಿಗೆ ಸಂಪರ್ಕದಲ್ಲಿ ಇರಬೇಕು. ಇರಾನ್​​ನಲ್ಲಿ ಅನಗತ್ಯವಾಗಿ ಓಡಾಡುವುದು ಇತ್ಯಾದಿಯನ್ನು ಮಾಡಬಾರದು. ಎಂಬಸಿಯ ಸೋಷಿಯಲ್ ಮೀಡಿಯಾ ಪೇಜ್​​ಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಗಮನಿಸುತ್ತಿರಬೇಕು’ ಎಂದು ಅಡ್ವೈಸರಿಯನ್ನು ಬಿಡುಗಡೆ ಮಾಡಲಾಗಿದೆ.

ಇರಾನ್​​ನಲ್ಲಿರುವ ಭಾರತೀಯ ನಾಗರಿಕರಿಗೆ ತುರ್ತು ಸಂಪರ್ಕ ಸಂಖ್ಯೆ:

ಫೋನ್ ಕರೆ ಸಂಪರ್ಕ:

  • +98 9128109115
  • +98 9128109109

ವಾಟ್ಸಾಪ್ ಸಂಪರ್ಕ:

  • +98 9010144557
  • +98 9015993320
  • +91 8086871709

ಅಗತ್ಯ ಮಾಹಿತಿಗೆ ಟೆಲಿಗ್ರಾಮ್ ಚಾನಲ್

ಪರಿಸ್ಥಿತಿ ಬಗ್ಗೆ ಕಾಲಕಾಲಕ್ಕೆ ಅಪ್​ಡೇಟ್ ಮಾಡುವ ಮತ್ತು ಸಲಹೆ ನೀಡುವ ಕಾರ್ಯಕ್ಕಾಗಿ ಭಾರತೀಯ ದೂತಾವಾಸ ಕಚೇರಿಯು ಟೆಲಿಗ್ರಾಮ್ ಲಿಂಕ್​ವೊಂದನ್ನು ರಚಿಸಿದೆ. ಎಲ್ಲರೂ ಕೂಡ ಈ ಲಿಂಕ್ ಅನ್ನು ಫಾಲೋ ಮಾಡಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ: ಇರಾನ್- ಇಸ್ರೇಲ್ ವಾರ್​: ಇಸ್ರೇಲ್​ನಲ್ಲಿ ಸಿಲುಕಿದ ಕಾಂಗ್ರೆಸ್, ಬಿಜೆಪಿ ಮತ್ತು JDS ನಿಯೋಗ

ಇರಾನ್​​ನಿಂದ ಸಂಭಾವ್ಯ ದಾಳಿ ಆಗಬಹುದು ಎಂದು ಮುನ್ನೆಚ್ಚರಿಕೆಯಾಗಿ ಭಾರತವು ಇರಾನ್​ನ ಮಿಲಿಟರಿ ಮತ್ತು ಪರಮಾಣು ಘಟಕಗಳ ಮೇಲೆ ವಾಯುದಾಳಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ದೇಶವು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲ್​ನ ವಿವಿಧ ನಗರಗಳ ಮೇಲೆ ಹಾರಿಸಿತ್ತು. ಇದಕ್ಕೆ ಇಸ್ರೇಲ್ ಮತ್ತೆ ಪ್ರತಿದಾಳಿ ನಡೆಸುವ ಸಾಧ್ಯತೆ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ