ಆನ್ಲೈನ್ ಮೂಲಕ ರೈಲು ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ IRSTC ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಹೊಸ ಟಿಕೆಟ್ ಬುಕ್ಕಿಂಗ್(Ticket Booking) ವ್ಯವಸ್ಥೆಗಳಲ್ಲಿ ಕೊಂಚ ಬದಲಾವಣೆ ಮಾಡುವ ಮೂಲಕ ಪ್ರಯಾಣಿಕರಿಗೆ ಪ್ರತಿಕ್ರಿಯೆಯನ್ನು ಅತ್ಯಂತ ಸರಳಗೊಳಿಸಿದೆ. ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಇಮೇಲ್ ಐಡಿಯ ಜತೆಗೆ ಮೊಬೈಲ್ ಸಂಖ್ಯೆಯನ್ನು ಒಳಗೊಂಡಂತೆ ಪ್ರಕ್ರಿಯೆಯನ್ನು ರೂಪಿಸಿದೆ.
ಪರಿಶೀಲನೆಯ ಪ್ರಕ್ರಿಯೆಯ ಬಳಿಕವೇ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿಕೊಳ್ಳಲು ಸಹಾಯಕವಾಗುತ್ತದೆ. ಕೇವಲ 50ರಿಂದ 60 ಸೆಕೆಂಡ್ಗಳಲ್ಲಿ ರೈಲ್ವೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಅತ್ಯಂತ ಸರಳವಾಗಿದೆ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಕೊವಿಡ್ ಸಾಂಕ್ರಾಮಿಕದಿಂದಾಗಿ IRSTC ಈ ಪ್ರಕ್ರಿಯೆಯನ್ನು ಪರಿಚಯಿಸಿದೆ. ಈ ಕೆಳಗಿನ ಹಂತಗಳ ಮೂಲಕ ನೀವು ರೈಲು ಟಿಕೆಟ್ ಬುಕ್ಕಿಂಗ್ ಮಾಡಬಹುದು.
*ಟಿಕೆಟ್ ಬುಕ್ಕಿಂಗ್ಗಾಗಿ ಪ್ರಯಾಣಿಕರು IRSTC ಪೋರ್ಟಲ್ನಲ್ಲಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಮೂಲಕ ಖಾತೆಯನ್ನು ತೆರೆಯಬೇಕು
*ನಿಮ್ಮ ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ಬಳಿಕ ನೀವು ಸುಲಭದಲ್ಲಿ ಟಿಕೆಟ್ ಕಾಯ್ದಿರಸಬಹುದು
*ಆನ್ಲೈನ್ ವೆರಿಫಿಕೇಶನ್ ವಿಂಡೋ ತೆರೆದ ನಂತರ ವೇರೆಫಿಕೇಶನ್ಗಾಗಿ ಬಲಭಾಗದಲ್ಲಿ ಮತ್ತು ಸರಿಪಡಿಸಲು ಎಡಭಾಗದಲ್ಲಿ ಎಡಿಟ್ ಆಫ್ಷನ್ ಇದೆ
*ನೀವು ನಿಮ್ಮ ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕು ಅಂದುಕೊಂಡಿದ್ದರೆ ಎಡಭಾಗದಲ್ಲಿರುವ ಎಡಿಟ್ ಆಫ್ಷನ್ಗೆ ಹೋಗಬಹುದು
*ನೀವು ನಮೂದಿಸಿರುವ ಡಿಟೇಲ್ಸ್ಗಳು ಸರಿಯಾಗಿದೆ ಅಂದನಿಸಿದ ಬಳಿಕ ವೇರಿಫಿಕೇಶ್ ಆಫ್ಷನ್ ಬಳಸಿ. ಬಳಿಕ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ
*ಆ ಸಂಖ್ಯೆಯನ್ನು ನೀವು ರೈಲ್ವೆ ಟಿಕೆಟ್ ಆನ್ಲೈನ್ ಬುಕ್ಕಿಂಗ್ನಲ್ಲಿ ಟಿಕೆಟ್ ಕಾಯ್ದಿರಿಸಲು ನಮೂದಿಸಬೇಕು
*OTP ನಮೂದಿಸಿದ ಬಳಿಕ ನಿಮ್ಮ ಟಿಕೆಟ್ ಬುಕ್ಕಿಂಗ್ ಆಗಿರುವ ಸಂದೇಶ ನಿಮಗೆ ಇಮೇಲ್ ಮೂಲಕ ಬರುತ್ತದೆ
*ನಿಮ್ಮ ಟಿಕೆಟ್ ಬುಕ್ಕಿಂಗ್ ಪ್ರಿಂಟೌಟ್ ತೆಗೆದುಕೊಳ್ಳಬಹುದು
ಇದನ್ನೂ ಓದಿ:
Indian Railway: ವಿಶ್ವದಲ್ಲೇ ಬೃಹತ್ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯಾಗಿ ಮಾರ್ಪಡಲು ಭಾರತೀಯ ರೈಲ್ವೆಯ ಸಿದ್ಧತೆ
Indian Railways: ಭಾರತೀಯ ರೈಲ್ವೇಯಿಂದ ಅತಿ ಕಡಿಮೆ ದರಕ್ಕೆ ತಿರುಪತಿ ದರ್ಶನ
Published On - 8:35 am, Fri, 30 July 21